ಚಿಂಚೋಳಿ: ಐನೋಳಿ ಬಸವಣ್ಣ ಜಾತ್ರೆ ನಿಮಿತ್ತ ಅದ್ಧೂರಿ ರಥೋತ್ಸವ

| Published : May 10 2024, 11:46 PM IST

ಚಿಂಚೋಳಿ: ಐನೋಳಿ ಬಸವಣ್ಣ ಜಾತ್ರೆ ನಿಮಿತ್ತ ಅದ್ಧೂರಿ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ವಿಶೇಷ ಪೂಜೆ, ಅಗ್ನಿ ಪೂಜೆ, ಸಂಭ್ರಮದಿಂದ ಉಚ್ಛಾಯಿ ನಡೆಯಿತು. ತೇರಿನ ಮೇಲೆ ಉತ್ತತ್ತಿ, ನಾರು, ಹೂವು, ಬೆಂಡು ಬತಾಸು, ಕೊಬ್ಬರಿ, ಬಾಳೆಹಣ್ಣು ಎಸೆದರು. ರಥೋತ್ಸವ ನಿಮಿತ್ತ ಕುಂಭಾಭಿಷೇಕ ನಡೆಯಿತು.

ಚಿಂಚೋಳಿ: ತಾಲೂಕಿನ ಐನೋಳಿ ಗ್ರಾಮದ ಸಾವಿರಾರು ಭಕ್ತರ ಆರಾಧ್ಯ ದೇವ ನಂದಿ ಬಸವಣ್ಣ ದೇವರ ಜಾತ್ರೆಯ ನಿಮಿತ್ತ ರಥೋತ್ಸವ ಅತ್ಯಂತ ಸಂಭ್ರಮದಿಂದ ಜರುಗಿತು.

ಗ್ರಾಮದ ಬಸವಣ್ಣ ದೇವರ ಜಾತ್ರೆಯ ಅಂಗವಾಗಿ ಬೆಳಗಿನಿಂದಲೇ ವಿಶೇಷ ಪೂಜೆ, ಅಗ್ನಿ ಪೂಜೆ ಮತ್ತು ಪಲ್ಲಕ್ಕಿ ಉಚ್ಛಾಯಿ ಮೆರವಣಿಗೆ ನಡೆದವು. ಭಕ್ತರು ಬೆಂಕಿ ತುಳಿದು ತಮ್ಮ ಹರಕೆ ಅರ್ಪಿಸಿದರು.

ಸರನಾಲೆ ನದಿಯ ದಡದ ಮಶಾಕ ಅಲಿ ದರ್ಗಾದ ಹತ್ತಿರ ಮೈದಾನದಲ್ಲಿ ವಿವಿಧ ಹೂವುಗಳಿಂದ ಅಲಂಕರಿಸಿದ ಬಸವಣ್ಣ ದೇವರ ತೇರನ್ನು ಸಾವಿರಾರು ಭಕ್ತರು ಸಂಭ್ರಮದಿಂದ ಎಳೆದು ತಮ್ಮ ಭಕ್ತಿಯ ಸೇವೆಯ ಹರಕೆಯನ್ನು ಅರ್ಪಿಸಿದರು. ತೇರಿನ ಮೇಲೆ ಉತ್ತತ್ತಿ, ನಾರು, ಹೂವು, ಬೆಂಡು ಬತಾಸು, ಕೊಬ್ಬರಿ, ಬಾಳೆಹಣ್ಣು ಎಸೆದರು.

ರಥೋತ್ಸವ ನಿಮಿತ್ತ ಕುಂಭಾಭಿಷೇಕ ನಡೆಯಿತು.ಜಾತ್ರೆಯಲ್ಲಿ ಬೀದರ್‌, ಕಲಬುರಗಿ, ಚಿಂಚೋಳಿ, ಫತ್ತೆಪೂರ, ಚಂದ್ರಂಪಳ್ಳಿ, ದೇಗಲಮಡಿ, ಕೊಳ್ಳುರ, ನಾಗಾಇದಲಾಯಿ, ತುಮಕುಂಟಾ, ಪಟಪಳ್ಳಿ, ಎಂಪಳ್ಳಿ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ಬಸವಣ್ಣ ದೇವರ ದರ್ಶನ ಪಡೆದುಕೊಂಡರು. ಜಾತ್ರೆಗೆ ಆಗಮಿಸಿದ ಭಕ್ತರಿಗೆ ರಾಮಲಿಂಗೇಶ್ವರ ಯುವಕ ಸಂಘದಿಂದ ಶುದ್ಧವಾದ ಕುಡಿಯುವ ನೀರು, ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಮುಖಂಡರಾದ ಮಾಜಿ ಅಧ್ಯಕ್ಷ ದೀಪಕನಾಥ ಪುಣ್ಯಶೆಟ್ಟಿ, ಬಸವರಾಜ ಪುಣ್ಯಶೆಟ್ಟಿ, ವಿಜಯಕುಮಾರ ರೊಟ್ಟಿ, ಜಯಪ್ರಕಾಶ ಕೊಡಂಪಳ್ಳಿ, ಅಲ್ಲಾವುದ್ದೀನ್, ವೀರೇಂದ್ರ ಮುರುಡಾ, ರಾಮಯ್ಯ ಸ್ವಾಮಿ, ಭೀಮಶೆಟ್ಟಿ ಮುರುಡಾ, ವೀರಶೆಟ್ಟಿ ಗೌನಳ್ಳಿ, ನಂದಕುಮಾರ, ವೀರಶೆಟ್ಟಿ ಪಾಟೀಲ, ಸಂಜೀವಕುಮಾರ ಪುಣ್ಯಶೆಟ್ಟಿ, ಅಶೋಕ ಭಜಂತ್ರಿ, ಶಶಿಕುಮಾರ ಗಾರಂಪಳ್ಳಿ ಅನೇಕರು ಭಾಗವಹಿಸಿದ್ದರು.