ನಂದಿನಿ ಉತ್ಪನ್ನಗಳಿಗೆ ವಿದೇಶಗಳಲ್ಲೂ ಬೇಡಿಕೆ

| Published : Jul 03 2025, 12:32 AM IST

ಸಾರಾಂಶ

ಹೊಸಕೋಟೆ: ನಂದಿನಿ ಬ್ರಾಂಡ್ ಉತ್ಪನ್ನಗಳು ರಾಜ್ಯ ಅಷ್ಟೇ ಅಲ್ಲದೆ ದೇಶ ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ ಎಂದು ಬಮುಲ್ ನಿರ್ದೇಶಕ ಬಿವಿ.ಸತೀಶ್‌ಗೌಡ ತಿಳಿಸಿದರು.

-ಬಮೂಲ್ ಶಿಥಿಲ ಕೇಂದ್ರಕ್ಕೆ ನಿರ್ದೇಶಕ ಬಿ.ವಿ.ಸತೀಶ್‌ಗೌಡ ಭೇಟಿ

ಹೊಸಕೋಟೆ: ನಂದಿನಿ ಬ್ರಾಂಡ್ ಉತ್ಪನ್ನಗಳು ರಾಜ್ಯ ಅಷ್ಟೇ ಅಲ್ಲದೆ ದೇಶ ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ ಎಂದು ಬಮುಲ್ ನಿರ್ದೇಶಕ ಬಿವಿ.ಸತೀಶ್‌ಗೌಡ ತಿಳಿಸಿದರು.

ನಗರದ ಹೊರವಲಯದ ಚಿಕ್ಕಹುಲ್ಲೂರು ಬಳಿ ಇರುವ ಬೆಂಗಳೂರು ಹಾಲು ಒಕ್ಕೂಟದ ಹೊಸಕೋಟೆ ಶಿಬಿರ ಕಚೇರಿಯ ಹಾಲಿನ ಉತ್ಪನ್ನಗಳ ತಯಾರಿಕ ಘಟಕಕ್ಕೆ ಬೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗೆ ಸರ್ಕಾರ ಎಲ್ಲಾ ಸಹಕಾರ ನೀಡಿ ವಿವಿಧ ವಿಶೇಷ ಯೋಜನೆಗಳಿಂದ ಸಾಕಾರಗೊಳಿಸುತ್ತಿದೆ. ಆದ್ದರಿಂದ ಕೆಎಂಎಫ್ ಮೂಲಕ ನಂದಿನಿ ಬ್ರಾಂಡ್ ಪ್ರಸಿದ್ಧಿ ಪಡೆಯಲು ಸಾಧ್ಯವಾಗಿದೆ. ಇಲ್ಲಿಯವರೆಗೆ ಬೇರೆ ಯಾವುದೇ ಹಾಲಿನ ಉತ್ಪನ್ನಗಳ ಕಂಪನಿಗಳು ಬಿಡುಗಡೆ ಮಾಡದಂತಹ ವಿಶಿಷ್ಟ ಉತ್ಪನ್ನಗಳನ್ನು ಪರಿಚಯಿಸಲು ಕೆಎಂಎಫ್ ಮುಂದಾಗಿದೆ. ಇದರಿಂದ ಪ್ರೋಟಿನ್ ಅಂಶವಿರುವ ಆಹಾರ ಮಾರುಕಟ್ಟೆಯಲ್ಲಿ ನಂದಿನಿ ತನ್ನದೇ ಆದ ಛಾಪು ಮೂಡಿಸಿದೆ ಎಂದರು.

ಉತ್ಪನ್ನಗಳ ತಯಾರಿಕೆ ವೀಕ್ಷಣೆ: ನಂದಿನಿ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ ಹಾಗೂ ಪನ್ನೀರು, ದೋಸೆ ಹಿಟ್ಟು ಘಟಕದ ಕಾರ್ಮಿಕರ ಜೊತೆ ಮಾತನಾಡಿದರು. ನಂದಿನಿ ಉತ್ಪನ್ನಗಳ ತಯಾರಿಕೆ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ. ಆದ್ದರಿಂದ ಕಾರ್ಮಿಕರು ಸಾಕಷ್ಟು ಜವಾಬ್ದಾರಿ ವಹಿಸಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಹೊಸಕೋಟೆ ಡೇರಿ ಶಿಬಿರದ ವ್ಯವಸ್ಥಾಪಕ ಎ.ಎಂ.ಚಂದ್ರಪ್ಪ, ಸಹಾಯಕ ವ್ಯವಸ್ಥಾಪಕ ಶ್ರೀರಾಮಪ್ಪ, ಮುಖಂಡರಾದ ಮುತ್ಸಂದ್ರ ಆನಂದಪ್ಪ, ಹಸಿಗಾಳ ಜಗದೀಶ್ ಸೇರಿದಂತೆ ಶಿಬಿರದ ಶಿಬಿರಾಧಿಕಾರಿಗಳು, ಹಾಗೂ ಹಾಲು ಉತ್ಪಾಧಕರ ಸಹಕಾರ ಸಂಘದ ಸದಸ್ಯರಿದ್ದರು.ಫೋಟೋ: 2 ಹೆಚ್‌ಎಸ್‌ಕೆ

ಹೊಸಕೋಟೆ ತಾಲೂಕಿನ ಚಿಕ್ಕಹುಲ್ಲೂರು ಬಳಿ ಇರುವ ಬಮೂಲ್ ಶಿಥಿಲ ಕೇಂದ್ರಕ್ಕೆ ಭೇಟಿ ನೀಡಿದ ನಿರ್ದೇಶಕ ಬಿ.ವಿ.ಸತೀಶ್‌ಗೌಡ ಹಾಲು ಪ್ಯಾಕಿಂಗ್ ಘಟಕ ಪರಿಶೀಲಿಸಿದರು.