ಸಾರಾಂಶ
ಉಪಾಧ್ಯಕ್ಷರಾಗಿ ಜನ್ನೂರು ದೊರೆಸ್ವಾಮಿ ಅವಿರೋಧ ಆಯ್ಕೆ
ಕನ್ನಡಪ್ರಭ ವಾರ್ತೆ ಚಾಮರಾಜನಗರಚಾಮರಾಜನಗರ ತಾಲೂಕು ಪ್ರಾಥಮಿಕ ಸಹಕಾರ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ನಲ್ಲೂರು ಮಹದೇವಪ್ಪ ಉಪಾಧ್ಯಕ್ಷರಾಗಿ ಜನ್ನೂರು ಭಾನುಪ್ರಕಾಶ್ ಅವಿರೋಧವಾಗಿ ಸೋಮವಾರ ಆಯ್ಕೆಯಾದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಮಹದೇವಸ್ವಾಮಿ, ಉಪಾಧ್ಯಕ್ಷ ಭಾನುಪ್ರಕಾಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ಘೋಷಣೆಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ನಲ್ಲೂರು ಮಹದೇವಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ಜನ್ನೂರು ದೊರೆಸ್ವಾಮಿ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಶಿಲ್ಪಶ್ರೀ ಅವರು ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ರೈತ ಅಭಿವೃದ್ದಿಗಾಗಿ ಶ್ರಮಿಸುವೆ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಲ್ಲೂರು ಮಹದೇವಪ್ಪ ಅಧಿಕಾರ ವಹಿಸಿಕೊಂಡು ಮಾತನಾಡಿ, ಸಂಘದ ಎಲ್ಲಾ ನಿರ್ದೇಶಕರು ಒಮ್ಮತದಿಂದ ಅವಿರೋಧವಾಗಿ ನಮ್ಮನ್ನು ಆಯ್ಕೆ ಮಾಡಿರುವುದಕ್ಕೆ ಆಭಾರಿಯಾಗಿದ್ದೇನೆ. ನಿರ್ಗಮಿತ ಅಧ್ಯಕ್ಷರಾದ ಮಹದೇವಸ್ವಾಮಿ. ಎಚ್.ಎಂ. ಬಸವಣ್ಣ ಅವರ ಮಾರ್ಗದರ್ಶನದಲ್ಲಿ ಎಲ್ಲಾ ನಿರ್ದೇಶಕರ ಸಹಕಾರ ಮತ್ತು ವಿಶ್ವಾಸದೊಂದಿಗೆ ಬ್ಯಾಂಕ್ ಅಭಿವೃದ್ದಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು. ಸಭೆಯಲ್ಲಿ ಸಂಘದ ನಿಗರ್ಮಿತ ಅಧ್ಯಕ್ಷ ಮಹದೇವಸ್ವಾಮಿ ಎನ್‌ರಿಚ್, ಉಪಾಧ್ಯಕ್ಷ ಭಾನುಪ್ರಕಾಶ್, ಮಾಜಿ ಅಧ್ಯಕ್ಷ ಎಚ್.ಎಂ. ಬಸವಣ್ಣ, ಮಾಜಿ ಉಪಾಧ್ಯಕ್ಷ ಮಹದೇವನಾಯಕ ನಿರ್ದೇಶಕರಾದ ಬದನಗುಪ್ಪೆ ಬಸವರಾಜು, ಶಿವಪುರದ ಎಸ್.ರಾಜು, ಬೆಟ್ಟದಪುರದ ಶಿವಶಂಕರಪ್ಪ, ಬಿಸಲವಾಡಿ ಸಾಕಮ್ಮ, ಮ್ಯಾನೇಜರ್ ಸತೀಶ್, ಶಶಿಕಿರಣ್, ನವೀನ್, ದಿನಾಕರ್, ಮೊದಲಾದವರು ಇದ್ದರು.ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಚಾಮುಲ್ ನಿರ್ದೇಶಕ ಎಚ್.ಎಸ್.ಬಸವರಾಜು, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಹರದನಹಳ್ಳೀ ಸುಂದ್ರಪ್ಪ, ಎಪಿಎಂಸಿ ನಿರ್ದೇಶಕ ಎ.ಜಿ. ಲಿಂಗಪ್ಪ, ತಾಪಂ ಮಾಜಿ ಉಪಾಧ್ಯಕ್ಷರಾದ ಚಿಕ್ಕಸ್ವಾಮಿ, ಬದನಗುಪ್ಪೆ ಬಸವಣ್ಣ, ಜನ್ನೂರು ರೇವಣ್ಣ, ಶ್ರೀಕಂಠಪಾಪಣ್ಣ, ಆಲೂರು ಪರಶಿವಮೂರ್ತಿ, ಆಲೂರು ಪಾಲಾಕ್ಷ ಕೃಷಿಕ ಸಮಾಜದ ನಿರ್ದೇಶಕ ಎ.ಬಿ. ಶಿವಕುಮಾರ್, ಅನೇಕರು ಅಭಿನಂದಿಸಿದರು.