ಹನುಮಸಾಗರ ಗ್ರಾಮದೇವತೆಗೆ ನಂದಾದೀಪ ಕಾರ್ಯಕ್ರಮ

| Published : May 12 2024, 01:22 AM IST

ಸಾರಾಂಶ

ಹನುಮಸಾಗರ ಗ್ರಾಮದೇವತೆ ದ್ಯಾಮಾಂಬಿಕಾ ದೇವಿ ಜಾತ್ರೆ ನಿಮಿತ್ತ ಮೇ 13ರಿಂದ 17ರ ವರೆಗೆ ವಿವಿಧ ಕಾರ್ಯಕ್ರಮ ನಡೆಯಲಿದೆ. ಮೇ 11ರಂದು ನಂದಾದೀಪ ಕಾರ್ಯಕ್ರಮ ನಡೆಯಿತು.

ಹನುಮಸಾಗರ: ಗ್ರಾಮದ ಆರಾಧ್ಯ ದೈವವಾದ ಶ್ರೀ ಗ್ರಾಮದೇವತೆ ದ್ಯಾಮಾಂಬಿಕಾ ಜಾತ್ರೆಯ ನಿಮಿತ್ತ ದೇವರಿಗೆ ನಾನಾ ಸಮುದಾಯದವರು ಶುಕ್ರವಾರ ನಂದಾದೀಪ ಹಚ್ಚಿದರು. ಮುತ್ತೈದೆಯರು ಕಳಸ ಕನ್ನಡಿ ಹಿಡಿದು ಗ್ರಾಮದ ನಾನಾ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ದೇವಸ್ಥಾನದಲ್ಲಿ ಮೇ 13ರಿಂದ ಮೇ 17ರವರೆಗೆ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೇ 13ರಂದು ರಾತ್ರಿ ೮.೩೫ಕ್ಕೆ ಸಕಲ ವಾದ್ಯ ವೈಭವದೊಂದಿಗೆ ಮೆರವಣಿಗೆಯಲ್ಲಿ ದೇವಿಯನ್ನು ತವರು ಮನೆಗೆ ಕರೆದೊಯ್ಯಲಾಗುತ್ತದೆ. ಮೇ ೧೪ರಂದು ರಾತ್ರಿ ೧೧.೪೫ಕ್ಕೆ ತವರು ಮನೆಯಿಂದ ಗಂಡನ ಮನೆ ಭಾಜಾ ಭಜಂತ್ರಿಯವರ ಸಕಲ ವಾದ್ಯಗಳೊಂದಿಗೆ ಮೆರವಣಿಗೆಯೊಂದಿಗೆ ಕರೆತರಲಾಗುವುದು. ಮೇ ೧೬ರಂದು ಭಕ್ತರು ಮಡಿಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುವರು. ದೀಡ್ ನಮಸ್ಕಾರ ಹಾಕುವರು. ಆನಂತರ ಪ್ರತಿ ಬಾರಿಯಂತೆ ದ್ಯಾಮಾಂಬಿಕಾ ದೇವಿಗೆ ಮೇ ೧೭ರಂದು ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ದೇವಸ್ಥಾನದಲ್ಲಿ ಹೋಮ, ಹವನ, ಅಭಿಷೇಕ, ನಾನಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.

ಪ್ರಮುಖರಾದ ಯಲಬುಣಚಿ ಗ್ರಾಮದ ದೇಸಾಯಿ ಮನೆತನದ ವೆಂಕಪ್ಪಯ್ಯ ದೇಸಾಯಿ ಅವರು ಪೂಜೆ ಸಲ್ಲಿಸುವರು. ತಿಮ್ಮನಗೌಡ್ರ ಪೊಲೀಸ್ ಪಾಟೀಲ, ಸೂಚಪ್ಪ ದೇವರಮನಿ, ಮಹಾಂತೇಶ ಅಗಸಿಮುಂದಿನ, ದ್ಯಾಮಣ್ಣ ಬಿಂಗಿ, ಬಸವರಾಜ ಹಳ್ಳೂರ, ಸಕ್ರಪ್ಪ ಬಿಂಗಿ, ಶಿವಕುಮಾರ ಸಂಗಮದ, ಸಂಗಯ್ಯ ವಸ್ತ್ರದ, ಮರೇಗೌಡ ಬೋದುರ, ಬಸವರಾಜ ಬಿಲ್ಕಾರ, ಹನುಮಂತ ಪೂಜಾರ, ಚಂದಪ್ಪ ಗುಡಲದಿನ್ನಿ, ವೀರೇಶ ಕಟಗಿ, ಹನುಮಂತ ಹಡಪದ, ಯುವಕರಾದ ಭರಮಲಿಂಗಪ್ಪ, ಮಾಲತೇಶ, ಚಂದ್ರು, ಹುಲಗಪ್ಪ, ಪ್ರದೀಪ ಹಾಗೂ ಮುತ್ತೈದೆಯರು ಇತರರು ಇದ್ದರು.