ಸಾರಾಂಶ
ಹೊಳೆನರಸೀಪುರ ತಾಲೂಕಿನ ನಗರನಹಳ್ಳಿ ಗ್ರಾಮದಲ್ಲಿ ನಾಮಫಲಕದಲ್ಲಿ ನಮೂದು ಮಾಡಿದ ವೇಳಾಪಟ್ಟಿಯಂತೆ ಗಂಥಾಲಯದ ಬಾಗಿಲು ತೆರೆಯದೇ ಮನಸೋಯಿಚ್ಛೆ ಬಾಗಿಲು ತೆರೆಯುವ ಗ್ರಂಥಪಾಲಕನ ಬೇಜವಾಬ್ದಾರಿ ವರ್ತನೆಯಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸರ್ಕಾರ ಒದಗಿಸಿದ ವಿಶೇಷ ಸೌಲಭ್ಯಗಳು ಮರೀಚಿಕೆಯಾಗಿದ್ದು, ತಾಲೂಕು ಪಂಚಾಯಿತಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹೊಳೆನರಸೀಪುರ: ತಾಲೂಕಿನ ನಗರನಹಳ್ಳಿ ಗ್ರಾಮದಲ್ಲಿ ನಾಮಫಲಕದಲ್ಲಿ ನಮೂದು ಮಾಡಿದ ವೇಳಾಪಟ್ಟಿಯಂತೆ ಗಂಥಾಲಯದ ಬಾಗಿಲು ತೆರೆಯದೇ ಮನಸೋಯಿಚ್ಛೆ ಬಾಗಿಲು ತೆರೆಯುವ ಗ್ರಂಥಪಾಲಕನ ಬೇಜವಾಬ್ದಾರಿ ವರ್ತನೆಯಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸರ್ಕಾರ ಒದಗಿಸಿದ ವಿಶೇಷ ಸೌಲಭ್ಯಗಳು ಮರೀಚಿಕೆಯಾಗಿದ್ದು, ತಾಲೂಕು ಪಂಚಾಯಿತಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕಿನ ಹಳ್ಳಿಮೈಸೂರು ಹೋಬಳಿಯ ನಗರನಹಳ್ಳಿಯ ಗ್ರಾಮ ಪಂಚಾಯಿತಿಯ ಗಂಥಾಲಯವು ಅರಿವು ಕೇಂದ್ರವಾಗಿ ಕಾರ್ಯ ನಿರ್ವಹಿಸಬೇಕಿರುವ ಗ್ರಂಥಾಲಯದ ನಾಮಫಲಕದಲ್ಲಿ ಪ್ರತಿ ಸೋಮವಾರ, ಎರಡನೇ ಮಂಗಳವಾರ ಹಾಗೂ ಎಲ್ಲಾ ಸರ್ಕಾರಿ ರಜೆಗಳ ದಿನದಂದು ರಜೆಯಂದು ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ ಮತ್ತು ಬೆಳಗ್ಗೆ ೯ ಗಂಟೆಯಿಂದ ೧೧ ಗಂಟೆ, ಸಂಜೆ ೪ ರಿಂದ ಎಂದು ವೇಳಾಪಟ್ಟಿ ಹಾಕಲಾಗಿದೆ ಅಷ್ಟೆ, ಆದರೆ ಪಾಲನೆಯಾಗುತ್ತಿಲ್ಲ. ಕರ್ತವ್ಯದಲ್ಲಿ ಬದ್ಧತೆ ಜತೆಗೆ ಅಗತ್ಯ ಸಮಯಪ್ರಜ್ಞೆ ಪಾಲನೆ ಮಾಡದ ಗ್ರಂಥಪಾಲಕ ಕೃಷ್ಣಮೂರ್ತಿ ಅವರ ಧೋರಣೆಯಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸರ್ಕಾರ ಒದಗಿಸಿದ ವಿಶೇಷ ಯೋಜನೆಗಳು, ಹಳ್ಳಹಿಡಿಯುತ್ತಿದ್ದು ತಾಲೂಕು ಪಂಚಾಯಿತಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.