ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಹೋಬಳಿಯ ಮಾಣಿಕ್ಯನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ- ಉಪಾಧ್ಯಕ್ಷರಾಗಿ ಕಾಂಗ್ರೆಸ್ - ರೈತಸಂಘದ ಮೈತ್ರಿಕೂಟ ಬೆಂಬಲಿತ ನಾಗೇಗೌಡ ಮತ್ತು ಬೋರೇಗೌಡ ಅವಿರೋಧವಾಗಿ ಆಯ್ಕೆಯಾದರು.ಇದರಿಂದ ಕಳೆದ 35 ವರ್ಷಗಳಿಂದಲೂ ಜೆಡಿಎಸ್ ವಶದಲ್ಲಿದ್ದ ಮಾಣಿಕ್ಯನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಅಧಿಕಾರ ಕಾಂಗ್ರೆಸ್- ರೈತಸಂಘ ಮೈತ್ರಿಕೂಟದ ವಶವಾಗಿದೆ.
ಡೈರಿಯ ಒಟ್ಟು 11 ನಿರ್ದೇಶಕರ ಬಲದಲ್ಲಿ ಕಾಂಗ್ರೆಸ್- ರೈತಸಂಘ ಮೈತ್ರಿಕೂಟ 7 ಹಾಗೂ ಜೆಡಿಎಸ್ ಬೆಂಬಲಿತ 4 ನಿರ್ದೇಶಕರಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೈತ್ರಿಕೂಟದ ನಾಗೇಗೌಡ ಹಾಗೂ ಬೋರೇಗೌಡ ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಹಕಾರ ಇಲಾಖೆಯ ಆರ್.ನಿರ್ಮಲಾ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.ಈ ವೇಳೆ ಕಾಂಗ್ರೆಸ್- ರೈತಸಂಘದ ಮೈತ್ರಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಇದೇ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪರ ರೈತಸಂಘದ ಮುಖಂಡರಾದ ಕ್ಯಾತನಹಳ್ಳಿ ರಾಘವ ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಕುಮಾರ್ ಹಾಗೂ ರೈತಸಂಘದ ಮುಖಂಡ ಕ್ಯಾತನಹಳ್ಳಿ ರಾಘವ ಮಾತನಾಡಿ, ಮಾಣಿಕ್ಯನಹಳ್ಳಿ ಹಾಗೂ ತೋಪೇಗೌಡನಕೊಪ್ಪಲು ಗ್ರಾಮಸ್ಥರು ಶಾಸಕರ ಕೈ ಬಲಪಡಿಸಿ 35 ವರ್ಷಗಳ ನಂತರ ಕಾಂಗ್ರೆಸ್- ರೈತಸಂಘ ಮೈತ್ರಿಕೂಟಕ್ಕೆ ಅಧಿಕಾರ ನೀಡಿದ್ದಾರೆ ಎಂದರು.ಈ ವೇಳೆ ನಿರ್ದೇಶಕರಾದ ಕೃಷ್ಣ, ಜಲಬೋರೇಗೌಡ, ಸ್ವಾಮಿಗೌಡ, ಅರಸಮ್ಮ, ಶಕುಂತಲಾ, ಎಂ.ಕೆ.ಮಂಜುನಾಥ್, ಮಹೇಶ, ದ್ಯಾವಶೆಟ್ಟಿ, ಸರ್ಕಾರದ ನಾಮ ನಿರ್ದೇಶಿತ ನಿರ್ದೇಶಕ ಮಹದೇವ, ಗ್ರಾಮದ ಯಜಮಾನರಾದ ಚಂದ್ರಶೇಖರ್, ಶ್ರೀಕಂಠೇಗೌಡ, ಸಿಂಗ್ರಿಗೌಡ, ಕೃಷಿ ಪತ್ತಿನ ಸಂಘದ ಮಾಜಿ ಉಪಾಧ್ಯಕ್ಷ ನಟರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಕೆಂಪುಕೃಷ್ಣ, ಸಮಾಜ ಸೇವಕ ಶಂಕರ್, ಮುಖಂಡರಾದ ಮಹಾಂತೇಶ್, ಭಾಸ್ಕರ್, ರೋಹಿತ್, ಕೆಂಪೇಗೌಡ, ಜಯಂತ್, ಜವರೇಗೌಡ, ಶಿವಣ್ಣೇಗೌಡ, ಎಸ್.ಕೆಂಪೇಗೌಡ, ಕ.ರಾಮಕೃಷ್ಣ, ಕು.ಶಿವಣ್ಣೇಗೌಡ, ಅ.ಮಂಜುನಾಥ್, ಕೆ.ಸುರೇಶ್, ಸು.ನರಸೇಗೌಡ, ಪುಟ್ಟಸ್ವಾಮಿಗೌಡ, ಕು.ಪುಟ್ಟೇಗೌಡ, ಮಾ.ಕುಮಾರ, ಕಾ.ಪುಟ್ಟಸ್ವಾಮಿಗೌಡ, ಹ.ಮರಿಗೌಡ, ಚಿ.ರಾಮಚಂದ್ರು, ಎಂ.ಎನ್.ಜಗದೀಶ್, ಮು.ಸ್ವಾಮಿಗೌಡ, ಮೊ.ಮುದ್ದೇಗೌಡ, ಜೆ.ಗೋಪಾಲ, ಶ್ರೀರಾಮ್, ಎಂ.ಶೆಟ್ಟಹಳ್ಳಿ ಡೈರಿ ಅಧ್ಯಕ್ಷ ಸುರೇಶ್, ದಸಂಸ ಮುಖಂಡ ಮಂಜುನಾಥ್, ಡೈರಿ ಕಾರ್ಯದರ್ಶಿ ಪ್ರಕಾಶ್, ಹಾಲು ಪರೀಕ್ಷಕ ತುಳಸಿ ರಾಮೇಗೌಡ, ಮಾಜಿ ಕಾರ್ಯದರ್ಶಿ ನರಸೇಗೌಡ ಗ್ರಾಮಸ್ಥರು, ಮುಖಂಡರು ಹಾಗೂ ಯುವಕರು ಇದ್ದರು.