ಚಿಕ್ಕಮಗಳೂರು ವರ್ತಕರ ಸಂಘಕ್ಕೆ ನಾಗರಾಜ್‌ ಅಧ್ಯಕ್ಷ

| Published : Apr 06 2025, 01:48 AM IST

ಸಾರಾಂಶ

ಚಿಕ್ಕಮಗಳೂರು: ನಗರದ ಎಪಿಎಂಸಿ ಆವರಣದಲ್ಲಿರುವ ಚಿಕ್ಕಮಗಳೂರು ವರ್ತಕರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎಂ.ಎಸ್.ನಾಗರಾಜ್ ಶನಿವಾರ ಅವಿರೋಧವಾಗಿ ಆಯ್ಕೆಯಾದರು.

ಚಿಕ್ಕಮಗಳೂರು: ನಗರದ ಎಪಿಎಂಸಿ ಆವರಣದಲ್ಲಿರುವ ಚಿಕ್ಕಮಗಳೂರು ವರ್ತಕರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎಂ.ಎಸ್.ನಾಗರಾಜ್ ಶನಿವಾರ ಅವಿರೋಧವಾಗಿ ಆಯ್ಕೆಯಾದರು.ಬಳಿಕ ಮಾತನಾಡಿದ ಎಂ.ಎಸ್.ನಾಗರಾಜ್ ರೈತರ ತರಕಾರಿ ಬೆಳೆಗಳಿಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸುವುದು ಹಾಗೂ ರೈತರ ಬೆಳೆಗೆ ಬೆಂಬಲ ಬೆಲೆ ದೊರಕಿಸುವುದೇ ಸಂಘದ ಮೂಲಧ್ಯೇಯ ಎಂದು ತಿಳಿಸಿದರು.ಎಪಿಎಂಸಿ ಆವರಣಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಂಘದಿಂದ ಸ್ವಂತ ಟ್ರ್ಯಾಕ್ಟರ್ ಟ್ರಾಲಿ ಖರೀದಿಸಿ ಸ್ವಚ್ಛತೆ ಕೈಗೊಂಡಿದೆ. ದೂರದ ಗ್ರಾಮಗಳಿಂದ ಬರುವಂಥ ರೈತರಿಗೆ ತಂಗಲು ವಸತಿಗೃಹ ನಿರ್ಮಿಸುವ ಉದ್ದೇಶಿದ್ದು ಸದ್ಯದಲ್ಲೇ ಆ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.ಪ್ರಸ್ತುತ ಸಂಘದಿಂದ ಆಶಾಕಿರಣ ಶಾಲೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ, ಬಡ ರೈತರಿಗೆ ಆರ್ಥಿಕ ಸಹಾಯಧನ, ರಾಜ್ಯೋತ್ಸವ ಸೇರಿದಂತೆ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಘದಲ್ಲಿ ಈಗಾಗಲೇ ೧೫೦ಕ್ಕೂ ಹೆಚ್ಚು ಸದಸ್ಯರ ಬಲವಿದ್ದು ಸರ್ವಸದಸ್ಯರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.ನಿಕಟಪೂರ್ವ ಅಧ್ಯಕ್ಷ ಎಂ.ಕೆ.ವೇದಾನಂದಮೂರ್ತಿ ಮಾತನಾಡಿ ರೈತರಿಕೋಸ್ಕರ ಸ್ಥಾಪಿತವಾದ ಸಂಘ ಅಭಿವೃದ್ಧಿಯತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ನೂತನ ಅಧ್ಯಕ್ಷರು ಇನ್ನಷ್ಟು ಹೆಚ್ಚಿನ ಜವಾಬ್ದಾರಿ ವಹಿಸಿ ರೈತರ ಏಳಿಗೆಗೆ ದುಡಿಯು ವಂತಾಗಲೀ ಎಂದು ಆಶಿಸಿದರು.ಈಸಂಘದ ಗೌರವಾಧ್ಯಕ್ಷ ಕೆ.ರೇವಣ್ಣ, ಪ್ರಧಾನ ಕಾರ್ಯದರ್ಶಿ ಚೇತನ್, ಕಾರ್ಯ ದರ್ಶಿ ಅಜೀಜ್, ನಿರ್ದೇಶಕರಾದ ಮನ್ಸೂರ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.