ಸಾರಾಂಶ
₹25 ಸಾವಿರಕ್ಕೂ ಹೆಚ್ಚಿನ ಮೌಲ್ಯದ ವಸ್ತುಗಳನ್ನು ನೀಡಲಾಯಿತು.
ಜೋಯಿಡಾ: ತಾಲೂಕಿನ ನಂದಿಗದ್ದಾ ಸೇವಾ ಸಹಕಾರಿ ಸಂಘ ಯರಮುಖದಿಂದ ನಂದಿಗದ್ದೆ ಗ್ರಾಪಂ ವ್ಯಾಪ್ತಿಯ ಎಲ್ಲ ಶಾಲೆ, ಅಂಗನವಾಡಿ, ಹೈಸ್ಕೂಲ್ ಗೆ ಅಗತ್ಯವಿರುವ ಅವಶ್ಯಕ ವಸ್ತುಗಳನ್ನು ವಿತರಿಸಲಾಯಿತು.
₹25 ಸಾವಿರಕ್ಕೂ ಹೆಚ್ಚಿನ ಮೌಲ್ಯದ ವಸ್ತುಗಳನ್ನು ನೀಡಲಾಯಿತು. ಗುಂದ ಹೈಸ್ಕೂಲ್ ಗೆ ಬಿಸಿಊಟದ ಅನ್ನದ ಬಾಯ್ಲರ್, ನಂದಿಗದ್ದೆ ಶಾಲೆಗೆ ರ್‍ಯಾಕ್ ಮತ್ತು ತೂಕದ ಮಾಪನ, ಕರ್ಕಮನೆ ಶಾಲೆಗೆ 5 ಖುರ್ಚಿ, ಗುಂದ ಶಾಲೆಗೆ ನೀರಿನ ಫಿಲ್ಟರ್, ಅವರ್ಲಿ ಶಾಲೆಗೆ ಕುಕ್ಕರ್, ಯರಮುಖ ಶಾಲೆಗೆ ರ್‍ಯಾಕ್, ಎಲ್ಲ ಅಂಗವಾಡಿಗಳಿಗೆ ಕುಕ್ಕರ್ ಮತ್ತು ಸಮವಸ್ತ್ರ ನೀಡಲಾಯಿತು.ಈ ಸಂದರ್ಭದಲ್ಲಿ ಕಳೆದ 12 ವರ್ಷಗಳಿಂದ ನೂರಕ್ಕೆ ನೂರು ಫಲಿತಾಂಶ ನೀಡುತ್ತಿರುವ ಗುಂದ ಹೈಸ್ಕೂಲ್ ನ ಎಲ್ಲ ಶಿಕ್ಷಕರಿಗೆ ಹಾಗೂ ನಿವೃತ್ತರಾದ ನಂದಿಗದ್ದೆ ಶಾಲೆ ಶಿಕ್ಷಕ ಜನಾರ್ಧನ ಹೆಗಡೆ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಆರ್.ವಿ. ದಾನಗೇರಿ ಮಾತನಾಡಿ, ಸಂಘವು ಲಾಭದಿಂದ ಇರಲು ಇಲ್ಲಿರುವ ರೈತರು ಮತ್ತು ಸಂಘದ ಹಿತೈಷಿಗಳೇ ಕಾರಣ. ಧರ್ಮಾರ್ಥ ನಿಧಿಯಿಂದ ನಮ್ಮ ಊರಿನ ಶಾಲೆ, ಅಂಗನವಾಡಿಗೆ ಬೇಕಾಗುವ ಅತ್ಯಗತ್ಯ ವಸ್ತುಗಳನ್ನು ಪೂರೈಸಿದ್ದೇವೆ. ರೈತರ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ನಾವು ಈ ಸಹಾಯ ಮಾಡುತ್ತಿದ್ದೇವೆ ಎಂದರು.ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜೋಸೆಫ್ ಗೋನ್ಸಾಲವಿಸ್, ಎಸ್‌ಡಿಎಂಸಿ ಅಧ್ಯಕ್ಷೆ ಸುಕನ್ಯಾ ದೇಸಾಯಿ, ಸಹಕಾರಿ ಸಂಘದ ಉಪಾಧ್ಯಕ್ಷ ಸುದರ್ಶನ ಭಾಗ್ವತ್, ವ್ಯವಸ್ಥಾಪಕ ಶಿವರಾಮ ದಬ್ಗಾರ, ಸಲಹೆಗಾರ ಎಸ್.ಟಿ. ದಾನಗೇರಿ, ಸದಸ್ಯರಾದ ಶ್ರೀನಾಥ್ ದೇಸಾಯಿ, ಸಂದೇಶ ದೇಸಾಯಿ, ರೇಖಾ ಉಪಾಧ್ಯ, ಅರ್ಚನಾ ಹೆಗಡೆ ಇದ್ದರು.