ಸಾರಾಂಶ
ರಾಮನಗರ: ತಾಲೂಕಿನ ಶ್ಯಾನುಭೋಗನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಕೆ.ಎನ್.ನಂದಿನಿ ನಂದೀಶ್ ಆಯ್ಕೆಯಾಗಿದ್ದಾರೆ.
ರಾಮನಗರ: ತಾಲೂಕಿನ ಶ್ಯಾನುಭೋಗನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಕೆ.ಎನ್.ನಂದಿನಿ ನಂದೀಶ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿದ್ದ ಡಿ.ಪಿ.ನರಸಿಂಹಮೂರ್ತಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ, ಒಟ್ಟು 16 ಸದಸ್ಯ ಬಲ ಹೊಂದಿರುವ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕ್ಯಾಸಾಪುರ ಮತ ಕ್ಷೇತ್ರದ ಸದಸ್ಯೆ ಕಾಂಗ್ರೆಸ್ ಬೆಂಬಲಿತ ಕೆ.ಎನ್.ನಂದಿನಿ ಮತ್ತು ಜೆಡಿಎಸ್ ಬೆಂಬಲಿತ ಹಿಪ್ಪೆಮರದದೊಡ್ಡಿ ಮತ ಕ್ಷೇತ್ರದ ಸದಸ್ಯ ಸತ್ಯನಾರಾಯಣ ನಾಮಪತ್ರ ಸಲ್ಲಿಸಿದ್ದರು.ಚುನಾವಣೆಯಲ್ಲಿ ಕೆ.ಎನ್.ನಂದಿನಿ ನಂದೀಶ್ 10 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಸತ್ಯನಾರಾಯಣ 6 ಮತಗಳನ್ನು ಪಡೆದು ಪರಾಜಿತರಾದರು.
ತಾಪಂ ಮಾಜಿ ಅಧ್ಯಕ್ಷ ಎಸ್.ಪಿ.ಜಗದೀಶ್ ಮಾತನಾಡಿ, ಎಲ್ಲ ಸದಸ್ಯರ ಸಹಕಾರದಲ್ಲಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿ ಮತ್ತು ಅರ್ಹರಿಗೆ ಸರ್ಕಾರಿ ಸವಲತ್ತುಗಳನ್ನು ತಲುಪಿಸಬೇಕು ಎಂದು ಶುಭ ಕೋರಿದರು.ನೂತನ ಅಧ್ಯಕ್ಷೆ ನಂದಿನಿ ಮಾತನಾಡಿ, ನನ್ನ ಆಯ್ಕೆಗೆ ಸಹಕಾರ ನೀಡಿದ ಎಲ್ಲ ಸದಸ್ಯರು ಮತ್ತು ಪಕ್ಷದ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶಾಸಕ ಬಾಲಕೃಷ್ಣ ಅವರ ಮಾರ್ಗದರ್ಶನ ಮತ್ತು ಸಹಕಾರ ಪಡೆದು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಡಿ.ಪಿ.ನರಸಿಂಹಮೂರ್ತಿ, ಎ.ಜೆ.ನಾಗೇಶ್, ಸಾವಿತ್ರಮ್ಮ, ಲಕ್ಮಿ, ಅಭಿಲಾಷ, ಪ್ರೇಮ್ ಕುಮಾರ್, ಗೋವಿಂದರಾಜು, ಕಾಂಗ್ರೆಸ್ ಮುಖಂಡರಾದ ಸ್ವಾಮಿ, ಶ್ರೀಕಾಂತ್, ಕ್ಯಾಸಾಪುರ ಮಂಜುನಾಥ್, ಪುಟ್ಟಸ್ವಾಮಯ್ಯ, ಚಂದ್ರಶೇಖರ್, ದೇವರಾಜು, ಕುಷೇಂದ್ರ ಕುಮಾರ್, ಚಂದ್ರಶೇಖರ್, ಮುನಿರಾಜು, ಪ್ರಕಾಶ್, ಸ್ವಾಮಿ, ಗ್ರಾಪಂ ಸದಸ್ಯ ಸುರೇಶ್, ಜೆಸಿಪಿ ವೆಂಕಟೇಶ್ ಅಭಿನಂದಿಸಿದರು.10ಕೆಆರ್ ಎಂಎನ್ 8.ಜೆಪಿಜಿ
ರಾಮನಗರ ತಾಲೂಕಿನ ಶ್ಯಾನುಭೋಗನಹಳ್ಳಿ ಗ್ರಾಪಂ ನೂತನ ಅಧ್ಯಕ್ಷೆ ಕೆ.ಎನ್.ನಂದಿನಿ ನಂದೀಶ್ ಅವರನ್ನು ಕಾಂಗ್ರೆಸ್ ಮುಖಂಡರು ಮತ್ತು ಸದಸ್ಯರು ಅಭಿನಂದಿಸಿದರು.