Nagur: Two women die after being struck by lightning.
ಕಮಲಾಪುರ: ತಾಲೂಕಿನ ನಾಗೂರ ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆಯರಿಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಹೊಲದ ಮಾಲೀಕರಾದ ವಿಜಯಲಕ್ಷ್ಮಿ ಬಸಯ್ಯ ಇವರ ಬಳಿ ಕೂಲಿ ಕೆಲಸಕ್ಕೆ ಹೋಗಿದ್ದ (48)ಶೈಜಾದ್ ಬಿ ಪಾತರು ಸಾಬ್ (58) ಮೃತಪಟ್ಟಿದ್ದ ಸೋಮವಾರ ಜಮೀನಿನಲ್ಲಿ ತೊಗರಿ ಬೆಳೆಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಶದಿ ಕಳೆಯುವ ಕೆಲಸ ಮಾಡುತ್ತಿದ್ದರು. ನಂತರ ಮಧ್ಯಾಹ್ನದ ಊಟಕ್ಕೆ ಮಾಡಲು 3:30ಕ್ಕೆ ಮರದ ಕೆಳಗೆ ಬಂದು ಕೂತಿದ್ದರು. ಅದೇ ಸಮಯದಲ್ಲಿ ಮಳೆ ಬರುತ್ತಿರುವುದರಿಂದ ಬೇವಿನ ಮರದ ಕೆಳಗೆ ಊಟ ಮಾಡುವ ಸಮಯದಲ್ಲಿ ಮಳೆಯಲ್ಲಿ ಸಿಡಿಲು ಬಡೆದು ಮೃತಪಟ್ಟಿದ್ದಾರೆ. ಸಾವಿನಿಂದಾಗಿ ಮಹಿಳೆಯರ ಕುಟುಂಬ ಕಂಗಾಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಮಹಾಗಾಂವ್ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಾಗಿದೆ.