ನಾಡೋಜ ಡಾ.ಜಿ. ಶಂಕರ್ ಅವರ 71 ನೇ ಹುಟ್ಟುಹಬ್ಬದ ಪ್ರಯುಕ್ತ ಉಡುಪಿ, ದಕ್ಷಿಣ ಕನ್ನಡ ಹಾಗೂ ಇತರೆ ಜಿಲ್ಲೆಗಳಲ್ಲಿರುವ ಆಯ್ದ ಆಸ್ಪತ್ರೆಗಳ ಕ್ಯಾನ್ಸರ್, ಕಿಡ್ನಿ ಹಾಗೂ ಹೃದ್ರೋಗಿಗಳಿಗೆ, ವಿಶೇಷ ಶಾಲೆಗಳಿಗೆ, ಹಿರಿಯ ಹಾಗೂ ನುರಿತ ಯಕ್ಷಗಾನ ಕಲಾವಿದರಿಗೆ, ಸಾರ್ವಜನಿಕ ರುದ್ರಭೂಮಿಗಳಲ್ಲಿ ಶವಸಂಸ್ಕಾರ ಕೆಲಸ ಕಾರ್ಯಗಳಿಗೆ ತೊಡಗಿರುವ ಬಂಧುಗಳಿಗೆ ಸಹಾಯಧನ ವಿತರಿಸಲಾಯಿತು.
ಉಡುಪಿ: ನಾಡೋಜ ಡಾ.ಜಿ. ಶಂಕರ್ ಅವರ 71 ನೇ ಹುಟ್ಟುಹಬ್ಬದ ಪ್ರಯುಕ್ತ ಉಡುಪಿ, ದಕ್ಷಿಣ ಕನ್ನಡ ಹಾಗೂ ಇತರೆ ಜಿಲ್ಲೆಗಳಲ್ಲಿರುವ ಆಯ್ದ ಆಸ್ಪತ್ರೆಗಳ ಕ್ಯಾನ್ಸರ್, ಕಿಡ್ನಿ ಹಾಗೂ ಹೃದ್ರೋಗಿಗಳಿಗೆ, ವಿಶೇಷ ಶಾಲೆಗಳಿಗೆ, ಹಿರಿಯ ಹಾಗೂ ನುರಿತ ಯಕ್ಷಗಾನ ಕಲಾವಿದರಿಗೆ, ಸಾರ್ವಜನಿಕ ರುದ್ರಭೂಮಿಗಳಲ್ಲಿ ಶವಸಂಸ್ಕಾರ ಕೆಲಸ ಕಾರ್ಯಗಳಿಗೆ ತೊಡಗಿರುವ ಬಂಧುಗಳಿಗೆ ಸಹಾಯಧನ ವಿತರಿಸಲಾಯಿತು.
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ 145 ಕ್ಯಾನ್ಸರ್ ಹಾಗೂ 28 ಕಿಡ್ನಿ ರೋಗಿ ಮತ್ತು ಹೃದ್ರೋಗಿಗಳಿಗೆ, ಉಡುಪಿ ಆದರ್ಶ ಆಸ್ಪತ್ರೆಯ 17 ಕ್ಯಾನ್ಸರ್ ಹಾಗೂ 29 ಕಿಡ್ನಿ, ಗಾಂಧಿ ಆಸ್ಪತ್ರೆಯ 6 ಕ್ಯಾನ್ಸರ್, ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಯ 53 ಕ್ಯಾನ್ಸರ್ ಹಾಗೂ 46 ಕಿಡ್ನಿ, ಜ್ಯೋತಿ ಕೆಎಂಸಿ ಆಸ್ಪತ್ರೆಯ 17 ಕ್ಯಾನ್ಸರ್ ಹಾಗೂ 50 ಕಿಡ್ನಿ, ಫಾದರ್ ಮುಲ್ಲರ್ ಆಸ್ಪತ್ರೆಯ 76 ಕ್ಯಾನ್ಸರ್ ಹಾಗೂ 19 ಕಿಡ್ನಿ, ವೆನ್ಲಾಕ್ ಆಸ್ಪತ್ರೆ 45 ಕ್ಯಾನ್ಸರ್ ಹಾಗೂ 35 ಕಿಡ್ನಿ, ಎಂಐಒ ಆಸ್ಪತ್ರೆಯ 24 ಕ್ಯಾನ್ಸರ್, ಸರ್ಕಾರಿ ಆಸ್ಪತ್ರೆಯ 11 ಕ್ಯಾನ್ಸರ್ ಹಾಗೂ 2 ಕಿಡ್ನಿ, ಕುಂದಾಪುರ ಸರಕಾರಿ ಆಸ್ಪತ್ರೆಯ 11 ಕ್ಯಾನ್ಸರ್ ಹಾಗೂ 5 ಕಿಡ್ನಿ, ಬ್ರಹ್ಮಾವರ ಸರಕಾರಿ ಆಸ್ಪತ್ರೆಯ 10 ಕಿಡ್ನಿ, ಇತರೆ 7 ಕ್ಯಾನ್ಸರ್ ಸೇರಿದಂತೆ ಒಟ್ಟು 412 ಕ್ಯಾನ್ಸರ್ ರೋಗಿಗಳು ಹಾಗೂ 224 ಕಿಡ್ನಿ ರೋಗಿಗಳಿಗೆ ಸಹಾಯಹಸ್ತವನ್ನು ನೀಡಲಾಯಿತು. ಉಭಯ ಜಿಲ್ಲೆಗಳ 89 ಹಿರಿಯ ಯಕ್ಷಗಾನ ಕಲಾವಿದರಿಗೆ, 31 ವಿಶೇಷ ಶಾಲೆಗಳಿಗೆ ಹಾಗೂ ರುದ್ರಭೂಮಿಯಲ್ಲಿ ದಿನಂಪ್ರತಿ ಶವ ಸಂಸ್ಕಾರದಲ್ಲಿ ತೊಡಗಿರುವ ಬಂಧುಗಳಿಗೆ ಸಹಾಯಹಸ್ತವನ್ನು ನೀಡಲಾಗಿದೆ. ಕ್ಯಾನ್ಸರ್, ಕಿಡ್ನಿ ರೋಗಿಗಳಿಗೆ, ವಿಶೇಷ ಶಾಲೆ ಹಾಗೂ ರುದ್ರಭೂಮಿ ನೌಕರರಿಗೆ ತಲಾ 25,000 ದಂತೆ ಹಾಗೂ ಯಕ್ಷಗಾನ ಕಲಾವಿದರಿಗೆ ತಲಾ 10 ಸಾವಿರ ರೂ.ದಂತೆ ಅವರವರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ನೇರ ಜಮೆ ಮಾಡಲಾಗಿದೆ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ತಿಳಿಸಿದೆ.