ರಾಯಚೂರು ಜಿಲ್ಲಾಧಿಕಾರಿ ಪೂವಿತಾ ಎಸ್. ಅವರ ವಿರುದ್ಧ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರು ಏಕವಚನದಲ್ಲಿ ಅವಹೇಳನ ಮಾಡಿ ಅವಮಾನಿಸಿ ದ್ದಾರೆ. ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಬಲಗೈ ಸಮುದಾಯಗಳ ಒಕ್ಕೂಟದ ಅಧ್ಯಕ್ಷೆ ಕೆ. ಚಾಮುಂಡೇಶ್ವರಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ರಾಯಚೂರು ಜಿಲ್ಲಾಧಿಕಾರಿ ಪೂವಿತಾ ಎಸ್. ಅವರ ವಿರುದ್ಧ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರು ಏಕವಚನದಲ್ಲಿ ಅವಹೇಳನ ಮಾಡಿ ಅವಮಾನಿಸಿ ದ್ದಾರೆ. ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಬಲಗೈ ಸಮುದಾಯಗಳ ಒಕ್ಕೂಟದ ಅಧ್ಯಕ್ಷೆ ಕೆ. ಚಾಮುಂಡೇಶ್ವರಿ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.3ರಂದು ನಗರದ ಗಾಂಧಿ ವೃತ್ತದಲ್ಲಿ ನಡೆದ ರಸ್ತೆ ತಡೆ ಚಳವಳಿಯಲ್ಲಿ ವೆಂಕಟರಾವ್ ನಾಡಗೌಡ ಅವರು ಮಹಿಳಾ ಜಿಲ್ಲಾಧಿಕಾರಿ ಪೂವಿತಾ ಅವರನ್ನು ಆಕೆ, ಇಕೆ, ಮಂದ ಬಂದ ಹೆಣ್ಣು ಎಂದು ನಿಂದಿಸಿ ಅವಮಾನಿಸಿದ್ದಾರೆ. ಎಷ್ಟು ದಿನಗಳ ಕಾಲ ಕರ್ತವ್ಯ ನಿರ್ವಹಿಸುತ್ತಾಳೋ ನೋಡೋಣ ಎಂದು ಬೆದರಿಕೆ ಹಾಕಿದ್ದಾರೆ. ಮಹಿಳಾ ವಿರೋಧಿಗಳಂತೆ ನಾಡಗೌಡರು ವರ್ತಿಸಿದ್ದಾರೆ ಎಂದು ದೂರಿದರು. ಜವಳಗೇರಾ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರ ಸಾವಿರಾರು ಎಕರೆ ಭೂಮಿಯನ್ನು ನಾಡಗೌಡರ ಕುಟುಂಬ ಕಬಳಿಕೆ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ವಿವಿಧ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಿದ್ದರೂ ರೈತರಿಗೆ ಭೂಮಿಯನ್ನು ವಾಪಸ್ ನೀಡುತ್ತಿಲ್ಲ. ಬದಲಿಗೆ ರೈತಪರ ಎಂದು ವೆಂಕಟರಾವ್ ನಾಡಗೌಡರು ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕಿ ಹುಚ್ಚಮ್ಮ ಬಳಗಾನೂರು, ಮಹಿಳಾ ಮುಖಂಡರಾದ ಸಂಗೀತಾ, ರತ್ನಾಬಾಯಿ, ಲಲಿತಾ ಬಾಯಿ ಇದ್ದರು.

-----

ಫೋಟೋ:12ಕೆಪಿಎಸ್ಎನ್ಡಿ1:

ಸಿಂಧನೂರಿನ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಲಗೈ ಸಮುದಾಯಗಳ ಒಕ್ಕೂಟದ ಅಧ್ಯಕ್ಷೆ ಕೆ. ಚಾಮುಂಡೇಶ್ವರಿ ಮಾತನಾಡಿದರು.