ಸಾರಾಂಶ
ಯಾದಗಿರಿ: ಜಿಲ್ಲೆಯಲ್ಲಿ 2024-25ನೇ ಸಾಲಿನ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳನ್ನು ಖರೀದಿ ಕೇಂದ್ರಗಳನ್ನು ತೆರೆಯಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ ಡಾ. ಸುಶೀಲಾ ತಿಳಿಸಿದ್ದಾರೆ.ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಎಫ್ ಪಿಒ ಗಳ ಮುಖಾಂತರ ಹೆಸರು ಕಾಳನ್ನು ಪ್ರತಿ ಕ್ವಿಂಟಾಲ್‌ಗೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ 8682 ರು.ಗಳ ಇದ್ದು, ಪ್ರತಿಯೊಬ್ಬ ರೈತರಿಂದ ಎಕೆರೆಗೆ 2 ಕ್ವಿಂಟಲ್ ನಂತೆ ಗರಿಷ್ಠ 10 ಕ್ವಿಂಟಲ್ ಹೆಸರು ಕಾಳು ಖರೀದಿಸುವ ಸಂಬಂಧ, ಜಿಲ್ಲೆಯಲ್ಲಿ ಯಾದಗಿರಿ, ಹತ್ತಿಕುಣಿ, ಅಲ್ಲಿಪುರ, ಗುರುಮಠಕಲ್, ಎಲೇರಿ, ಸೈದಾಪೂರ, ಚಪೇಟ್ಲಾ, ಶಹಾಪುರ, ಬೆಂಡೆಬೆಂಬಳಿ, ಸುರಪುರ, ಕೆಂಭಾವಿ-1 ಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿರುತ್ತದೆ. ನೋಂದಣಿ ಕಾಲಾವಧಿಯನ್ನು 45 ದಿನ ಹಾಗೂ ನೋಂದಣಿಯೊಂದಿಗೆ ಖರೀದಿ ಪ್ರಕ್ರಿಯೆಯು 90 ದಿನಗಳವರೆಗೆ ನಿಗದಿ ಪಡಿಸಲಾಗಿರುತ್ತದೆ. ಪ್ರಯುಕ್ತ ಜಿಲ್ಲೆಯ ರೈತ ಭಾಂದವರು ಕೂಡಲೇ ಖರೀದಿ ಕೇಂದ್ರಗಳಿಗೆ ತೆರಳಿ ಸರದಿಯ ಪ್ರಕಾರ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ತಮ್ಮ ಹುಟ್ಟುವಳಿಯನ್ನು ಮಾರಾಟ ಮಾಡಿ ಸರ್ಕಾರದ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.