ಕನ್ನಡಪ್ರಭ ವಾರ್ತೆ ವಿಜಯಪುರ ಜೋಡೆತ್ತಿನ ಕೃಷಿಗೆ ಪ್ರಥಮಾದ್ಯತೆ ನೀಡುವುದು, ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹ 11 ಸಾವಿರ ಪ್ರೋತ್ಸಾಹ ಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಅಭಿಯಾನ ನಡೆಸುತ್ತಿರುವ ನಂದಿ ಸೇನೆ ಈಗ ಮತ್ತೊಂದು ಸ್ವರೂಪದ ಹೋರಾಟಕ್ಕೆ ಅಣಿಯಾಗಿದೆ. ಬಿಜ್ಜರಗಿಯ ಸನ್ಯಾಸಪ್ಪನ ಮಠದಲ್ಲಿ 11 ದಿನಗಳ ಕಾಲ ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹದ ಮೂಲಕ ಹೋರಾಟ ನಡೆಸಲು ಮುಂದಾಗಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಜೋಡೆತ್ತಿನ ಕೃಷಿಗೆ ಪ್ರಥಮಾದ್ಯತೆ ನೀಡುವುದು, ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹ 11 ಸಾವಿರ ಪ್ರೋತ್ಸಾಹ ಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಅಭಿಯಾನ ನಡೆಸುತ್ತಿರುವ ನಂದಿ ಸೇನೆ ಈಗ ಮತ್ತೊಂದು ಸ್ವರೂಪದ ಹೋರಾಟಕ್ಕೆ ಅಣಿಯಾಗಿದೆ. ಬಿಜ್ಜರಗಿಯ ಸನ್ಯಾಸಪ್ಪನ ಮಠದಲ್ಲಿ 11 ದಿನಗಳ ಕಾಲ ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹದ ಮೂಲಕ ಹೋರಾಟ ನಡೆಸಲು ಮುಂದಾಗಿದೆ.ನಗರದ ಶ್ರೀ ಸಿದ್ದೇಶ್ವರ ದೇವಾಲಯದ ಸನ್ನಿಧಿಯಲ್ಲಿ ಜೋಡೆತ್ತುಗಳ ಸಮ್ಮುಖದಲ್ಲಿಯೇ ಸುದ್ದಿಗೋಷ್ಠಿ ನಡೆಸಿ ಈ ವಿಷಯವನ್ನು ಪ್ರಕಟಿಸಿದ ಹೋರಾಟದ ರೂವಾರಿ ಬಸವರಾಜ ಬಿರಾದಾರ ಮಾತನಾಡಿ, ಜೋಡೆತ್ತುಗಳೇ ಕೃಷಿಗೆ ಆಧಾರ. ಜೋಡೆತ್ತಿನ ಕೃಷಿಗೆ ಆದ್ಯತೆ ನೀಡದ ಪರಿಣಾಮ ಇಂದು ಅನೇಕ ಸಮಸ್ಯೆಗಳು ಉಂಟಾಗುತ್ತಿವೆ. ಹೀಗಾಗಿ ಇನ್ನೊಂದು ಸ್ವರೂಪದ ಹೋರಾಟವನ್ನು ಕೈಗೊಳ್ಳಲಾಗುತ್ತಿದೆ. ಸರ್ಕಾರ ಜೋಡೆತ್ತು ಕೃಷಿಕರ ನ್ಯಾಯಯುತ ಬೇಡಿಕೆ ಈಡೇರಿಸಬೇಕು, ಇಲ್ಲವಾದರೆ ಕೃಷಿ ವಿಜ್ಞಾನಿಗಳ ತಂಡವನ್ನು ಕಳುಹಿಸಿ ಬಯಲು ಸೀಮಯಲ್ಲಿ ಎತ್ತುಗಳಿಲ್ಲದೇ ಪಂಚಮಹಾಭೂತಗಳನ್ನು ರಕ್ಷಿಸುವ ವಿಧಾನವನ್ನು ನಿರೂಪಿಸುವ ಕಾರ್ಯ ಮಾಡಿ ಎಂದು ಒತ್ತಾಯಿಸಿದರು.
ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ತಪಸ್ಸು ನಿರತರಾಗಿದ್ದ ಪಾವನ ನೆಲ ಬಿಜ್ಜರಗಿಯ ಶ್ರೀ ಸನ್ಯಾಸಪ್ಪ ಮಠ. ಹೀಗಾಗಿ, ಈ ಪಾವನ ಕ್ಷೇತ್ರದಲ್ಲಿ ಈ ಅಭಿಯಾನಕ್ಕೆ ದೊಡ್ಡ ಮಟ್ಟದ ಹೋರಾಟ ಕೈಗೊಳ್ಳಲಾಗುತ್ತಿದೆ. ಅ.8 ರಿಂದ ಅ.18ರ ವರೆಗೆ ನಿರಂತರ ಹೋರಾಟ ನಡೆಯಲಿದೆ, ಆಗಲೂ ಸರ್ಕಾರ ಸ್ಪಂದನೆ ಮಾಡದೇ ಹೋದರೆ 1 ಲಕ್ಷ ಎತ್ತಿನ ಬಂಡಿಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ತಡೆಯುವ ಮೂಲಕ ಸರ್ಕಾರದ ಕಣ್ಣು ತೆರೆಸುವ ಕಾರ್ಯ ಮಾಡಲಾಗುವುದು ಎಂದು ಬಿರಾದಾರ ಹೇಳಿದರು.ಅಭಿಯಾನಕ್ಕೆ ಕೈ ಜೋಡಿಸಿದ ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ ಮಾತನಾಡಿ, ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಸತ್ವವೇ ಕ್ಷೀಣಿಸಿದೆ. ಇದರ ಪರಿಣಾಮ ಆಹಾರ ಪದಾರ್ಥಗಳ ಮೇಲಾಗಿದೆ. ಭಾರತದ ಕೃಷಿ ಜೋಡೆತ್ತಿನ ಕೃಷಿ, ಹೀಗಾಗಿ ಈ ಬಗ್ಗೆ ದೊಡ್ಡ ಅಭಿಯಾನವೇ ಆರಂಭವಾಗಿರುವುದು ಸಂತೋಷ ತಂದಿದೆ. ಈ ಅಭಿಯಾನಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ನಿವೃತ್ತ ಕೃಷಿ ಅಧಿಕಾರಿ ನಾಡಗೌಡ, ಎಸ್.ಬಿ.ಕಾಮನ್ನವರ, ಚಂದ್ರಗೌಡ ಬಿರಾದಾರ ಪಾಟೀಲ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.---
ಕೋಟ್ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ತಪಸ್ಸು ನಿರತರಾಗಿದ್ದ ಪಾವನ ನೆಲ ಬಿಜ್ಜರಗಿಯ ಶ್ರೀ ಸನ್ಯಾಸಪ್ಪ ಮಠ. ಹೀಗಾಗಿ, ಈ ಪಾವನ ಕ್ಷೇತ್ರದಲ್ಲಿ ಈ ಅಭಿಯಾನಕ್ಕೆ ದೊಡ್ಡ ಮಟ್ಟದ ಹೋರಾಟ ಕೈಗೊಳ್ಳಲಾಗುತ್ತಿದೆ. ಅ.8 ರಿಂದ ಅ.18ರ ವರೆಗೆ ನಿರಂತರ ಹೋರಾಟ ನಡೆಯಲಿದೆ, ಆಗಲೂ ಸರ್ಕಾರ ಸ್ಪಂದನೆ ಮಾಡದೇ ಹೋದರೆ 1 ಲಕ್ಷ ಎತ್ತಿನ ಬಂಡಿಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ತಡೆಯುವ ಮೂಲಕ ಸರ್ಕಾರದ ಕಣ್ಣು ತೆರೆಸುವ ಕಾರ್ಯ ಮಾಡಲಾಗುವುದು. ಬಸವರಾಜ ಬಿರಾದಾರ, ಹೋರಾಟದ ರೂವಾರಿ