ಸಿಹಿ ಪ್ರಿಯರಿಗಾಗಿ ನಂದಿನಿ ಬೆಲ್ಲದ ಪೇಡಾ ಮಾರುಕಟ್ಟೆಗೆ

| Published : Mar 21 2024, 01:02 AM IST

ಸಾರಾಂಶ

ರಬಕವಿ-ಬನಹಟ್ಟಿ: ವಿವಿಧ ಸಿಹಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿರುವ ಕೆಎಂಎಫ್‌ಡಿಡಿಎಲ್‌ನ ನಂದಿನಿ ಇದೀಗ ಸಿಹಿ ಪ್ರಿಯರ ಬೇಡಿಕೆಗೆ ಅನುಸಾರವಾಗಿ ಬೆಲ್ಲದ ಪೇಡಾವನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಈ ಬೆಲ್ಲದ ಪೇಡಾಗೆ ಹೆಚ್ಚಿನ ಬೇಡಿಕೆ ಕೂಡ ಶುರುವಾಗಿದೆ. ಬನಹಟ್ಟಿ(ಆಸಂಗಿ)ಯ ಕೆಎಂಎಫ್‌ಡಿಡಿಎಲ್‌ನ ಕಚೇರಿಯಲ್ಲಿ ಆಡಳಿತ ವ್ಯವಸ್ಥಾಪಕ ಬಿ.ಎಸ್.ಸಿದ್ಧೇಗೌಡ ಬೆಲ್ಲದ ಪೇಡವನ್ನು ಪ್ರದರ್ಶಿಸಿದರು.

ರಬಕವಿ-ಬನಹಟ್ಟಿ: ವಿವಿಧ ಸಿಹಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿರುವ ಕೆಎಂಎಫ್‌ಡಿಡಿಎಲ್‌ನ ನಂದಿನಿ ಇದೀಗ ಸಿಹಿ ಪ್ರಿಯರ ಬೇಡಿಕೆಗೆ ಅನುಸಾರವಾಗಿ ಬೆಲ್ಲದ ಪೇಡಾವನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಈ ಬೆಲ್ಲದ ಪೇಡಾಗೆ ಹೆಚ್ಚಿನ ಬೇಡಿಕೆ ಕೂಡ ಶುರುವಾಗಿದೆ. ಬನಹಟ್ಟಿ(ಆಸಂಗಿ)ಯ ಕೆಎಂಎಫ್‌ಡಿಡಿಎಲ್‌ನ ಕಚೇರಿಯಲ್ಲಿ ಆಡಳಿತ ವ್ಯವಸ್ಥಾಪಕ ಬಿ.ಎಸ್.ಸಿದ್ಧೇಗೌಡ ಬೆಲ್ಲದ ಪೇಡವನ್ನು ಪ್ರದರ್ಶಿಸಿದರು. ಈ ವೇಳೆ ಹೊಸ ಉತ್ಪನ್ನದ ಬಗ್ಗೆ ಮಾಹಿತಿ ನೀಡಿರುವ ಅವರು, ಬಾದಾಮ್ ಪೌಡರ್, ಜಾಮೂನ್, ಮಿಲ್ಲೆಟ್ ಮಿಕ್ಸ್, ಧಾರವಾಡ ಪೇಡಾ, ಮೈಸೂರ ಪಾಕ್, ಲಡಗಿ, ಶ್ರೀಖಂಡ ಸೇರಿದಂತೆ ವಿವಿಧ ಉತ್ಪನ್ನಗಳ ಬಳಿಕ ಇದೀಗ ಜನತೆಯ ಬೇಡಿಕೆಗಣುಸಾರವಾಗಿ ಬೆಲ್ಲದ ಪೇಡಾವನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದಕ್ಕೆ ಸಿಹಿ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಸಂತಸವೆನಿಸುತ್ತಿದೆ. ರಾಜ್ಯವಷ್ಟೇ ಅಲ್ಲದೆ ದೇಶಾದ್ಯಂತ ರಫ್ತು ಮಾಡುವಲ್ಲಿ ಯಶಸ್ವಿಯಾಗಿದ್ದು, ಬೆಲ್ಲದ ಪೇಡಾ ೨೦೦ ಗ್ರಾಂ.ಗೆ ₹೧೨೫ ದರ ನಿಗದಿಪಡಿಸಲಾಗಿದೆ ಎಂದರು.

ಈತ್ತೀಚೆಗಷ್ಟೇ ಸಿಎಂ ಸಿದ್ರಾಮಯ್ಯನವರು ಬೆಂಗಳೂರಿನ ಕೃಷ್ಣಾ ನಿವಾಸದಲ್ಲಿ ಬೆಲ್ಲದ ಪೇಡಾ ಸಿಹಿಯನ್ನು ಲೋಕಾರ್ಪಣೆ ಮಾಡಿದ್ದರು. ಇದೀಗ ಬನಹಟ್ಟಿ (ಆಸಂಗಿ)ಯ ಕೆಎಂಎಫ್‌ಡಿಡಿಎಲ್ ಘಟಕದಿಂದ ಈ ಉತ್ಪನ್ನ ಶುರುವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ಬಿ.ಎಸ್.ತೆಗ್ಗಿ, ಮಾರುಕಟ್ಟೆ ಉಪ ವ್ಯವಸ್ಥಾಪಕ ಪಿ.ನಟರಾಜ್, ಉತ್ಪಾದನಾ ಉಪವ್ಯವಸ್ಥಾಪಕ ಎನ್.ಲಿಂಗಣ್ಣ, ಗುಣ ನಿಯಂತ್ರಣ ಸಹಾಯಕ ವ್ಯವಸ್ಥಾಪಕಿ ಸುನೀತಾ, ಸಹಾಯಕ ಅಭಿಯಂತರ ರಾಘವೇಂದ್ರ ಜೋಷಿ, ಸಿದ್ಧಾರೂಢ ತಳವಾರ, ಸತೀಶ ಸೇರಿದಂತೆ ಸಿಬ್ಬಂದಿ ಕೂಡ ಇದ್ದರು.