ಸಾರಾಂಶ
ಸ್ವಾತಿ- ಸತ್ಯ, ಚಂದ್ರಕಲಾ- ದೊರೆಸ್ವಾಮಿ ದಂಪತಿಗೆ ಆದರ್ಶ ದಂಪತಿ ಬಿರುದು ನೀಡಿ ಸನ್ಮಾನಿಸಲಾಯಿತು
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ರಾಜ್ಯ ವೈಚಾರಿಕ ಚಿಂತಕರ ವೇದಿಕೆ ಹಾಗೂ ನಮೋ ಯೋಗ ಭವನ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಮೈಸೂರು ಮಾಣಿಕ್ಯ ರತ್ನ ಪ್ರಶಸ್ತಿ ಹಾಗೂ ಆದರ್ಶ ದಂಪತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.ಎನ್.ಆರ್. ಮೊಹಲ್ಲಾ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ. ಅನಿತಾ ಉದ್ಘಾಟಿಸಿದರು. ರಾಣಿ ಪ್ರಭಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಮೈಸೂರು ಮಾಣಿಕ್ಯ ರತ್ನ ಪ್ರಶಸ್ತಿಯನ್ನು ದೀಪಿಕಾ ಮಾಧವ ಪಾಂಡುರಂಗಿ, ಪದ್ಮಶ್ರೀ ರಾವ್, ನೀಲಮ್ಮ, ಜಯಶ್ರೀ ಶಿವರಾಮ್, ರೂಪಾ, ಕವಿತಾ ಶಿರೂರು, ಮೀನಾಕ್ಷಿ ಚಟ್ನಿ, ಲಲಿತ ಕುಮಾರಿ ಚೂಡಾಮಣಿ ಅವರಿಗೆ ಪ್ರದಾನ ಮಾಡಲಾಯಿತು.ಸ್ವಾತಿ- ಸತ್ಯ, ಚಂದ್ರಕಲಾ- ದೊರೆಸ್ವಾಮಿ ದಂಪತಿಗೆ ಆದರ್ಶ ದಂಪತಿ ಬಿರುದು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯ ಸಂಚಾಲಕ ಎಸ್.ಜಿ. ಯೋಗ ಭವನದ ಶಿಕ್ಷಕ ಮಲ್ಲಿಕಾರ್ಜುನ್, ವೇದಿಕೆಯ ಸುರೇಶ್ಚಂದ್ರ ಇದ್ದರು.ಡಾ. ವಿನೋದಾ ಸ್ವಾಗತಿಸಿದರು ಡಾ. ಕಾವೇರಿ ಪ್ರಕಾಶ್ ನಿರೂಪಿಸಿದರು . ಪನ್ನಗ ವಿಜಯಕುಮಾರ್ ತಂಡ ಪ್ರಾರ್ಥಿಸಿದರು.ಗೀತಾ ಶ್ರೀಧರ್ ವಂದಿಸಿದರು .