ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ನಿಟ್ಟೂರು ಕೋಡಿಹಳ್ಳಿ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಎನ್.ರಾಜೇಗೌಡ, ಉಪಾಧ್ಯಕ್ಷರಾಗಿ ತಾಯಮ್ಮ ಶಿವಶಂಕಚಾರಿ ಅವಿರೋಧವಾಗಿ ಆಯ್ಕೆಯಾದರು.5 ವರ್ಷಗಳ ಕಾಲ ಅವಧಿಗೆ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯಲ್ಲಿ ಎನ್.ರಾಜೇಗೌಡ ಹಾಗೂ ತಾಯಮ್ಮ ಶಿವಶಂಕರಚಾರಿ ಅವರನ್ನು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಅಧಿಕಾರಿಯಾಗಿದ್ದ ತ್ಯಾಗರಾಜ್ ಪ್ರಸಾದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.
ನಂತರ ಮಾತನಾಡಿದ ಅಧ್ಯಕ್ಷ ರಾಜೇಗೌಡ, ಡೇರಿ ಅಧ್ಯಕ್ಷನಾಗುತ್ತೇನೆ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಎಲ್ಲಾ ನಿರ್ದೇಶಕರ ಸಹಕಾರದಲ್ಲಿ ಅಧ್ಯಕ್ಷನಾಗಿದ್ದು, ಡೇರಿ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮತ್ತು ಮನ್ಮುಲ್ ನಿರ್ದೇಶಕ ಕೃಷ್ಣೇಗೌಡರ ಸಲಹೆ ಸಹಕಾರದೊಡನೆ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಧ್ಯಕ್ಷನಾಗಿ ಆಯ್ಕೆ ಮಾಡಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಸಂಘಕ್ಕೆ ಯಾವುದೇ ಚ್ಯುತಿ ಬರದಂತೆ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಭರವಸೆ ನೀಡುತ್ತೇನೆ ಎಂದು ಹೇಳಿದರು.ನಂತರ ಸಂಘದ ನಿರ್ದೇಶಕರು ಮತ್ತು ಅಭಿಮಾನಿಗಳು ರಾಜೇಗೌಡರನ್ನು ಸನ್ಮಾನಿಸಿ ಪಟಾಕಿ ಸಿಡಿಸಿ ಸಿಹಿಹಂಚಿದರು.
ಈ ವೇಳೆ ಸಂಘದ ನಿರ್ದೇಶಕರಾದ ಕೆ.ಮಂಚೇಗೌಡ, ಪ್ರಕಾಶ್, ನಿಂಗೇಗೌಡ, ಕೆ.ಸಿ.ಗೌಡ, ಸಣ್ಣಪ್ಪ, ರುಕ್ಮಂಗದಾ ಚಾರಿ, ಗೋವಿಂದರಾಜು, ಕೆಂಪಮ್ಮ ಮತ್ತು ಡೇರಿ ಕಾರ್ಯದರ್ಶಿ ಪ್ರಕಾಶ್, ಮುಖಂಡರಾದ ಚಂದ್ರಶೇಖರ, ನಂಜುಂಡೇಗೌಡ, ಕೃಷ್ಣ, ಸೇರಿದಂತೆ ಇತರರು ಇದ್ದರು.ಎಚ್.ಮಲ್ಲಿಗೆರೆ ಗ್ರಾಪಂ ಉಪಾಧ್ಯಕ್ಷರಾಗಿ ಸಂತೋಷ್ ಕುಮಾರ್ ಆಯ್ಕೆ
ಮಂಡ್ಯ: ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಪಂ ಉಪಾಧ್ಯಕ್ಷರಾಗಿ ಸಂತೋಷ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.ನೂತನ ಉಪಾಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಇದ್ದರೂ ಎಲ್ಲರ ಸಹಮತದಿಂದ ಪರಿಶಿಷ್ಟ ಜಾತಿಗೆ ಅವಕಾಶ ಮಾಡಿ ಸಂಪಹಳ್ಳಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದ ನನಗೆ ಕೊಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ಗ್ರಾಪಂ ಎಲ್ಲಾ ಸದಸ್ಯರು ಮತ್ತು ಅಧ್ಯಕ್ಷರು ಮತ್ತು ಅಧಿಕಾರಿಗಳ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಉತ್ತಮ ಆಡಳಿತ ನಡೆಸಿ, ಅಭಿವೃದ್ಧಿಗೆ ಸಹಕಾರ ಕೋರುತ್ತೇನೆ ಎಂದರು.ಈ ವೇಳೆ ಮುಖಂಡರಾದ ಸಿ.ಮಾದಪ್ಪ, ಎಂ.ಕೆ.ಜ್ಞಾನಮೂರ್ತಿ, ಎಂ.ಮಾದೇಗೌಡ, ಯೋಗಾನಂದ, ಶಿವಶಂಕರ್, ಎಸ್ ಎಸ್ ವಿನಯ್, ಎಸ್.ಸಿ. ಬಸವರಾಜು, ಎಸ್.ಕೆ.ಬಸವರಾಜ್, ಎಸ್.ಈ.ರಾಮಕೃಷ್ಣ, ಎಸ್.ವಿ.ವೆಂಕಟೇಶ್, ಎಸ್.ಅಯ್ಯಪ್ಪ, ಪಾರ್ಥಸಾರಥಿ, ಮೋಹನ್, ಜೆಡಿಎಸ್‌ನ ಕಾರ್ಯಕರ್ತರು ಹಾಜರಿದ್ದು ಅಭಿನಂದಿಸಿದರು.
;Resize=(128,128))
;Resize=(128,128))
;Resize=(128,128))