ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡ ನಂದಿಗಾವಿ ಶ್ರೀನಿವಾಸ

| Published : Dec 22 2024, 01:30 AM IST

ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡ ನಂದಿಗಾವಿ ಶ್ರೀನಿವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ: ಹರಿಹರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಅವರು ತಮ್ಮ ೪೬ನೇ ಹುಟ್ಟು ಹಬ್ಬವನ್ನು ಶನಿವಾರ ಅದ್ಧೂರಿಯಾಗಿ ಆಚರಿಸಿಕೊಂಡರು.

ಹರಿಹರ: ಹರಿಹರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಅವರು ತಮ್ಮ ೪೬ನೇ ಹುಟ್ಟು ಹಬ್ಬವನ್ನು ಶನಿವಾರ ಅದ್ಧೂರಿಯಾಗಿ ಆಚರಿಸಿಕೊಂಡರು.

ನಂದಿಗಾವಿ ಶ್ರೀನಿವಾಸ್ ಅವರ ಹುಟ್ಟು ಹಬ್ಬಕ್ಕೆ ಶನಿವಾರ ವಿವಿಧ ಮಠ ಮಂದಿರದ ಶ್ರೀಗಳು ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಅಭಿಮಾನಿಗಳು ಶುಭ ಕೋರಿ ಆಶೀರ್ವದಿಸಿದರು.

ನಗರದ ರಾಘವೇಂದ್ರ ಮಠದಲ್ಲಿ ಶನಿವಾರ ನಂದಿಗಾವಿ ಶ್ರೀನಿವಾಸ್ ಅಭಿಮಾನಿ ಬಳಗದಿಂದ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಬೆಳಗ್ಗೆ ಸತ್ಯನಾರಾಯಣ ಪೂಜೆ ಸಲ್ಲಿಸುವ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಶ್ರೀ, ಎಲವಟ್ಟಿ ಸಿದ್ಧಾರೂಢ ಮಠದ ಸಿದ್ಧಾರೂಢ ಯೋಗಾನಂದ ಶ್ರೀ, ೧೦೮ ಲಿಂಗೇಶ್ವರ ದೇವಸ್ಥಾನದ ಬಸವಲಿಂಗ ಶ್ರೀ ಹಾಗೂ ಆರೋಗ್ಯ ಮಾತೆಯ ಚರ್ಚಿನ ಧರ್ಮಗುರು ಕೆ.ಎ.ಜಾರ್ಜ್ ಭಾಗವಹಿಸಿ ಶ್ರೀನಿವಾಸ್ ಅವರಿಗೆ ಆಶೀರ್ವದಿಸಿದರು.

ಅಭಿಮಾನಿಗಳ ಬಳಗದಿಂದ ಬೆಳಿಗ್ಗೆ ತುಂಗಭದ್ರಾ ನದಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಂತರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ನಗರದ ಶ್ರೀ ಹರಿಹರೇಶ್ವರ ದೇವಸ್ಥಾನ ಹಾಗೂ ಗ್ರಾಮ ದೇವತೆ ಊರಮ್ಮ ದೇವಸ್ಥಾನದಲ್ಲಿ ಪೂಜೆ ನಂತರ ಮಸೀದಿ ಹಾಗೂ ಚರ್ಚ್‌ಗಳಿಗೆ ನಂದಿಗಾವಿ ಶ್ರೀನಿವಾಸ್ ತೆರಳಿ ಆರ್ಶಿವಾದ ಪಡೆದರು.

ಎಐಸಿಸಿ ರಾಜ್ಯ ಉಸ್ತುವಾರಿ ಮಯೂರ್ ಜಯಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್, ದಾವಣಗೆರೆ ಮಹಾನಗರ ಪಾಲಿಕೆಯ ಅಧ್ಯಕ್ಷ ಚಮನ್ ಸಾಬ್, ಹೊನ್ನಳ್ಳಿ ಕಾಂಗ್ರೆಸ್ ಮುಖಂಡ ಸುರೇಂದ್ರ ಗೌಡ, ಕೆಪಿಸಿಸಿ ಸದಸ್ಯ ಬಿ.ರೇವಣಸಿದ್ದಪ್ಪ, ನಗರಸಭಾ ಸದಸ್ಯರಾದ ಶಂಕರ್ ಖಟಾವಕರ್, ಕೆ.ಜಿ.ಸಿದ್ದೇಶ್, ಉಷಾ, ಸುಮಿತ್ರಮ್ಮ, ನಾಗರತ್ನ, ರಜನಿಕಾಂತ್, ವಿಜಯ್ ಕುಮಾರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ಗ್ರಾಮಾಂತರ ಅಧ್ಯಕ್ಷ ಅಬಿದಲಿ, ಗ್ರಾಮಾಂತರ ಮುಖಂಡರಾದ ಬಿ.ಎಂ.ವಾಗೀಶ್ ಸ್ವಾಮಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಿ.ಕುಮಾರ್, ನಿವೃತ್ತ ಪೊಲೀಸ ಅಧಿಕಾರಿ ಬಿ.ಬಿ.ಸಕ್ರಿ, ಮುರುಗನ್ನವರ್, ನಿವೃತ್ತ ಪ್ರಾಧ್ಯಾಪಕ ಎ.ಬಿ.ರಾಮಚಂದ್ರಪ್ಪ, ಚೇಂಬರ್ ಆಫ್ ಕಾಮರ್ಸ್ ಖಜಾಂಚಿ ಆರ್.ಆರ್.ಕಾಂತರಾಜ್, ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಅವರು ಶ್ರೀನಿವಾಸ್‌ರನ್ನು ಅಭಿನಂದಿಸಿದರು.ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಹನುಮಂತರೆಡ್ಡಿ, ಅಮರಾವತಿ ರೇವಣಸಿದ್ದಪ್ಪ, ಮಹೇಶ್ ದೇವರಬೆಳಕೇರಿ, ಸಂತೋಷ್ ನೋಟದರ್, ಗೋವಿನಾಳ ರಾಜಣ್ಣ, ಮಂಜುನಾಥ್, ಬಸವರಾಜ್ ದೊಡ್ಮನಿ, ಪ್ರವೀಣ್ ಮೆಡಿಕಲ್, ನಜೀರ್, ಗಣೇಶ್ ಚಂದ್ರಪ್ಪ ಇತರರಿದ್ದರು. ಸಚಿವ ಸತೀಶ್ ಜಾರಕಿಹೊಳಿ, ಯತೀಂದ್ರ ಸಿದ್ದರಾಮಯ್ಯ ಸೇರಿದಂತಹ ಹಾಲವು ಗಣ್ಯರು ದೂರವಾಣಿ ಮೂಲಕ ಶ್ರೀನಿವಾಸ್ ಅವರಿಗೆ ಜನ್ಮದಿನದ ಶುಭ ಕೋರಿದರು. ಶುಭ ಕೋರಲು ಆಗಮಿಸಿದ ಮುಖಂಡರು ಕಾರ್ಯಕರ್ತರು, ಅಭಿಮಾನಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಹಸ್ರಾರು ಅಭಿಮಾನಿಗಳು ಭಾಗವಹಿಸಿದ್ದರು.