ಸಾರಾಂಶ
ಬ್ಯಾಡಗಿ: ಪಟ್ಟಣದಲ್ಲಿರುವ ಬಡಾವಣೆ ಮತ್ತು ರಸ್ತೆಗಳನ್ನು ಪ್ರತ್ಯೇಕ ಹೆಸರಿನಿಂದ ಗುರುತಿಸುವಂತಹ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳಿಯಪ್ಪಗೋಳ ತಿಳಿಸಿದರು.
ಪಟ್ಟಣದ ಕಾಕೋಳ ರಸ್ತೆ ಬಲಭಾಗದಲ್ಲಿನ ಬಡಾವಣೆಗೆ ಮಹಾಲಕ್ಷ್ಮೀ ಬಡಾವಣೆ ಎಂದು ನಾಮಕರಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.ಪಟ್ಟಣದಲ್ಲಿ ಬಹು ಹಿಂದಿನಿಂದಲೂ ಕೆಲವೊಂದು ಪ್ರದೇಶಗಳಿಗೆ ಇಂದಿಗೂ ಹೆಸರಿಟ್ಟಿಲ್ಲ. ಇದರಿಂದ ಪಟ್ಟಣಕ್ಕೆ ಬಂದು ಹೋಗುವಂತಹ ಜನರಿಗೆ ಮನೆ ವಿಳಾಸ ಪತ್ತೆ ಹಚ್ಚುವುದು ಕಷ್ಟವಾಗಿದೆ. ಅದರಲ್ಲೂ ಹಳೇ ಬ್ಯಾಡಗಿ ಪಟ್ಟಣದಲ್ಲಿ ಮನೆವಿಳಾಸ ಪತ್ತೆ ಮಾಡುವುದು ಸಹ ಕಷ್ಟವಾಗುತ್ತಿದೆ ಎಂದರು.ಸಾಧಕರ ಹೆಸರು: ಪುರಸಭೆ ವಾರ್ಡ್ ಸದಸ್ಯ ರಾಮಣ್ಣ ಕೋಡಿಹಳ್ಳಿ ಮಾತನಾಡಿ, ಪಟ್ಟಣದಲ್ಲಿ ಧರ್ಮ, ಜಾತಿ ಮತ್ತು ವೃತ್ತಿಗಳ ಮೇಲೆ ಬಡಾವಣೆ ಹೆಸರುಗಳನ್ನು ಗುರುತಿಸಲಾಗುತ್ತಿದೆ. ಜಾತ್ಯತೀತ ರಾಷ್ಟ್ರದಲ್ಲಿರುವ ನಾವು ಸಂವಿಧಾನಬದ್ಧವಾಗಿ ಸಾಮಾಜಿಕ ನ್ಯಾಯದಡಿ ದೇಶಕ್ಕೆ ಸ್ವಾತಂತ್ಯ ಕೊಡಿಸಿದವರು ಸೇರಿದಂತೆ ಶರಣರು, ಸಾಹಿತಿಗಳು ಕ್ರೀಡಾಪಟುಗಳು ಸೇರಿದಂತೆ ವಿಶೇಷ ಸಾಧಕರು ಮತ್ತು ಪ್ರಶ್ನಾತೀತ ನಾಯಕರ ಹೆಸರನ್ನೊಳಗೊಂಡಂತೆ ಬಡಾವಣೆಗಳನ್ನು ಗುರುತಿಸುವ ಮೂಲಕ ಅವರನ್ನು ಸ್ಮರಿಸುವಂತಹ ಕೆಲಸಕ್ಕೆ ಮುಂದಾಗಬೇಕಾಗಿದೆ ಎಂದರು.ಶೀಘ್ರದಲ್ಲೇ ನಿರ್ಧಾರ: ಉಪಾಧ್ಯಕ್ಷ ಸುಭಾಸ್ ಮಾಳಗಿ ಮಾತನಾಡಿ, ಬಡಾವಣೆ ಸೇರಿದಂತೆ ರಸ್ತೆಗಳಿಗೆ ಹೆಸರನ್ನು ಇಡಬೇಕಾಗಿರುವುದು ಪುರಸಭೆ ಜವಾಬ್ದಾರಿಯಾಗಿದೆ. ಬಹು ಹಿಂದೆಯೇ ಇಂತಹ ಕಾರ್ಯಕ್ಕೆ ಚಾಲನೆ ನೀಡಬೇಕಾಗಿತ್ತು ಎಂದರು.
ಈ ಸಂದರ್ಭದಲ್ಲಿ ಬಡಾವಣೆ ನಿವಾಸಿಗಳಾದ ಎ.ಎಂ. ಹಿರೇಮಠ, ನಿವೃತ್ತ ಪೊಲೀಸ್ ಅಧಿಕಾರಿ ಎಂ.ಎಸ್. ಬಾಗೋಜಿ, ಎಂ.ಎಸ್. ಶಿರವಾಡ್ಕರ, ಮಂಜುನಾಥ ಕೋಡಿಹಳ್ಳಿ, ಎಂ.ಎಸ್. ಕುಲ್ಕರ್ಣಿ, ಹರೀಶಕುಮಾರ ರಿತ್ತಿ, ಎಸ್‌ಬಿಐ ನಿವೃತ್ತ ಉದ್ಯೋಗಿ ಪರಮೇಶ್ವರಪ್ಪ ಸೇರಿದಂತೆ ಇತರರಿದ್ದರು.ಪ್ರತಿಷ್ಠತ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಹಾವೇರಿ: ಪ್ರತಿಷ್ಠಿತ ಶಾಲಾ ಯೋಜನೆಯಡಿ 2025- 26ನೇ ಸಾಲಿಗೆ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿಗೆ ಪ್ರವೇಶಾವಕಾಶ ಹೊಂದಲು ಇಚ್ಛಿಸುವ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು ಅರ್ಜಿಯೊಂದಿಗೆ ಆರ್‌ಡಿ ಸಂಖ್ಯೆಯ ಜಾತಿ, ಆದಾಯ ಪ್ರಮಾಣಪತ್ರ, 5ನೇ ತರಗತಿ ದೃಢೀಕೃತ ಅಂಕಪಟ್ಟಿ, ಇತ್ತೀಚಿನ ಎರಡು ಭಾವಚಿತ್ರದೊಂದಿಗೆ ಅರ್ಜಿಯನ್ನು ಮೇ 3ರೊಳಗೆ ವೆಬ್‌ಸೈಟ್ ಮೂಲಕ ಸಲ್ಲಿಸಬೇಕು. ಆನ್‌ಲೈನ್ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಉಪನಿರ್ದೇಶಕರ ಕಾರ್ಯಾಲಯ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ ಹಾವೇರಿ ಈ ವಿಳಾಸಕ್ಕೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅರ್ಹ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೇ 9ರಂದು ಪ್ರವೇಶ ಪರೀಕ್ಷೆ ನಿಗದಿ ಪಡಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿ ಅಥವಾ ಆಯಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.