ಸಾರಾಂಶ
ಪರಶುರಾಂಪುರ: ಹೋಬಳಿಯ ಕಾಮಸಮುದ್ರ ಗ್ರಾಮದ ಶ್ರೀಮತಿ ದಾನೇಶ್ವರಿ ಮತ್ತು ರಾಮಾಂಜನೇಯ ದಂಪತಿಯ ನಾಲ್ಕು ತಿಂಗಳ ಮಗನಾದ ಯಶಶ್ವಿಕ್ ಅರ್ಜುನ್ ಆರ್. ಅಗಾಧ ಜ್ಞಾಪಕ ಶಕ್ತಿ ಹೊಂದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಮಗು ಪಕ್ಷಗಳು, ಬಣ್ಣಗಳು, ಅಕ್ಷರ, ಹಣ್ಣು, ತರಕಾರಿ, ವರ್ಣಮಾಲೆ ಆಕಾರಗಳು, 216 ಫ್ಲಾಶ್ ಕಾರ್ಡುಗಳನ್ನು ಗುರುತಿಸುವ ಮೂಲಕ ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ದಾಖಲೆ ಬರೆಸಿದೆ. ಈ ಅಸಾಧಾರಣ ನೆನಪಿನ ಶಕ್ತಿ ನಾಲ್ಕು ತಿಂಗಳ ಮಗುವಲ್ಲಿ ಇದೆ ಎಂದರೆ ಆಶ್ಚರ್ಯ ಸಂಗತಿ. ಇವರ ಪೋಷಕರು ಇವನ ಅಸಾಧಾರಣ ನೆನಪಿನ ಶಕ್ತಿಯನ್ನು ಗುರುತಿಸಿ ವಿಡಿಯೋ ಚಿತ್ರೀಕರಣ ಮಾಡಿ ನೊಬೆಲ್ ಆಫ್ ರೆಕಾರ್ಡ್ ಕಳಿಸಿದ್ದಾರೆ. ವರ್ಲ್ಡ್ ರೆಕಾರ್ಡ್ನ ತಂಡವು ಪರಿಶೀಲಿಸಿ ಮತ್ತು ಪರೀಕ್ಷಿಸಿ ಬಳಿಕ ಪ್ರಮಾಣಪತ್ರ ನೀಡಿದೆ. ಮಗುವಿನ ಈ ಸಾಧನೆಯು ತಂದೆ ತಾಯಿ ಹಾಗೂ ಊರಿನವರಿಗೆ ಇನ್ನಿಲ್ಲದ ಸಂತಸ ತಂದಿದೆ. ಚಳ್ಳಕೆರೆ ಶಾಸಕರಾದ ಟಿ. ರಘುಮೂರ್ತಿಯವರು ಹಾಗೂ ಜಿಲ್ಲಾಧಿಕಾರಿ ವೆಂಕಟೇಶ್ ಈ ಮಗುವಿನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಗೌರವಿಸಿದ್ದಾರೆ.