ನಾಯಾರ್‌ ಕ್ರಿಕೆಟ್‌: ತೆಲಂಗಾಣ ತಾಂಡೂರ ತಂಡಕ್ಕೆ ಜಯ

| Published : Feb 26 2024, 01:32 AM IST

ಸಾರಾಂಶ

ಚಿಂಚೋಳಿಯ ಮಿರಿಯಾಣ ಗ್ರಾಮದಲ್ಲಿ ನಾಯಾರ್ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ತಾಂಡೂರಿನ ನಾಯಾರ್‌ ತಂಡ ಪ್ರಥಮ ಬಹುಮಾನ ೫೦ ಸಾವಿರ ರು., ಟ್ರೋಫಿ ಪಡೆದುಕೊಂಡಿತು.

ಚಿಂಚೋಳಿ:

ತಾಲೂಕಿನ ಮಿರಿಯಾಣ ನಯರಾ ಎನರ್ಜಿ ರವೂಫ್ ಪೆಟ್ರೋಲ್ ಪಂಪ್‌ ವತಿಯಿಂದ ಆಯೋಜಿಸಿದ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ತೆಲಂಗಾಣ ರಾಜ್ಯದ ತಾಂಡೂರ ನಾಯಾರ್ ಕ್ರಿಕೆಟ್‌ ತಂಡ ಅಂತಿಮ ಪಂದ್ಯದಲ್ಲಿ ಮಿರಿಯಾಣ ನೇತಾಜಿ ತಂಡವನ್ನು ಸೋಲಿಸಿ ೫೦ ಸಾವಿರ ರು. ಹಾಗೂ ಟ್ರೋಫಿ ಬಹುಮಾನ ಪಡೆದುಕೊಂಡಿತು.

ಮಿರಿಯಾಣ ಗ್ರಾಮದಲ್ಲಿ ನಡೆದ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ದ್ವಿತೀಯ ಬಹುಮಾನವನ್ನು ನೇತಾಜಿ ಕ್ರಿಕೆಟ್‌ ತಂಡ ೨೫ ಸಾವಿರ ರು. ಪಡೆದುಕೊಂಡಿತು. ಆಯೋಜಕ ಬಾಲರಾಜಗೌಡ, ಕಾಂಗ್ರೆಸ್‌ ಮುಖಂಡ ಸುಭಾಷ ರಾಠೋಡ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದರು.

ಗಣಿ ಉದ್ಯಮಿ ಅಬ್ದುಲ್‌ರವೂಫ ಮಿರಿಯಾಣ, ಸಿದ್ದಯ್ಯಗೌಡ, ಅಭಿಷೇಕ, ಚಂದ್ರಕಾಂತ, ಅಭಿಲಾಷೌಡ, ಪಿಎಸ್ಐ ಶಿವರಾಜ ಪಾಟೀಲ, ಪುರಸಭೆ ಸದಸ್ಯರಾದ ಅಬ್ದುಲ ಬಾಸೀತ, ಶಬ್ಬೀರ ಅಹ್ಮದ್‌, ಡಾ.ತುಕಾರಾಮ ಪವಾರ, ನಂದು ಪಾಟೀಲ, ವಿಜಯಶಂಕರ ನರಸಿಂಹಲು ಪೂಜಾರಿ ಕ್ರಿಕೆಟ್‌ ಆಟಗಾರರಿಗೆ ಬಹುಮಾನ ವಿತರಣೆ ಮಾಡಿದರು.

ಉತ್ತಮ ಬ್ಯಾಟ್ಸ್‌ಮನ್‌ ವಿನಯಕುಮಾರ ದೇಶಮುಖ, ಉತ್ತಮ ಆಟಗಾರ ಸುಧಾಕರ, ಸರಣಿ ಆಟಗಾರ ಅಮಜದಖಾನ, ಪಂದ್ಯ ಪುರುಷ ಆಟಗಾರ ಅಸ್ಲಮ ಪ್ರಶಸ್ತಿ ಮತ್ತು ನಗದು ಬಹುಮಾನ ಪಡೆದುಕೊಂಡರು.

ಪಂದ್ಯಾವಳಿಯಲ್ಲಿ ಒಟ್ಟು ೪೧ ತಂಡಗಳು ಭಾಗವಹಿಸಿದ್ದವು.