ಶ್ರದ್ಧಾಭಕ್ತಿಯಿಂದ ನಾಗರಪಂಚಮಿ ಆಚರಣೆ

| Published : Jul 30 2025, 12:45 AM IST

ಶ್ರದ್ಧಾಭಕ್ತಿಯಿಂದ ನಾಗರಪಂಚಮಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ನಾಗರಪಂಚಮಿ ಪ್ರಯುಕ್ತ ಚಾಮುಂಡಿಪುರದಲ್ಲಿರುವ ಶ್ರೀನಾಗಮ್ಮ ಮತು ನಾಗಲಕ್ಷ್ಮೀ ಅಮ್ಮನವರ ದೇವಾಲಯ, ಕೈಲಂಚಾ ಹೋಬಳಿಯ ಚಿಕ್ಕೇನಹಳ್ಳಿ ಬಳಿಯಿರುವ ನಾಗಪ್ಪ ದೇವಾಲಯ ಸೇರಿದಂತೆ ವಿವಿಧೆಡೆ ಮಹಿಳೆಯರು ನಾಗಪ್ಪನಿಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು.

ರಾಮನಗರ: ನಾಗರಪಂಚಮಿ ಪ್ರಯುಕ್ತ ಚಾಮುಂಡಿಪುರದಲ್ಲಿರುವ ಶ್ರೀನಾಗಮ್ಮ ಮತು ನಾಗಲಕ್ಷ್ಮೀ ಅಮ್ಮನವರ ದೇವಾಲಯ, ಕೈಲಂಚಾ ಹೋಬಳಿಯ ಚಿಕ್ಕೇನಹಳ್ಳಿ ಬಳಿಯಿರುವ ನಾಗಪ್ಪ ದೇವಾಲಯ ಸೇರಿದಂತೆ ವಿವಿಧೆಡೆ ಮಹಿಳೆಯರು ನಾಗಪ್ಪನಿಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು.

ನಗರ ಪ್ರದೇಶ, ಗ್ರಾಮಾಂತರ ಪ್ರದೇಶದೆಲ್ಲೆಡೆಗಳಲ್ಲಿ ಮಂಗಳವಾರದ₹ದು ನಾಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಅರಿಶಿನ, ಕುಂಕುಮ, ಹಾವು, ಹಣ್ಣು, ನೈವೇದ್ಯವನ್ನು ಅರ್ಪಿಸಿ, ಗೆಜ್ಜೆ ವಸ್ತ್ರಗಳಿಂದ ನಾಗರಕಲ್ಲನ್ನು ಅಲಂಕರಿಸಿ, ತನುವನ್ನು ಅರ್ಪಿಸುತ್ತಿದ್ದದ್ದು ಕಂಡು ಬಂದಿತು. ಈ ದಿನ ತನು ಅರ್ಪಿಸುವುದು ತುಂಬಾನೇ ಮಹತ್ವದ್ದಾಗಿದೆ.

ನಾಗರ ಪಂಚಮಿ ಹಬ್ಬವು ಹಿಂದೂ ಧರ್ಮದೊಂದಿಗೆ ವಿಶೇಷವಾದ ನಂಬಿಕೆಯನ್ನು ಹೊಂದಿದ ಹಬ್ಬವಾಗಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನದಂದು ನಾಗರಪಂಚಮಿ ಹಬ್ಬವನ್ನು ಎಲ್ಲೆಡೆ ಆಚರಿಸ ಲಾಗುತ್ತದೆ. ಈ ದಿನ ನಾಗದೇವರನ್ನು ಪೂಜಿಸುವುದರಿಂದ ಕಾಳ ಸರ್ಪ ದೋಷ ನಿವಾರಣೆಯಾಗುವುದು. ಜೊತೆಗೆ ಭಯವು ದೂರಾಗುವುದು ಎಂಬ ನಂಬಿಕೆ ಭಕ್ತರಲ್ಲಿದ್ದು ನಾಗಮೂರ್ತಿಗಳಿಗೆ ಹಾಲನ್ನು ಅರ್ಪಿಸಿ, ಪೂಜಿಸಿ ಭಕ್ತಿಯನ್ನು ಸಮರ್ಪಿಸಿದರು.

ನಗರಸಭೆ ವ್ಯಾಪ್ತಿಯ ಒಂದನೇ ವಾರ್ಡಿನ ಚಾಮುಂಡಿಪುರದಲ್ಲಿರುವ ಶ್ರೀನಾಗಮ್ಮ ಮತು ನಾಗಲಕ್ಷ್ಮೀ ಅಮ್ಮನವರ ದೇವಾಲಯದಲ್ಲಿ ಮಂಗಳವಾರ ಮಹಿಳೆಯರು ನಾಗದೇವರನ್ನು ಪೂಜಿಸಿ, ನಾಗ ದೇವರಿಗೆ ಹಾಲಿನ ನೈವೇದ್ಯವನ್ನು ಅರ್ಪಿಸಿ ಭಕ್ತಿಪರಾಕಾಷ್ಟೆ ಮೆರೆದರು. ನಾಗಗಳ ಪೂಜೆಯನ್ನು ಮಾಡುವುದರಿಂದ ಸರ್ಪಭಯ ಉಳಿಯುವುದಿಲ್ಲ ಮತ್ತು ವಿಷಬಾಧೆಯ ಸಂಕಟದಿಂದ ತಪ್ಪಿಸಿಕೊಳ್ಳಬಹುದು ಎಂಬುದು ಭಕ್ತರ ಬಲವಾದ ನಂಬಿಕೆಯಿಂದ ಬೆಳಿಗ್ಗೆಯಿಂದಲೇ ಭಕ್ತರು ದರ್ಶನ ಪಡೆದರು. ನಾಗಪಂಚಮಿ ಪ್ರಯುಕ್ತ ದೇವಾಲಯದ ಆವರಣದಲ್ಲಿ ಆಗಮಿಸಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಸಹ ಏರ್ಪಡಿಸಲಾಗಿತ್ತು.

ಈ ವೇಳೆ ದೇವಾಲಯದ ಪ್ರಧಾನ ಅರ್ಚಕ ನವೀನ್ ಮಾತನಾಡಿ, ಇಲ್ಲಿ ಪ್ರತಿಷ್ಟಾಪಿಸಿರುವ ನಾಗದೇವರಿಗೆ ಅರಿಶಿನ, ಕುಂಕುಮ, ಅಕ್ಕಿ ಮತ್ತು ವಿವಿಧ ಬಗೆಯ ಹೂವುಗಳಿಂದ ಪೂಜಿಸುವುದು ಶ್ರೇಷ್ಠ ಎನಿಸಿದೆ. ಇದರ ನಂತರ ಹಸಿ ಹಾಲು, ತುಪ್ಪ - ಬೆಣ್ಣೆಯನ್ನು ದೇವರಿಗೆ ಅರ್ಪಿಸಿ ಪೂಜಿಸಲಾಗುವುದು ಈ ದೇವಾಲಯದ ವಿಶೇಷವಾಗಿದೆ. ಅಮ್ಮನವರ ಮುತ್ತಿನ ಪಲ್ಲಕ್ಕಿ ಉತ್ಸವ ರಾಜಬೀದಿಗಳಲ್ಲಿ ಮೆರವಣಿಗೆ ಇರುತ್ತದೆ ಹಾಗೂ ಪ್ರತಿ ತಿಂಗಳು ಷಷ್ಟಿ ಪ್ರಯುಕ್ತ ನಾಗಮ್ಮ ದೇವಾಲಯದಲ್ಲಿ ಹೋಮಹವನ ಕಾರ್ಯಗಳು ಯಶಸ್ವಿಯಾಗಿ ನಡೆಯುವುದರ ಜೊತೆಗೆ ತೀರ್ಥ ಪ್ರಸಾದ ಅನ್ನದಾನ ವ್ಯವಸ್ಥೆ ಸಹ ಮಾಡಲಾಗುತ್ತಿದೆ ಎಂದು ಹೇಳಿದರು.29ಕೆಆರ್ ಎಂಎನ್ 6,7.ಜೆಪಿಜಿ

ನಾಗ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿರುವುದು.