An incident has occurred where the cars of the Kalaburagi Deputy Commissioner (DC), Additional Deputy Commissioner (ADC), and Assistant Commissioner (AC) were seized due to a delay in paying land acquisition compensation.
ಕನ್ನಡಪ್ರಭ ವಾರ್ತೆ ಕಲಬುರಗಿ
ಭೂಮಿ ಸ್ವಾಧೀನ ಪರಿಹಾರ ನೀಡಲು ವಿಳಂಬವಾಗಿರುವ ಪ್ರಕರಣದಲ್ಲಿ ಕಲಬುರಗಿ ಡಿಸಿ, ಎಡಿಸಿ, ಎಸಿ ಕಾರು ಜಪ್ತಿ ಮಾಡಿದ ಪ್ರಸಂಗ ನಡೆದಿದೆ.ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಕಲಬುರಗಿ ಡಿಸಿ, ಎಡಿಸಿ, ಎಸಿ ಅವರ ಕಾರ್ ಗಳನ್ನು ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿಕೊಂಡಿದ್ದಾರೆ.
ಕಲಬುರಗಿ ಜಿಲ್ಲಾ ನ್ಯಾಯಾಲಯದ ಆದೇಶದ ಮೆರೆಗೆ ಡಿಸಿ, ಎಡಿಸಿ, ಎಸಿ ಕಾರುಗಳು ಜಪ್ತಿ ಮಾಡಲಾಗಿದೆ. ನಂದಿಕೂರ ಗ್ರಾಮದಲ್ಲಿ ಎಸ್ಸಿಪಿ ಘಟಕ ನಿರ್ಮಾಣಕ್ಕೆ ರೈತ ಪ್ರಕಾಶ ಮಲ್ಕಪ್ಪನ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಭೂ ಸ್ವಾದಿನ ಪಡೆದುಕೊಂಡಿದ್ದ ರೈತನಿಗೆ ಭೂಮಿಗೆ ಪರಿಹಾರವಾಗಿ ನೀಡಬೇಕಿರುವ 8 ಕೋಟಿ ನೀಡಲು ವಿಳಂಬವಾದ ಹಿನ್ನೆಲೆ ಕೋರ್ಟ್ ಆದೇಶದಂತೆ ಕಾರ್ ಜಪ್ತಿ ಮಾಡಲಾಗಿದೆ ಎಂದು ಗೊತ್ತಾಗಿದೆ.ನಗರದಿಂದ ಹೋಗುವ ಕೊಳಚೆ ನೀರಿನ ಶುದ್ಧೀಕರಣ ಘಟಕ ನಿರ್ಮಾಣಕ್ಕಾಗಿ ನಂದಿಕೂರ ಗ್ರಾಮದ ರೈತ ಪ್ರಕಾಶ್ ಮಲಕಪ್ಪ ಎಂಬ ರೈತನಿಂದ ಜಮೀನು 2009ರಲ್ಲಿ ಭೂ ಸ್ವಾದಿನ ಮಾಡಿಕೊಳ್ಳಲಾಗಿತ್ತು. 9 ವರ್ಷ ಕಳೆದರೂ ಸೂಕ್ತ ಪರಿಹಾರ ಸಿಗದ ಕಾರಣ 2018ರಲ್ಲಿ ರೈತ ಪ್ರಕಾಶ ನ್ಯಾಯಾಲಯದ ಮೊರೆ ಹೋಗಿದ್ದ.
ನ್ಯಾಯಾಲಯವು ರೈತನಿಗೆ 8 ಕೋಟಿ ಪರಿಹಾರ ನೀಡಬೇಕು ಎಂದು ಆದೇಶ ಹೊರಡಿಸಿತ್ತು. ಈ ಪ್ರಕರಣದಲ್ಲಿ 10ಲಕ್ಷ ಮಾತ್ರ ಪರಿಹಾರ ನೀಡಿ ಜಿಲ್ಲಾಡಳಿತ ಕೈ ತೊಳೆದುಕೊಂಡಿದೆ ಎಂದು ರೈತ ದೂರಿದ್ದಾನೆ.ಫೋಟೋಕಾರ್ 1, ಕಾರ್ 2 ಮತ್ತು ಕಾರ್ 3