ಸಾರಾಂಶ
ಹೊನ್ನಾವರ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷ ನಾಗರಾಜ ಭಟ್ ಅಧಿಕಾರ ಸ್ವೀಕರಿಸಿ, ಪಟ್ಟಣದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಶಾಸಕರು ಹೆಚ್ಚಿನ ಅನುದಾನ ನೀಡಿದರೆ ಪಕ್ಷಾತೀತವಾಗಿ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ಹೊನ್ನಾವರ: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿಯ ನಾಗರಾಜ ಭಟ್ ಹಾಗೂ ಉಪಾಧ್ಯಕ್ಷರಾಗಿ ಸುರೇಶ ಹೊನ್ನಾವರ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.ಎರಡು ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಬಂದಿದ್ದರಿಂದ ಆಯ್ಕೆ ಕೂತೂಹಲ ಮೂಡಿಸಿತ್ತು. ಮಂಗಳವಾರ ಚುನಾವಣಾ ಅಧಿಕಾರಿಯಾಗಿದ್ದ ತಹಸೀಲ್ದಾರ್ ರವಿರಾಜ್ ದಿಕ್ಷೀತ ಅವರು ಚುನಾವಣೆಯ ಪ್ರಕ್ರಿಯೆ ನಡೆಸಿದರು. ನಂತರ ಶಾಸಕ ದಿನಕರ ಶೆಟ್ಟಿ, ಪಪಂ ಸದಸ್ಯರು, ವಿವಿಧ ಸಂಘಟನೆಯ ಪ್ರಮುಖರು ಬಿಜೆಪಿ ಕಾರ್ಯಕರ್ತರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಇಲ್ಲಿನ ಪಪಂ ಪುರಸಭೆಯಾಗಿ ಪರಿವರ್ತನೆಯಾಗಬೇಕಿದೆ. ಈ ಬಗ್ಗೆ ಹಿಂದೆಯೇ ಅಧಿವೇಶನದಲ್ಲಿ ಪ್ರಶ್ನಿಸಿದ್ದೆ. ಮತ್ತೊಮ್ಮೆ ಚರ್ಚಿಸಿ ಇದರ ಬಗ್ಗೆ ವಿಶೇಷ ಗಮನ ನೀಡುತ್ತೇನೆ. ಪಕ್ಷಾತೀತವಾಗಿ ಕಾರ್ಯನಿರ್ವಹಿಸುವ ಜತೆ ಪಟ್ಟಣದ ಸಮಸ್ಯೆಗಳಿದ್ದರೆ ನಾವೆಲ್ಲರೂ ಸೇರಿ ಸಮಸ್ಯೆ ಬಗೆಹರಿಸೋಣ. ಪಟ್ಟಣವನ್ನು ಅಭಿವೃದ್ಧಿಪಥದತ್ತ ಮುನ್ನಡೆಸೋಣ ಎಂದರು.ನೂತನ ಅಧ್ಯಕ್ಷ ನಾಗರಾಜ ಭಟ್ ಅಧಿಕಾರ ಸ್ವೀಕರಿಸಿ, ಪಟ್ಟಣದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಶಾಸಕರು ಹೆಚ್ಚಿನ ಅನುದಾನ ನೀಡಿದರೆ ಪಕ್ಷಾತೀತವಾಗಿ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.ಈ ವೇಳೆ ಪಪಂ ಮುಖ್ಯಾಧಿಕಾರಿ ಯೇಸು ಬೆಂಗಳೂರು, ಸಿಬ್ಬಂದಿ ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))