ಸಾರಾಂಶ
ಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ಪಟ್ಟಣದ ವಿರಕ್ತಮಠದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಆಜೀವ ಸದಸ್ಯರ ಸಭೆಯಲ್ಲಿ ತಾಲೂಕಾ ಕಸಾಪ ನೂತನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಸಾಹಿತಿ, ಶಿಕ್ಷಕ ನಾಗಪ್ಪ ಬೆಂತೂರ ಅವರನ್ನು ಆಯ್ಕೆ ಮಾಡಲಾಯಿತು.ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಅಧ್ಯಕ್ಷ ಸ್ಥಾನಕ್ಕೆ ಒಟ್ಟು ೫ ಜನ ಆಕಾಂಕ್ಷಿಗಳಾಗಿದ್ದರು. ನಂತರ ಐವರಲ್ಲಿ ಸಾಹಿತಿ ನಾಗಪ್ಪ ಬೆಂತೂರ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದ ಹಿನ್ನೆಲೆ ಅವರನ್ನೇ ಅಧ್ಯಕ್ಷರೆಂದು ಘೋಷಿಸಲಾಯಿತು.
ಸಭೆಯ ಸಮ್ಮುಖ ವಹಿಸಿದ್ದ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ನೂತನ ಅಧ್ಯಕ್ಷರನ್ನು ಆಶೀರ್ವದಿಸಿ ಮಾತನಾಡಿ, ಯುವ ಸಮೂಹದೊಂದಿಗೆ ಸಾಹಿತ್ಯ ಕಟ್ಟುವಲ್ಲಿ ತೊಡಗಿಸಿಕೊಳ್ಳಿ, ತಾಲೂಕಿನಲ್ಲಿ ಕಸಾಪ ಸದಸ್ಯತ್ವ ಹೆಚ್ಚು ಮಾಡಿಕೊಳ್ಳುವ ಮೂಲಕ ಸಂಘಟಿತರಾಗಿ ಬರಹಗಾರರನ್ನು ಬಳಸಿಕೊಂಡು ಎಲ್ಲರನ್ನು ಒಳಗೊಂಡ ಪರಿಷತ್ ತೇರು ನಡೆಯಲಿ ಎಂದು ಕಿವಿಮಾತು ಹೇಳಿದರು.ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಸಾಹಿತ್ಯ ಕಟ್ಟುವ ಕೆಲಸ ನಿಲ್ಲಬಾರದು. ನೂತನ ಅಧ್ಯಕ್ಷರು ಸಾಹಿತ್ಯಾಸಕ್ತರ ಬಳಗ ಕಟ್ಟಿಕೊಂಡು ಸಾಹಿತ್ಯವನ್ನು ತಾಲೂಕಿನಲ್ಲಿ ಕಟ್ಟುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರನ್ನ ಅಜೀವ ಸದಸ್ಯರು, ಕನ್ನಡಾಭಿಮಾನಿಗಳು, ರೈತ ಸಂಘದ ಮುಖಂಡರು ಹಾಗೂ ವಿವಿಧ ಮುಖಂಡರು ಸನ್ಮಾನಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಆರ್.ಎಸ್. ದೊಡ್ಡಗೌಡರ, ಸಾಹಿತಿ ಶಿವಾನಂದ ಮ್ಯಾಗೇರಿ, ನಿಕಟಪೂರ್ವ ಅಧ್ಯಕ್ಷ ನಾಗರಾಜ ದ್ಯಾಮನಕೊಪ್ಪ, ಬಂಕಾಪುರ ಹೋಬಳಿ ಘಟಕದ ಅದ್ಯಕ್ಷ ಎ.ಕೆ. ಅದವಾನಿಮಠ, ಹಿರಿಯರಾದ ಸಿ.ವಿ. ಮತ್ತಿಗಟ್ಟಿ, ಟಿ.ವಿ. ಸುರಗೀಮಠ, ಡಾ. ಆರ್.ಎಸ್. ಅರಳೆಲೆಮಠ, ಕರವೇ ತಾಲೂಕಾ ಅಧ್ಯಕ್ಷ ಸಂತೋಷ ಪಾಟೀಲ, ಮಾರುತಿ ಶಿಡ್ಲಾಪೂರ, ಜಯಣ್ಣ ಹೆಸರೂರ ಸೇರಿದಂತೆ ಅಜೀವ ಸದಸ್ಯರು, ಕನ್ನಡಾಭಿಮಾನಿಗಳು, ರೈತ ಸಂಘದ ಮುಖಂಡರು ಹಾಗೂ ವಿವಿಧ ಮುಖಂಡರು ಇದ್ದರು.