ತುಮಕೂರು: ನಗರದ ಟೌನ್‌ಹಾಲ್ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಬಳಿ, ಶ್ರೀಲಕ್ಷ್ಮಿದೇವಿ ಟ್ರಸ್ಟ್, ಜಯಪುರ ಬಡಾವಣೆಯ ನಾಗರಿಕರು 25 ರಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ನಡೆಯುವ ನ್ಯಾ.ನಾಗಮೋಹನ್‌ದಾಸ್ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಯುವ ವಕೀಲರು ಹಾಗೂ ಛಲವಾದಿ ಮಹಾಸಭಾರಾಜ್ಯ ಸಂಘಟನಾ ಸಂಚಾಲಕ ಟಿ.ಆರ್.ನಾಗೇಶ್‌ ಅವರ ನೇತೃತ್ವದಲ್ಲಿ ಜಯಪುರ ಬಡಾವಣೆಯ ಯುವಕರು ಪರಸ್ವರ ಕೈ ಹಿಡಿದು, ಸರಕಾರದ ನಡೆಯನ್ನು ಖಂಡಿಸಿ, ನ್ಯಾ.ನಾಗಮೋಹನ್‌ದಾಸ್ ವರದಿಯನ್ನುತಿರಸ್ಕರಿಸುವಂತೆ ಒತ್ತಾಯಿಸಿ, ಘೋಷಣೆಕೂಗಿದರು.ಈ ವೇಳೆ ಮಾತನಾಡಿದ ವಕೀಲ ಟಿ.ಆರ್.ನಾಗೇಶ್, ಒಳಮೀಸಲಾತಿಯೂ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಸಮಾನವಾಗಿ ಹಂಚಿಕೆಯಾಗಬೇಕಾದರೆ ಮೀಸಲಾತಿಯ ಪ್ರಮಾಣ ಹೆಚ್ಚಾಗಬೇಕು.ಸರ್ಕಾರ ಕೇವಲ 1 ಜಾತಿಯ ಒತ್ತಡಕ್ಕೆ ಮಣಿದು ಶೇ 15 ರ ಮೀಸಲಾತಿಯಲ್ಲಿಯೇ ಒಳಮೀಸಲಾತಿ ಜಾರಿಗೊಳಿಸಲು ಹೊರಟಿರುವುದು ಸರಿಯಾದ ಕ್ರಮವಲ್ಲ ಎಂದರು.

ಈ ವೇಳೆ ಶ್ರೀಲಕ್ಷ್ಮಿದೇವಿ ಟ್ರಸ್ಟ್, ಜಯಪುರದ ಅಧ್ಯಕ್ಷ ಟಿ.ಸಿ.ವಿಜಯಕುಮಾರ್, ಉಪಾಧ್ಯಕ್ಷ ಶಾಂತಕುಮಾರ್, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಸಿ.ಗುರುಶಂಕರ್, ಮಹದೇವ್, ರುದ್ರೇಶ್, ಗಿರೀಶ್, ಡಿ.ರಾಜು, ಲೋಕೇಶ್, ಕೃಷ್ಣಮೂರ್ತಿ, ಶಿವಶಂಕರ್, ರಾಜಣ್ಣ, ಗಿರೀಶ್, ತ್ರಿಲೋಕ್ ಮತ್ತಿತರರು ಪಾಲ್ಗೊಂಡಿದ್ದರು.