ಸಾರಾಂಶ
ಮಂಗಳೂರಿನಿಂದ ಆರಂಭಗೊಂಡಿರುವ ನಂದಿ ರಥಯಾತ್ರೆಗೆ ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಮಂಗಳೂರಿನಿಂದ ಆರಂಭಗೊಂಡಿರುವ ನಂದಿ ರಥಯಾತ್ರೆಗೆ ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.ಮಂಗಳವಾರ ಕನ್ನಡ ವೃತ್ತದಲ್ಲಿ ಜಮಾವಣೆಗೊಂಡಿದ್ದ ನಂದಿ ರಥಯಾತ್ರೆಯು ಆಗಮಿಸುತ್ತಿದ್ದಂತೆ ರಥಕ್ಕೆ ಕೊಡಗು ಜಿಲ್ಲಾ ವಿಶ್ವಹಿಂದೂ ಪರಿಷತ್ ಮಾಜಿ ಕಾರ್ಯದರ್ಶಿ ಡಿ.ನರಸಿಂಹ ಹಾಗೂ ಸುಂಟಿಕೊಪ್ಪ ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ನಂತರ ಮೆರವಣಿಗೆಯೊಂದಿಗೆ ನಗರದ ಬೀದಿಗಳಲ್ಲಿ ಸಾಗಿ ಶ್ರೀ ಪುರಂ ಅಯ್ಯಪ್ಪ ದೇವಾಲಯದವರೆಗೆ ಸಾಗಿ ಅಲ್ಲಿಂದ ಕುಶಾಲನಗರ ಕಡೆಗೆ ಬೀಳ್ಕೊಡಲಾಯಿತು.
ಈ ಸಂದರ್ಭ ಗ್ರಾ.ಪಂ. ಬಿ. ಎಂ. ಸುರೇಶ್, ಶಕ್ತಿ ಕೇಂದ್ರದ ಅಧ್ಯಕ್ಷ ಧನುಕಾವೇರಪ್ಪ, ಬಿ.ಕೆ.ಮೋಹನ್, ಸಹದೇವ, ಹರೀಶ್, ಬಿ.ಎಸ್.ಆನಂದ, ವಾಸು, ಮುರುಳೀಧರ್ ಕಾಮತ್, ಶಾಂತಿ ನಂಜುಂಡ ಸೇರಿದಂತೆ ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))