ಇಂದು ಹರಿಹರಕ್ಕೆ ನಂದಿ ರಥಯಾತ್ರೆ ಆಗಮನ: ಬಿಳಿಚೋಡು ಕುಮಾರಸ್ವಾಮಿ

| Published : Feb 13 2025, 12:48 AM IST

ಇಂದು ಹರಿಹರಕ್ಕೆ ನಂದಿ ರಥಯಾತ್ರೆ ಆಗಮನ: ಬಿಳಿಚೋಡು ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಸೀ ಹಸು ತಳಿಗಳ ಬಗ್ಗೆ ರೈತರು, ಜನರಲ್ಲಿ ಜಾಗೃತಿ ಮೂಡಿಸಲು ಗೋ ಸೇವಾ ಗತಿವಿಧಿ ಕರ್ನಾಟಕದಿಂದ ಕಳೆದ ಡಿ.31ರಿಂದ ಕೈಗೊಂಡಿರುವ ನಂದಿ ರಥಯಾತ್ರೆ ಫೆ.29ರಂದು ಮಂಗಳೂರಿನಲ್ಲಿ 9 ದಿನಗಳ ರಾಮ ಮಹೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಗೋ ಸೇವಾ ಗತಿವಿಧಿ ಪ್ರಾಂತ ಸಂಚಾಲಕ ಬಿಳಿಚೋಡು ಕುಮಾರಸ್ವಾಮಿ ಹರಿಹರದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ದೇಸೀ ಹಸು ತಳಿಗಳ ಬಗ್ಗೆ ರೈತರು, ಜನರಲ್ಲಿ ಜಾಗೃತಿ ಮೂಡಿಸಲು ಗೋ ಸೇವಾ ಗತಿವಿಧಿ ಕರ್ನಾಟಕದಿಂದ ಕಳೆದ ಡಿ.31ರಿಂದ ಕೈಗೊಂಡಿರುವ ನಂದಿ ರಥಯಾತ್ರೆ ಫೆ.29ರಂದು ಮಂಗಳೂರಿನಲ್ಲಿ 9 ದಿನಗಳ ರಾಮ ಮಹೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಗೋ ಸೇವಾ ಗತಿವಿಧಿ ಪ್ರಾಂತ ಸಂಚಾಲಕ ಬಿಳಿಚೋಡು ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆ ರಾಣೆಬೆನ್ನೂರೂನಿಂದ ದಾವಣಗೆರೆ ಜಿಲ್ಲೆಯ ಹರಿಹರಕ್ಕೆ ಫೆ.13ರಂದು ಮಧ್ಯಾಹ್ನ 3.30ಕ್ಕೆ ನಂದಿ ರಥಯಾತ್ರೆ ಆಗಮಿಸಲಿದೆ. ಅಲ್ಲಿಂದ ಹೊರಟು ಫೆ.14ರಂದು ಮಧ್ಯಾಹ್ನ 3.30ಕ್ಕೆ ದಾವಣಗೆರೆ ಮಹಾನಗರಕ್ಕೆ ತಲುಪಲಿದೆ ಎಂದರು.

ಇಲ್ಲಿನ ವಿದ್ಯಾರ್ಥಿ ಭವನ ವೃತ್ತದಲ್ಲಿ ಪೂರ್ಣಕುಂಭ, ವಾದ್ಯ ಮೇಳದೊಂದಿಗೆ ನಂದಿ ರಥಯಾತ್ರೆಗೆ ಅದ್ಧೂರಿ ಸ್ವಾಗತ ಕೋರಲಾಗುವುದು. ಅನಂತರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ಪಿಜೆ ಬಡಾವಣೆಯ ಶ್ರೀರಾಮ ಮಂದಿರವನ್ನು ರಥಯಾತ್ರೆ ತಲುಪಲಿದೆ. ಇಲ್ಲಿಂದ ನಂದಿ ರಥಯಾತ್ರೆಯು ಹರಪನಹಳ್ಳಿ, ಕೂಡ್ಲಿಗಿ ತಾಲೂಕಿನತ್ತ ಸಾಗಲಿದೆ ಎಂದು ವಿವರಿಸಿದರು.

ಫೆ.22ರಂದು ಮಹಾ ಶಿವರಾತ್ರಿಯಂದು ಮನೆ ಮನೆಗಳು, ಮಠ ಮಂದಿರಗಳಲ್ಲಿ ದೀಪ ಬೆಳಗಿಸಿ, 108 ಅಥವಾ 1008 ಸಲ ಶ್ರೀ ಸಾಂಬ ಸದಾಶಿವಾಯ ನಮಃ ಮಂತ್ರ ಪಠಿಸಬೇಕು. ಆ ದಿನ ನಂದಿ ಗ್ರಾಮ, ಮುದ್ದೇನಹಳ್ಳಿಯಲ್ಲಿ ನಂದಿ ಉತ್ಸವ ಮತ್ತು ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ. ರಥಯಾತ್ರೆ ತಂಗುವ ಕ್ಷೇತ್ರದಲ್ಲಿ ಪ್ರತಿದಿನ ಸಂಜೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಗೋಕಥೆ ನಡೆಯಲಿದೆ. 88 ದಿನಗಳ ರಾಜ್ಯಾದ್ಯಂತ ಸಂಚರಿಸುವ ನಂದಿ ರಥಯಾತ್ರೆಯು ಸುಮಾರು 1 ಕೋಟಿ ಗೋಮಯ ಹಣತೆ ಬೆಳಗಿಸಿ, ಮನೆ, ಮನ, ಪರಿಸರ ಸ್ವಚ್ಛಗೊಳಿಸುತ್ತಿದೆ ಎಂದು ಬಿಳಿಚೋಡು ಕುಮಾರಸ್ವಾಮಿ ತಿಳಿಸಿದರು.

ಗೋ ಸೇವಾ ಗತಿವಿಧಿ ಕರ್ನಾಟಕದ ಜಿಲ್ಲಾ ಸಂಚಾಲಕ ಟಿ.ಎಂ.ಶಿವಲಿಂಗಪ್ಪ, ಶಾಂತಕುಮಾರ ವಿ.ಪುರಾಣಿಕ ಮಠ ಇದ್ದರು.

- -

-12ಕೆಡಿವಿಜಿ2: