ನಂದಿತಾವರೆ ಗ್ರಾಮ ಫಲಕ ಚರಂಡಿ ಮೇಲೆ ಬಿದ್ದರೂ ನೋಡೋರಿಲ್ಲ?!

| Published : Oct 10 2024, 02:27 AM IST

ನಂದಿತಾವರೆ ಗ್ರಾಮ ಫಲಕ ಚರಂಡಿ ಮೇಲೆ ಬಿದ್ದರೂ ನೋಡೋರಿಲ್ಲ?!
Share this Article
  • FB
  • TW
  • Linkdin
  • Email

ಸಾರಾಂಶ

ಮಲೇಬೆನ್ನೂರು ಇಲ್ಲಿಗೆ ಸಮೀಪದ ನಂದಿತಾವರೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ಅಳವಡಿಸಿದ್ದ ನಂದಿತಾವರೆ ಮತ್ತಿತರ ಗ್ರಾಮಗಳ ಹೆಸರಿರುವ ಫಲಕವೊಂದು ಬಹುದಿನಗಳಿಂದ ಚರಂಡಿಯಲ್ಲಿ ಬಿದ್ದಿದೆ. ಈ ಅವ್ಯವಸ್ಥೆ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟುಮಾಡಬಹುದು ಎಂಬ ಕನಿಷ್ಠಪ್ರಜ್ಞೆಯೇ ಇಲಾಖೆಗೆ ಇಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

- ಮೂರು ಹಳ್ಳಿಗಳ ಹೆಸರಿನ ಫಲಕ ಬಿದ್ದು ತಿಂಗಳುಗಳಾಯ್ತು

- ಅಧಿಕಾರಿಗಳಿಗೆ ಪುರುಸೊತ್ತಿಲ್ಲ, ಗ್ರಾಮಸ್ಥರಿಗೆ ಕಾಳಜಿ ಇಲ್ಲ- - - ಮಲೇಬೆನ್ನೂರು: ಇಲ್ಲಿಗೆ ಸಮೀಪದ ನಂದಿತಾವರೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ಅಳವಡಿಸಿದ್ದ ನಂದಿತಾವರೆ ಮತ್ತಿತರ ಗ್ರಾಮಗಳ ಹೆಸರಿರುವ ಫಲಕವೊಂದು ಬಹುದಿನಗಳಿಂದ ಚರಂಡಿಯಲ್ಲಿ ಬಿದ್ದಿದೆ. ಈ ಅವ್ಯವಸ್ಥೆ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟುಮಾಡಬಹುದು ಎಂಬ ಕನಿಷ್ಠಪ್ರಜ್ಞೆಯೇ ಇಲಾಖೆಗೆ ಇಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ನಂದಿತಾವರೆ ಗ್ರಾಮದಲ್ಲಿ ವಿದ್ಯಾವಂತರು, ನೌಕರರು, ಸಾಮಾಜಿಕ ಕಳಕಳಿಯ ರೈತ ಸಂಘಟನೆಗಳ ಪದಾಧಿಕಾರಿಗಳು ವಾಸಿಸುತ್ತಿದ್ದಾರೆ. ಗ್ರಾಮದ ಚರಂಡಿಯಲ್ಲೇ ತಮ್ಮೂರಿನ ಫಲಕ ಬಿದ್ದು ಕೆಲವು ತಿಂಗಳೇ ಕಳೆದಿದ್ದರೂ, ಈ ಅವ್ಯವಸ್ಥೆ ಸರಿಪಡಿಸಲು ಯಾರೊಬ್ಬರೂ ಮುಂದಾಗಿಲ್ಲ. ಫಲಕ ಯಾಕೆ ಬಿತ್ತು, ಯಾವಾಗ ಬಿತ್ತು, ಮತ್ತೆ ಅಳವಡಿಸಬೇಕೋ/ ಬೇಡವೋ ಈ ಯಾವ ಚಿಂತೆಗಳೂ ಇಲಾಖೆ ಅಧಿಕಾರಿಗಳಿಗೆ, ಪ್ರಜ್ಞಾವಂತರಿಗೆ ಹೊಳೆದಿಲ್ಲ.

ನಂದಿತಾವರೆ ಗ್ರಾಮದಲ್ಲಿನ ಈ ಫಲಕದಲ್ಲಿ ನಂದಿತಾವರೆ ಅಂತ ಇದೆ. ಜೊತೆಗೆ ದೇವರಬೆಳಕೆರೆ ಮತ್ತು ಕುಣೆಬೆಳಕೆರೆ ಗ್ರಾಮಗಳಿಗೆ ತೆರಳಲು ಎಷ್ಟು ಕಿಲೋ ಮೀಟರ್‌ ಆಗುತ್ತದೆ ಎಂಬ ಮಾಹಿತಿಗಳೂ ಇದರಲ್ಲಿವೆ. ಈ ಫಲಕ ಆಯಾ ಗ್ರಾಮಗಳಿಗೆ ಮಹತ್ವವಾಗಿದೆ. ಗ್ರಾಮಸ್ಥರ ಸಂಬಂಧಿಗಳು ಅಥವಾ ಇನ್ಯಾವುದೋ ಜನಪರ ಉದ್ದೇಶಗಳಿಗೆ ಗ್ರಾಮಕ್ಕೆ ಆಗಮಿಸಬೇಕಾದ ಜನರಿಗೆ, ಪ್ರಯಾಣಿಕರಿಗೆ ಈ ಫಲಕ ಉಪಯೋಗಿಯಾಗಿದೆ. ಆದರೆ, ಫಲಕ ಚರಂಡಿ ಪಾಲಾಗಿದ್ದರಿಂದ ಪ್ರಯಾಣಿಕರಿಗೆ ಇದರ ಪ್ರಯೋಜನ ಸಿಗದಾಗಿದೆ.

ಈಗಲಾದರೂ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಫಲಕವನ್ನು ಭದ್ರವಾಗಿ, ಸೂಕ್ತ ಸ್ಥಳದಲ್ಲಿ ಅಳವಡಿಸಿ, ಪ್ರಯಾಣಿಕರಿಗೆ ನೆರವಾಗುವ ಅಗತ್ಯವಿದೆ.

- - -

-೯-ಎಂಬಿಆರ್೧: