ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ೬೦೦ರಲ್ಲಿ ೫೯೮ ಅಂಕ ಪಡೆದ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ನಂದನ್ ನಾಯಕ್ ಹಾಗೂ ಸಮನ್ಯೂ ಎಸ್.ಶೆಟ್ಟಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಮಂಗಳೂರು: ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ೬೦೦ರಲ್ಲಿ ೫೯೮ ಅಂಕ ಪಡೆದ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ನಂದನ್ ನಾಯಕ್ ಹಾಗೂ ಸಮನ್ಯೂ ಎಸ್.ಶೆಟ್ಟಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ನಂದನ್ ನಾಯಕ್ ಹಾಗೂ ಸಮನ್ಯೂ ಎಸ್.ಶೆಟ್ಟಿ ಅವರು ನಾಲ್ಕು ವಿಷಯಗಳಲ್ಲಿ ತಲಾ ೧೦೦ ಅಂಕ ಪಡೆದಿದ್ದಾರೆ. ಐವರು ವಿದ್ಯಾರ್ಥಿಗಳು ೫೯೬ ಅಂಕ, ಮೂವರು ವಿದ್ಯಾರ್ಥಿಗಳು ೫೯೫ ಅಂಕ, ಐವರು ವಿದ್ಯಾರ್ಥಿಗಳು ೫೯೪ ಅಂಕ, ಐವರು ವಿದ್ಯಾರ್ಥಿಗಳು ೫೯೩ ಅಂಕ, ಆರು ವಿದ್ಯಾರ್ಥಿಗಳು ೫೯೨ ಅಂಕ, ಆರು ವಿದ್ಯಾರ್ಥಿಗಳು ೫೯೧ ಅಂಕ, ಎಂಟು ವಿದ್ಯಾರ್ಥಿಗಳು ೫೯೦ ಅಂಕ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.
೬೦೦ರಲ್ಲಿ ೫೯೬ ಅಂಕ ಪಡೆದ ಕಾಲೇಜಿನ ಅಮೋಘ ಬಿ.ಲೋಕ, ಅದಿತಿ ಐ. ರೆಡ್ಡಿ, ಸುಶಾಂನ್ ನಾರಾಯಣ ಬಿಲ್ಲವ, ಅಭಿಷೇಕ್ ಆರ್. ಹನುಮಂತ ಗೌಡರ್ ಹಾಗೂ ದೀಕ್ಷಾ ಶೆಣೈ ತೃತೀಯ ಸ್ಥಾನ ಪಡೆದಿದ್ದಾರೆ. ಉಳಿದಂತೆ ೫೯೫ ಅಂಕವನ್ನು ಶ್ರೀವತ್ಸ ಎಂ., ಸುಮೇಧಾ ಎಂ., ಶಾರಂಗಿ ಯು.ಎಸ್., ೫೯೪ ಅಂಕವನ್ನು ಪ್ರೇರಣಾ ಪಾಟೀಲ್, ಮುಕ್ತಾ ಎಸ್., ಸಮಯ ಎ.ಎಸ್., ನಿಯೋಲಾ ಕ್ರಿಸ್ಟಲ್ ಲೋಬೋ, ವೈಭವ್ ಎನ್.ಶೆಟ್ಟಿ, ೫೯೩ ಅಂಕವನ್ನು ಸಮರ್ಥ್ ಗೌಡ ಎಲ್.ಆರ್., ಮೋಹಿತ್ ಎಸ್., ಅಸ್ಮಿ ಶೆಟ್ಟಿ, ಪ್ರಣತಿ ಎಸ್., ಸ್ಕಂದ ಜೆ. ಐಲ್, ೫೯೨ ಅಂಕವನ್ನು ಸಾಚಿ ರಾಜೇಶ್ ಗುಂಡ, ಪಾಲ್ಗುನ್ ಟಿ.ಎಸ್., ಉಜ್ವಲ್ ಶಿವಾನಂದ್ ಬೂದಿಹಾಳ್, ವೈಭವಿ ಸರಳಾಯ, ಜೋವಿಲಾ ವೆನೋನಾ ರಾಡ್ರಿಗಸ್, ಅಕ್ಷಯ ಮಲ್ಯ, ೫೯೧ ಅಂಕವನ್ನು ಸೋಮ ಕೀರ್ತನಾ, ರಿಷಿಕಾ ಕೆ.ಎಸ್., ಜಿ.ಸಿಂಚನ, ತುಷಾರ ನಾರಾಯಣ, ಜಿತಿನ್ ಗೌಡ ಎನ್., ಸಮೃದ್ಧಿ ಎಸ್. ಅಮತಿಗೌಡರ್, ೫೯೦ ಅಂಕವನ್ನು ರಿಯಾ ಶಶಿಕಾಂತ ಚನ್ನವರ್, ಹೂರ್ ಮೊಮಿನ್, ಧೀರಜ್ ಎನ್., ಕೃತಿಕಾ ಮಲ್ಲಿಕಾರ್ಜುನ ಪಾಟೀಲ್, ಪೊನ್ನೇಶ್ ಎ.ಸಿ., ಪ್ರತೀಕ್ ಎಂ.ಆರ್., ಡೇನಿಯಲ್ ಜೋಸೆಫ್ ಮಿರಾಂಡಾ, ಆನಂದ್ ಜಿ. ನಾಯಕ್ ಪಡೆದಿದ್ದಾರೆ. ಹೀಗೆ ಮೊದಲ ಹತ್ತು ಸ್ಥಾನವನ್ನು ಸಂಸ್ಥೆಯ ೪೦ ವಿದ್ಯಾರ್ಥಿಗಳು ಪಡೆಯುವ ಮೂಲಕ ಐತಿಹಾಸಿಕ ದಾಖಲೆ ಮಾಡಿದ್ದಾರೆ.ಒಟ್ಟು ೧,೫೬೯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ. ೯೯ಕ್ಕಿಂತ ಅಧಿಕ ಅಂಕಗಳನ್ನು ೧೧ ವಿದ್ಯಾರ್ಥಿಗಳು ಪಡೆದ್ದಾರೆ. ಅದೇ ರೀತಿ ಶೇ. ೯೮ಕ್ಕಿಂತ ಅಧಿಕ ೭೭, ಶೇ. ೯೭ಕ್ಕಿಂತ ಅಧಿಕ ೧೭೩, ಶೇ. ೯೬ಕ್ಕಿಂತ ಅಧಿಕ ೩೨೫, ಶೇ. ೯೫ಕ್ಕಿಂತ ಅಧಿಕ ೪೯೭ ವಿದ್ಯಾರ್ಥಿಗಳು ಪಡೆದರೆ, ಶೇ.೯೦ಕ್ಕಿಂತ ಅಧಿಕ ೧೧೩೪, ಶೇ.೮೫ಕ್ಕಿಂತ ಅಧಿಕ ೧,೪೨೫ ಹಾಗೂ ಶೇ.೮೦ಕ್ಕಿಂತ ಅಧಿಕ ೧,೫೧೫ ವಿದ್ಯಾರ್ಥಿಗಳು ಪಡೆದಿದ್ದಾರೆ. ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.೫ ವಿದ್ಯಾರ್ಥಿಗಳು ೪ ವಿಷಯಗಳಲ್ಲಿ, ೨೧ ವಿದ್ಯಾರ್ಥಿಗಳು ೩ ವಿಷಯಗಳಲ್ಲಿ, ೮೩ ವಿದ್ಯಾರ್ಥಿಗಳು ೨ ವಿಷಯಗಳಲ್ಲಿ ಹಾಗೂ ೨೫೪ ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿರುತ್ತಾರೆ. ಇನ್ನು ಫಿಸಿಕ್ಸ್‌ನಲ್ಲಿ ೨೭ ವಿದ್ಯಾರ್ಥಿಗಳು, ಕೆಮೆಸ್ಟ್ರಿಯಲ್ಲಿ ೫೨, ಬಯೋಲಾಜಿಯಲ್ಲಿ ೮೮, ಮ್ಯಾಥಮೆಟಿಕ್ಸ್‌ನಲ್ಲಿ ೧೫೩, ಕಂಪ್ಯೂಟರ್ ಸೈನ್ಸ್‌ನಲ್ಲಿ ೨೬, ಇಲೆಕ್ಟ್ರಾನಿಕ್ಸ್‌ನಲ್ಲಿ ೧, ಸ್ಟ್ಯಾಟ್‌ನಲ್ಲಿ ೩, ಹೋಮ್ ಸೈನ್ಸ್‌ನಲ್ಲಿ ೫, ಸಂಸ್ಕೃತದಲ್ಲಿ ೧೧೭, ಕನ್ನಡದಲ್ಲಿ ೨೯, ಹಿಂದಿಯಲ್ಲಿ ೫, ಫ್ರೆಂಚ್‌ನಲ್ಲಿ ೧, ಇಂಗ್ಲೀಷ್‌ನಲ್ಲಿ ೧ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
ಎಕ್ಸ್‌ಪರ್ಟ್‌ನ ಶೈಕ್ಷಣಿಕ ಶ್ರೇಷ್ಠತೆಗೆ ಫಲಿತಾಂಶ ಸಾಕ್ಷಿ: ಪ್ರೊ.ನರೇಂದ್ರ ಎಲ್.ನಾಯಕ್ : ಪ್ರತಿ ವರ್ಷ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅದ್ವಿತೀಯ ಸಾಧನೆ ಮಾಡುತ್ತಿರುವ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆ ಈ ವರ್ಷವೂ ಅದೇ ಸಾಧನೆಯ ಹಾದಿಯಲ್ಲಿದೆ. ಈ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ನಮ್ಮ ವಿದ್ಯಾರ್ಥಿಗಳು ಸಾಧಿಸಿರುವ ಅದ್ಭುತ ಫಲಿತಾಂಶ ಸಂಸ್ಥೆಯ ಶೈಕ್ಷಣಿಕ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ರಾಜ್ಯಮಟ್ಟದಲ್ಲಿ ಮೆರೆದಿರುವ ಮೇರು ಸಾಧನೆಗಳು, ಶೇ. ೧೦೦ರ ಉತ್ತೀರ್ಣತೆ ಹಾಗೂ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳ ಸಾಧನೆ ನಮ್ಮೆಲ್ಲರಿಗೂ ಅಪಾರ ಹೆಮ್ಮೆ ತಂದಿದೆ. ಈ ಯಶಸ್ಸು ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಸಮರ್ಪಿತ ಮಾರ್ಗದರ್ಶನ ಮತ್ತು ಪೋಷಕರ ಅಮೂಲ್ಯ ಸಹಕಾರದ ಫಲವಾಗಿದೆ. ಮುಂದಿನ ದಿನಗಳಲ್ಲಿ ಕೂಡ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದುಕೊಡಲಿದ್ದಾರೆ ಎಂಬ ವಿಶ್ವಾಸ ನಮ್ಮದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ತಿಳಿಸಿದ್ದಾರೆ.