ಸಾರಾಂಶ
ಹುಟ್ಟು ಸಾವಿನ ನಡುವೆ ಮನುಷ್ಯ ಮಾಡುವ ಒಳ್ಳೆಯ ಕೆಲಸ ಕಾರ್ಯಗಳಿಂದ ಬೌದ್ಧಿಕವಾಗಿ ಮರೆಯಾದ ಬಳಿಕವೂ ಸಮಾಜ ಸ್ಮರಿಸುವಂತಿರುತ್ತದೆ ಅಂತಹ ಆದರ್ಶಮಯ ಸಾರ್ಥಕ ಬದುಕು ನಾಡಪ್ರಭು ಕೆಂಪೇಗೌಡರದ್ದಾಗಿದೆ ಎಂದು ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು. ಕೆಂಪೇಗೌಡರ ದೂರದೃಷ್ಟಿಯ ಸಂಕಲ್ಪದೊಂದಿಗೆ ನಿರ್ಮಾಣಗೊಂಡ ಬೆಂಗಳೂರು ಇಂದು ವಿಶ್ವ ಖ್ಯಾತಿಯಾಗಿ ಪಾತ್ರವಾಗಿರುವುದಲ್ಲದೆ ಕೋಟ್ಯಂತರ ಜನತೆಗೆ ಆಶ್ರಯ ನೀಡಿದ್ದು ಇಂದು ಕೆಂಪೇಗೌಡರ ಸಮ ಮತ್ತು ದೂರ ದೃಷ್ಟಿಕೋನದ ಫಲವನ್ನು ನಾವೆಲ್ಲ ಪಡೆಯುತ್ತಿದ್ದೇವೆ ಎಂದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಹುಟ್ಟು ಸಾವಿನ ನಡುವೆ ಮನುಷ್ಯ ಮಾಡುವ ಒಳ್ಳೆಯ ಕೆಲಸ ಕಾರ್ಯಗಳಿಂದ ಬೌದ್ಧಿಕವಾಗಿ ಮರೆಯಾದ ಬಳಿಕವೂ ಸಮಾಜ ಸ್ಮರಿಸುವಂತಿರುತ್ತದೆ ಅಂತಹ ಆದರ್ಶಮಯ ಸಾರ್ಥಕ ಬದುಕು ನಾಡಪ್ರಭು ಕೆಂಪೇಗೌಡರದ್ದಾಗಿದೆ ಎಂದು ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಆದಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಂಪೇಗೌಡರ ದೂರದೃಷ್ಟಿಯ ಸಂಕಲ್ಪದೊಂದಿಗೆ ನಿರ್ಮಾಣಗೊಂಡ ಬೆಂಗಳೂರು ಇಂದು ವಿಶ್ವ ಖ್ಯಾತಿಯಾಗಿ ಪಾತ್ರವಾಗಿರುವುದಲ್ಲದೆ ಕೋಟ್ಯಂತರ ಜನತೆಗೆ ಆಶ್ರಯ ನೀಡಿದ್ದು ಇಂದು ಕೆಂಪೇಗೌಡರ ಸಮ ಮತ್ತು ದೂರ ದೃಷ್ಟಿಕೋನದ ಫಲವನ್ನು ನಾವೆಲ್ಲ ಪಡೆಯುತ್ತಿದ್ದೇವೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಶ್ ಗೌಡ ಮಾತನಾಡಿ ಕೆಂಪೇಗೌಡರು ಪ್ರಸ್ತುತ ಕಾಲಮಾನ ಹಾಗೂ ಭವಿಷ್ಯದ ಬೆಂಗಳೂರಿನ ಸ್ಪಷ್ಟ ಕಲ್ಪನೆಯೊಂದಿಗೆ ರೂಪಗೊಳ್ಳಲು ಆರಂಭಿಸಿದ ನಗರವು ಚಿಕ್ಕಪೇಟೆ ದೊಡ್ಡಪೇಟೆ ಅಕ್ಕಿಪೇಟೆ ಬಳೆಪೇಟೆ, ಹೀಗೆ ಹಲವು ಪೇಟೆಗಳ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡಲು ಹಾಗೂ ಕೊಳ್ಳಲು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರು. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಮಹಾನಗರ ವಿಶ್ವ ಭೂಪಟದಲ್ಲಿ ಮಿನುಗುವ ಒಂದು ಮಾಯಾ ನಗರಿ ಎಂದು ಬಣ್ಣಿಸಿದರು.ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು ಮಾತನಾಡಿ ಆಧುನಿಕತೆಯ ಜೀವನಶೈಲಿಗೆ ಮನುಷ್ಯ ಒಗ್ಗಿಕೊಳ್ಳುತ್ತಿದ್ದ ಕಾಲಮಾನದಲ್ಲಿ ಕೆಂಪೇಗೌಡರ ದೂರ ದೃಷ್ಟಿಕೋನದೊಂದಿಗೆ ತನ್ನ ಬೆಳವಣಿಗೆ ಆರಂಭಿಸಿದ ಬೆಂಗಳೂರು ವಾಣಿಜ್ಯ ನಗರ,ಸಿಲಿಕಾನ್ ಸಿಟಿ,ಉದ್ಯಾನಗರ,ಬೃಹತ್ ಬೆಂಗಳೂರು, ಹೀಗೆ ಹಲವು ಹೆಸರುಗಳಿಂದ ಇಂದು ಪ್ರಸಿದ್ಧಿ ಆಗಿರುವುದರ ಹಿಂದೆ ಕೆಂಪೇಗೌಡರು ಕಾಣುತ್ತಾರೆ ಎಂದು ತಮ್ಮ ನುಡಿ ನಮನ ಸಲ್ಲಿಸಿದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಹೊಸೂರು ಗಂಗಾಧರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ರಘು. ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.