ಸಾರಾಂಶ
ಕಲ್ಕೂರ ಪ್ರತಿಷ್ಠಾನ ವತಿಯಿಂದ ನಗರದ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ನಾ.ಡಿಸೋಜ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಪರಿಸರ, ವೈಚಾರಿಕ ಸಾಹಿತ್ಯ, ವಿಡಂಬನೆ ಅಲ್ಲದೆ ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಮಹತ್ತರ ಸಾಧನೆಗೈಯುವ ಮೂಲಕ ಪರಮೋಚ್ಚ ಸಾಹಿತಿ ಎನಿಸಿಕೊಂಡವರು ನಾ.ಡಿಸೋಜ ಎಂದು ಹಿರಿಯ ಸಾಹಿತಿ ಡಾ.ಬಿ.ಎ. ವಿವೇಕ ರೈ ಹೇಳಿದ್ದಾರೆ.ಕಲ್ಕೂರ ಪ್ರತಿಷ್ಠಾನ ವತಿಯಿಂದ ನಗರದ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ನಾ.ಡಿಸೋಜ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನಾ. ಡಿಸೋಜ ಅವರೊಂದಿಗಿನ ತಮ್ಮ ನಿಕಟ ಸಂಬಂಧವನ್ನು ನೆನಪಿಸಿಕೊಂಡರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಡಾ.ಎಂ.ಬಿ. ಪುರಾಣಿಕ್, ಎಸ್.ವಿ. ಪ್ರಭಾಕರ ಶರ್ಮ, ಪಿ.ಬಿ. ಹರೀಶ್ ರೈ, ಡಾ.ಎಂ. ಪ್ರಭಾಕರ ಜೋಶಿ, ಎಚ್. ಶಶಿಧರ ಶೆಟ್ಟಿ, ಸುಧಾಕರ ರಾವ್ ಪೇಜಾವರ, ಟಿ. ಸುಬ್ರಹ್ಮಣ್ಯ ರಾವ್, ಚಂದ್ರಶೇಖರ ಮಯ್ಯ, ಕೆ. ತಾರಾನಾಥ ಹೊಳ್ಳ., ಪ್ರಭಾಕರ ರಾವ್ ಪೇಜಾವರ, ಶೇಷಾದ್ರಿ ಪಿ. ಭಟ್, ಪ್ರಕಾಶ್ ನಾಯಕ್, ಸಿ. ರಮೇಶ ಆಚಾರ್ಯ, ಭುವನಾಭಿರಾಮ ಉಡುಪ, ಕೃಷ್ಣಮೂರ್ತಿ, ಜೆ.ಕೆ. ಭಟ್ ಸೇರಾಜೆ, ತಮ್ಮ ಲಕ್ಷ್ಮಣ, ಪಿ.ವಿ. ಪರಮೇಶ್, ಸುಮಾ ಪ್ರಸಾದ್, ಪೂರ್ಣಿಮಾ ರಾವ್ ಪೇಜಾವರ, ತೋನ್ಸೆ ಪುಷ್ಕಳ ಕುಮಾರ್, ಡಾ. ಪ್ರಸನ್ನ ರೈ ಕೆ., ದಯಾನಂದ ಕಟೀಲ್ ಇದ್ದರು.