25ರಂದು ಗ್ರಾಮೀಣ ಕ್ರೀಡಾಕೂಟ, ಡ್ಯಾನ್ಸ್‌ ಮೇಳ

| Published : Feb 08 2024, 01:32 AM IST

25ರಂದು ಗ್ರಾಮೀಣ ಕ್ರೀಡಾಕೂಟ, ಡ್ಯಾನ್ಸ್‌ ಮೇಳ
Share this Article
  • FB
  • TW
  • Linkdin
  • Email

ಸಾರಾಂಶ

ಡ್ಯಾನ್ಸ್ ಮೇಳದಲ್ಲಿ ಭಾಗವಹಿಸುವವರು ಫೆ.20ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರು ಕ್ರೀಡಾಕೂಟದಂದು ಬೆಳಗ್ಗೆ ೧೦ ಗಂಟೆಯೊಳಗೆ ಹಾಜರಿರಬೇಕು

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‌ನ ವತಿಯಿಂದ 24ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಫೆ.25ರಂದು ಗ್ರಾಮೀಣ ಕ್ರೀಡಾಕೂಟ ಹಾಗೂ ಡ್ಯಾನ್ಸ್‌ಮೇಳವನ್ನು ಕಾನ್‌ಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಫ್ರೆಂಡ್ಸ್ ಯೂತ್ ಕ್ಲಬ್‌ನ ಅಧ್ಯಕ್ಷ ವಸಂತ ತಿಳಿಸಿದ್ದಾರೆ. ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಪ್ರಥಮ ಸ್ಥಾನ ಪಡೆದ ತಂಡಕ್ಕೆ 20,000 ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ 15,000 ರು. ಹಾಗೂ ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ತಂಡಕ್ಕೆ 0,000ರು. ನೀಡಲಾಗುವುದು. ಸ್ಥಳೀಯ ಪುರುಷರಿಗೆ ಕಬ್ಬಡ್ಡಿ ಪಂದ್ಯಾವಳಿ, ಮುಕ್ತ ರಸ್ತೆಓಟ, ಮಹಿಳೆಯರಿಗೆ ಥ್ರೋಬಾಲ್, ಸ್ಥಳೀಯ ಮಹಿಳೆಯರಿಗೆ ಮತ್ತು ಪುರುಷರಿಗೆ ಹಗ್ಗಜಗ್ಗಾಟ ಹಾಗೂ 5 ವರ್ಷದೊಳಗಿನ ಮಕ್ಕಳಿಗೆ ವಿವಿಧ ಗ್ರಾಮೀಣ ಕ್ರೀಡಾಕೂಟ ಹಾಗೂ ಡ್ಯಾನ್ಸ್ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಡ್ಯಾನ್ಸ್ ಮೇಳದಲ್ಲಿ ಭಾಗವಹಿಸುವವರು ಫೆ.20ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರು ಕ್ರೀಡಾಕೂಟದಂದು ಬೆಳಗ್ಗೆ 10 ಗಂಟೆಯೊಳಗೆ ಹಾಜರಿರಬೇಕು ಎಂದು ಯೂತ್‌ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಎಂ.ಎ. ಶಂಕರನಾರಾಯಣ, ಉಪಾಧ್ಯಕ್ಷ ಟಿ.ಕೆ.ಚಂದ್ರು, ಸಹ ಕಾರ್ಯದರ್ಶಿ ಎಚ್.ಎಂ. ಹರೀಶ, ಖಜಾಂಜಿ ಕೆ.ಎಚ್. ವಿನೋದ್, ಕ್ರೀಡಾ ಕಾರ್ಯದರ್ಶಿ ಆಶೋಕ(ದೇವೆಂದ್ರ),ಕೆ.ಟಿ. ವಿಜೇಶ್, ಸಾಂಸ್ಕೃತಿಕ ಕಾರ್ಯದರ್ಶಿಸಿ.ಬಿ. ಪ್ರವೀಣಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.