ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಕನ್ನಡಿಗರ ಅಸ್ಮಿತೆಯಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ ಪ್ರಸಿದ್ಧ ದೊರೆಯಾಗಿ ಮೈಸೂರು ರಾಜ್ಯವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 140ನೇ ನಾಲ್ವಡಿ ಕೃಷ್ಣ ರಾಜ ಒಡೆಯರ್ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ನೀಡದ ಕ್ಷೇತ್ರಗಳೆ ಇಲ್ಲ, ಕೃಷಿ, ಕೈಗಾರಿಕೆ, ನೀರಾವರಿ, ಜಲವಿದ್ಯುತ್, ಆರೋಗ್ಯ, ಶಿಕ್ಷಣ ಹಲವು ವಲಯಗಳಲ್ಲಿ ಅಂದು ಮೈಸೂರು ಮುಂಚೂಣಿಯಲ್ಲಿತ್ತು ಇದರ ಹಿಂದೆ ಅವರ ಕೊಡುಗೆ ಅಪಾರವಾದುದು, ಇಂತಹ ಮಹನೀಯರನ್ನು ಸ್ಮರಿಸಬೇಕಾದದ್ದು ನಮ್ಮ ಕರ್ತವ್ಯ ಎಂದರು.ಡಾ.ಅರುಣ್ ಜೋಳದ ಕೂಡ್ಲಿಗಿ ಉಪನ್ಯಾಸ ನೀಡಿ, ನಾಲ್ವಡಿ ಕೃಷ್ಣ ರಾಜ ಒಡೆಯರ್ ರಾಜ ಪರಂಪರೆಯಲ್ಲಿ ಅತ್ಯಂತ ಮಾನವೀಯ ಅಂತಃಕರಣದ ಒಡೆಯರಾಗಿದ್ದರು. ಡಾ.ಅಂಬೇಡ್ಕರ್ ಮತ್ತು ಗಾಂಧೀಜಿಯವರು ಅತೀ ಹೆಚ್ಚು ನೆನಪಿಸಿಕೊಂಡ ಮತ್ತು ಇಷ್ಟಪಡುವ ರಾಜರಾಗಿದ್ದರು. ನಾಲ್ವಡಿಯವರು ಜಾಗತಿಕ ಮಟ್ಟದಲ್ಲಿ ಹೆಸರಾಗಿದ್ದರು. ಪ್ರಜಾಪ್ರಭುತ್ವ ಚಿಂಥನೆಯಲ್ಲಿ ಆಡಳಿತ ನಡೆಸಿದವರಾಗಿದ್ದರು, ಹಾಗಾಗಿ ಇವರು ಇವತ್ತಿಗೂ ಸ್ಮರಣಿಯವರಾಗಿದ್ದಾರೆ. ರಾಜಶಾಹಿ ಆಡಳಿತದಲ್ಲಿ ಪ್ರಜಾಪ್ರಭುತ್ವವನ್ನು ಜೀವಂತಗೊಳಿಸಿದರು. ಅವರು ಕಟ್ಟಿದ ಕಟ್ಟಡಗಳು, ಕಾರ್ಯಗಳು ಇವತ್ತು ಅವರ ಹೆಸರನ್ನು ಹೇಳುತ್ತೀವೆ ಎಂದು ಅಶಯ ನುಡಿಗಳ್ನಾಡಿದರು.
ಕಾರ್ಯಕ್ರಮದಲ್ಲಿ ಸಿದ್ದವ್ವನಹಳ್ಳಿ ಸಾಹಿತಿ ವೀರೇಶ್ ಆಶಯ ನುಡಿ ನುಡಿದರು. ಪದವಿಯಲ್ಲಿ ಕನ್ನಡ ಭಾಷೆ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ನಾಲ್ವಡಿ ಕೃಷ್ಣ ರಾಜ ಒಡೆಯರ್ ಸಾಧನೆ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕಸಾಪ ಅಧ್ಯಕ್ಷ ಎನ್.ಶಿವಮೂರ್ತಿ ಅಭಿನಂಧಿಸಿದರು.ಪ್ರಥಮ ದರ್ಜೆ ಕಾಲೇಜು ಪ್ರಭಾರೆ ಪ್ರಾಂಶುಪಾಲರಾದ ಶಿವಮೂರ್ತಿ ನಾಯ್ಕ್, ಕರವೇ ಅಧ್ಯಕ್ಷರ ಪಿ.ಹನುಮಂತಪ್ಪ, ಕ.ಸಾ.ಪ ಮಾಜಿ ಅಧ್ಯಕಷರಾದ ಕೆ.ಬಿ.ಬಸವರಾಜಯ್ಯ, ಕನ್ನಡಸಿರಿ ಪುರಸ್ಕೃತರಾದ ಜಿ.ಎ.ದೇವರಾಜಯ್ಯ, ಗೌರವ ಕಾರ್ಯದರ್ಶಿ ಆರ್.ರುದ್ರಪ್ಪ, ಜಿ.ಆರ್.ಬಸವರಾಜಪ್ಪ, ಕನ್ನಡ ವಿಭಾಗದ ಪ್ರಾಧ್ಯಪಕರಾದ, ಟಿ.ಮಂಜುನಾಥ್, ಉಪನ್ಯಾಸಕರಾದ, ಮಲ್ಲಿಕಾರ್ಜುನ್, ಡಾ.ಮಾದಾನಾಯ್ಕ್, ಡಾ.ಪ್ರವೀಣ್ಕುಮಾರ್, ಡಾ.ರೆಮೇಶ್, ಡಾ.ಸಂತೋಷ್, ಡಾ.ಚೇತನ್, ಜಿಲ್ಲಾ ಗೌರವ ಕೋಶಾಧ್ಯಕ್ಷರಾದ ಚೌಳೂರು ಲೋಕೇಶ್, ಜ್ಯೋತಿ ಗಿರೀಶ್, ಸರೀತಾ ಗಿರೀಶ್, ಶಿಕ್ಷಕರ ಸಂಘದ ಅದ್ಯಕ್ಷರಾದ ಎಲ್.ಎ.ಶಿವಕುಮಾರ್, ಪಾವಗಡ ಶಿವಣ್ಣ ಬಿ.ಜಿ.ಹಳ್ಳಿ ವೆಂಕಟೇಶ್ ಉಪಸ್ಥಿತರಿದ್ದರು.