ನಾಲ್ನಾಡ್ ಹಾಕಿ ಕಪ್‌: ಬಲ್ಲಮಾವಟಿ (ವೈಟ್), ಯವಕಪಾಡಿ ಫೈನಲ್‌ಗೆ

| Published : Nov 02 2024, 01:20 AM IST

ನಾಲ್ನಾಡ್ ಹಾಕಿ ಕಪ್‌: ಬಲ್ಲಮಾವಟಿ (ವೈಟ್), ಯವಕಪಾಡಿ ಫೈನಲ್‌ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾ ಸಂಸ್ಥೆಯ ಆಟದ ಮೈದಾನದಲ್ಲಿ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಅಂತರ್‌ ಗ್ರಾಮ ಹಾಕಿ ಟೂರ್ನಿಯಲ್ಲಿ ಬಲ್ಲಮಾವಟಿ (ವೈಟ್) ಮತ್ತು ಯವಕಪಾಡಿ ತಂಡಗಳು ಫೈನಲ್‌ ಪ್ರವೇಶಿಸಿದೆ.

ದುಗ್ಗಳ ಸದಾನಂದ.ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾ ಸಂಸ್ಥೆಯ ಆಟದ ಮೈದಾನದಲ್ಲಿ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಅಂತರ್‌ ಗ್ರಾಮ ಹಾಕಿ ಟೂರ್ನಿಯಲ್ಲಿ ಬಲ್ಲಮಾವಟಿ (ವೈಟ್) ಮತ್ತು ಯವಕಪಾಡಿ ತಂಡಗಳು ಫೈನಲ್‌ ಪ್ರವೇಶಿಸಿದೆ.

ಶುಕ್ರವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಲ್ಲಮಾವಟಿ ತಂಡ ಮರಂದೋಡ ತಂಡದ ವಿರುದ್ಧ ಸ್ಪರ್ಧಿಸಿತು. ಪಂದ್ಯವನ್ನು ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ, ಕಾಫಿ ಬೆಳೆಗಾರ ಮುಕ್ಕಾಟಿರ ಸುತನ್ ಸುಬ್ಬಯ್ಯ ಉದ್ಘಾಟಿಸಿದರು.

ಪಂದ್ಯದಲ್ಲಿ ಬಲ್ಲಮಾವಟಿ ತಂಡವು ಮರಂದೋಡ ವಿರುದ್ಧ 6-3 ಅಂತರದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಬಲ್ಲಮಾವಟಿ ತಂಡದ ಪರ ಅಯ್ಯಪ್ಪ 2, ಪ್ರಶಾಂತ್ 2, ಕುಶಾಲ್ 2 ಗೋಲು ಗಳಿಸಿದರು.

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಯವಕಪಾಡಿ ತಂಡ, ಬೇತು ತಂಡದ ವಿರುದ್ಧ ಸ್ಪರ್ಧಿಸಿತು. ಪಂದ್ಯವನ್ನು ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್, ಕಾಫಿ ಬೆಳೆಗಾರರಾದ ಅಪ್ಪಚಿರ ತಮ್ಮಯ್ಯ, ಹೊಸೊಕಲು ಮುತ್ತಪ್ಪ, ಕರವಂಡ ರವಿ ಬೋಪಣ್ಣ ಉದ್ಘಾಟಿಸಿದರು.

ಯವಕಪಾಡಿ ತಂಡ 4- 0 ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು. ಯವಕಪಾಡಿ ತಂಡದ ಪರ ಹೇಮಂತ್ 3, ಯಶವಂತ್ 1 ಗೋಲು ಗಳಿಸಿದರು.

ಮಹಿಳೆಯರ ಹಗ್ಗಜಗ್ಗಾಟ:

ಮಹಿಳೆಯರ ಹಗ್ಗ ಜಗ್ಗಟ್ಟ ಸ್ಪರ್ಧೆಯಲ್ಲಿ ಬಲ್ಲಮಾವಟಿ ಮತ್ತು ನಾಪೋಕ್ಲು ತಂಡಗಳು ಅಂತಿಮ ಸುತ್ತು ಪ್ರವೇಶಿಸಿದವು. ಮೊದಲ ಸೆಮಿಫೈನಲ್‌ನಲ್ಲಿ ಬಲಮಾವಟಿ ತಂಡವು ಪೇರೂರು ತಂಡದ ವಿರುದ್ಧ ಜಯಗಳಿಸಿದರೆ, ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ನಾಪೋಕ್ಲು ತಂಡವು ನೆಲಜಿ ತಂಡದ ವಿರುದ್ಧ ಜಯಗಳಿಸಿತು.ಪ್ರೌಢಶಾಲಾ ವಿಭಾಗದ ಹಾಕಿಯ ಅಂತಿಮ ಸ್ಪರ್ಧೆಯು ಕಕ್ಕಬೆ ಮತ್ತು ಶ್ರೀರಾಮ ಟ್ರಸ್ಟ್ ವಿದ್ಯಾ ಸಂಸ್ಥೆಯ ನಡುವೆ ನಡೆಯಲಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಶ್ರೀರಾಮ ಟ್ರಸ್ಟ್ ಶಾಲೆಯ ತಂಡವು ಸೇಕ್ರೆಡ್ ಹಾರ್ಟ್ ತಂಡದ ವಿರುದ್ಧ 4- 0 ಅಂತರದ ಗೆಲುವು ಸಾಧಿಸಿತು.ಎರಡನೇ ಸೆಮಿಫೈನಲ್ ಸ್ಪರ್ಧೆಯು ಕಕ್ಕಬ್ಬೆ ಪ್ರೌಢಶಾಲೆ ಮತ್ತು ನೇತಾಜಿ ಪ್ರೌಢಶಾಲೆ ತಂಡಗಳ ನಡುವೆ ನಡೆಯಿತು. ಪಂದ್ಯದಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದವು. ಪೆನಾಲ್ಟಿ ಸ್ಟ್ರೋಕ್‌ನಲ್ಲೂ ಎರಡು ತಂಡಗಳು ಸಮಬಲ ಸಾಧಿಸಿದವು. ಅಂತಿಮವಾಗಿ ಸಡನ್ ಡೆತ್‌ನಲ್ಲಿ ಕಕ್ಕಬ್ಬೆತಂಡ ಜಯಭೇರಿ ಬಾರಿಸಿತು.

ಇಂದು ಫೈನಲ್‌ ಪಂದ್ಯ

ನಾಲ್ನಾಡ್ ಕಪ್ ಹಾಕಿ ಪಂದ್ಯಾವಳಿಯ ಪಂದ್ಯಾವಳಿಯ ಫೈನಲ್‌ ಪಂದ್ಯಗಳು ನ.2ರಂದು ನಡೆಯಲಿದೆ. ಅಂತಿಮ ಪಂದ್ಯವನ್ನು ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಟಿ. ಸುರೇಶ್ ವಹಿಸುವರು. ಮುಖ್ಯ ಅತಿಥಿಗಳಾಗಿ ಹಾಕಿ ಕರ್ನಾಟಕದ ಕಾರ್ಯದರ್ಶಿ ಅಂಜಪರವಂಡ ಬಿ. ಸುಬ್ಬಯ್ಯ ಪಾಲ್ಗೊಳ್ಳಲಿರುವರು.ಸಮಾರೋಪ ಸಮಾರಂಭ ನೇತಾಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಟ್ರೋಫಿ ದಾನಿಗಳಾದ ಮಾಳೆಯಂಡ ಭೀಮಯ್ಯ, ಮೂವೇರ ವಿಜು ಮಂದಣ್ಣ, ಚೀಯಂಡೀರ ದಿನೇಶ್ ಗಣಪತಿ, ಮಚ್ಚುರ ಯದುಕುಮಾರ್, ಮುಕ್ಕಾಟಿರ ವಿನಯ್ ಪಾಲ್ಗೊಳ್ಳಲಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇದುರ ಶಾಂತಿ ಪೂವಯ್ಯ, ನೇತಾಜಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಸಿ.ಎಸ್.ಸುರೇಶ್ ಪಾಲ್ಗೊಳ್ಳಲಿದ್ದಾರೆ.1--ಎನ್ ಪಿ ಕೆ-1.ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾ ಸಂಸ್ಥೆಯ ಆಟದ ಮೈದಾನದಲ್ಲಿ ನಾಲ್ ನಾಡು ಹಾಕಿ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಅಂತರ ಗ್ರಾಮ ಕ್ರೀಡಾಪಟುಗಳನ್ನು ಕಾರ್ಯಕ್ರಮದಲ್ಲಿ ಉಪಸ್ಕರಿದ್ದ ಗಣ್ಯರು ಪರಿಚಯ ಮಾಡಿಕೊಳ್ಳುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.