ನಂಜಪ್ಪ ಆಸ್ಪತ್ರೆ: ಲಿವರ್ ಕ್ಯಾನ್ಸರ್‌ಗೆ ಯಶಸ್ವಿ ಚಿಕಿತ್ಸೆ

| Published : Nov 04 2025, 02:00 AM IST

ಸಾರಾಂಶ

ನಂಜಪ್ಪ ಲೈಫ್‌ಕೇರ್‌ ಆಸ್ಪತ್ರೆಯಲ್ಲಿ 68 ವರ್ಷದ ವ್ಯಕ್ತಿಯೊಬ್ಬರಿಗೆ ಮೈಕ್ರೋ ವೇವ್‌ ಅಬ್ಲೇಶನ್ ಮೂಲಕ ಲಿವರ್‌ ಕ್ಯಾನ್ಸರ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಂಜಪ್ಪ ಲೈಫ್‌ಕೇರ್‌ ಆಸ್ಪತ್ರೆಯಲ್ಲಿ 68 ವರ್ಷದ ವ್ಯಕ್ತಿಯೊಬ್ಬರಿಗೆ ಮೈಕ್ರೋ ವೇವ್‌ ಅಬ್ಲೇಶನ್ ಮೂಲಕ ಲಿವರ್‌ ಕ್ಯಾನ್ಸರ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆ ಅತ್ತಿಗುಂದದ ನಂಜಯ್ಯ ಎಂಬುವವರು ಹೊಟ್ಟೆಯ ಬಲಭಾಗದಲ್ಲಿ ನೋವು ಎಂದು ನಂಜಪ್ಪ ಲೈಕ್ ಕೇರ್ ಆಸ್ಪತ್ರೆಗೆ ಬಂದಿದ್ದರು. ಕ್ಯಾನ್ಸರ್‌ ಶಸ್ತ್ರ ಚಿಕಿತ್ಸಕ ಡಾ.ಗುರುಚನ್ನ ಬಸವಯ್ಯ ಅವರು ತಪಾಸಣೆ ನಡೆಸಿದ ಬಳಿಕ ರೋಗಿಗೆ ಲಿವರ್‌ನಲ್ಲಿ 4.5 X 3.2 ಸೆಂ.ಮೀ ಅಳತೆಯ ಗಡ್ಡೆ ಇರುವುದು ಪತ್ತೆಯಾಯಿತು. ಆರಂಭಿಕ ಹಂತದ ಕ್ಯಾನ್ಸರ್ ಎಂದು ಧೃಡಪಟ್ಟಿತು.

ಇದಕ್ಕೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ವಿಧಾನವನ್ನು ಅನುಸರಿಸಿದರೆ ಅರ್ಧ ಭಾಗಕ್ಕಿಂತ ಹೆಚ್ಚಾಗಿ ತೆಗೆಯಬೇಕಾಗಿತ್ತು. ಕ್ಯಾನ್ಸರ್ ಗೆಡ್ಡೆ ಟ್ಯೂಮರ್ ಇದ್ದ ಸ್ಥಳ ಅತಿ ಸೂಕ್ಷ್ಮವಾಗಿದ್ದರಿಂದ ಶಸ್ತ್ರಚಿಕಿತ್ಸೆಯ ಬಳಿಕ ಉಳಿಯುವ ಲಿವರ್ ಪ್ರಮಾಣ ಕಡಿಮೆ ಆಗುತ್ತದೆ. ರೋಗಿಯ ಸಕ್ಕರೆ ಕಾಯಿಲೆ ರಕ್ತದ ಒತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಟ್ಯೂಮರ್ ಬೋರ್ಡ್ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ವೈದ್ಯರ ತಂಡ ಮೈಕ್ರೋವೇವ್ ಅಬ್ಲೇಶನ್ ಎಂಬ ಚಿಕ್ಕ ರಂಧ್ರದ ಮೂಲಕ ಚಿಕಿತ್ಸೆ ನೀಡುವ ಆಧುನಿಕ ವಿಧಾನವನ್ನು ಆಯ್ಕೆ ಮಾಡಿತು.

ಈ ಚಿಕಿತ್ಸೆ ನೀಡಲು ರೋಗಿಯನ್ನು ಬೆಳಗ್ಗೆ 8 ಆಸ್ಪತ್ರೆಗೆ ದಾಖಲಿಸಿ ಅನೇಸ್ಥೆಸಿಯೋಲಾಜಿಸ್ಟ್ ಡಾ.ಕೆ.ಆರ್.ಪ್ರವೀಣ್ ಕುಮಾರ್ ಅನೇಸ್ಥೆಸಿಯಾ ನೀಡಿದರು. ಎಂಡೋ ವ್ಯಾಸ್ಕೂಲರ್ ಇಂಟರ್ವೆನ್ಷನಲ್ ರೇಡಿಯೋಲೋಜಿಸ್ಟ್ ಡಾ.ನಿಶಿತ ಪೆನ್ ರಿಫಿಲ್ ಗಾತ್ರದ ‘ಮೈಕ್ರೋವೇವ್ ಆಂಟೇನಾ ಪ್ರೊಬ್’ ಎನ್ನುವ ಸಾಧನವನ್ನು ಬಳಸಿ ಅಲ್ಟ್ರಾ ಸೌಂಡ್ ಮಾರ್ಗದರ್ಶನದಲ್ಲಿ ಲಿವರ್‌ನಲ್ಲಿರುವ ಕ್ಯಾನ್ಸರ್ ಗೆಡ್ಡೆ (ಟ್ಯೂಮರ್) ಸಂಪೂರ್ಣವಾಗಿ ಸುಡಲಾಯಿತು. ಮೈಕ್ರೋವೇವ್ ಅಬ್ಲೇಶನ್ ಚಿಕಿತ್ಸೆ ನೀಡಿದ್ದರಿಂದ ರೋಗಿಯು ಸ್ಪಂದಿಸಿದರು.

ಟ್ಯೂಮರ್‌ ಸಂಪೂರ್ಣ ನಾಶ

ಮೈಕ್ರೋವೇವ್ ಅಬ್ಲೇಶನ್ ಚಿಕಿತ್ಸೆಯ ವಾರಗಳ ಬಳಿಕ ಎಂಆರ್‌ಐ ಸ್ಕ್ಯಾನ್‌ನಲ್ಲಿ ಕ್ಯಾನ್ಸರ್ ಗೆಡ್ಡೆಯು ಟ್ಯೂಮರ್ ಸಂಪೂರ್ಣವಾಗಿ ನಾಶವಾಗಿರುವುದು ದೃಢಪಟ್ಟಿದೆ. ಈ ಚಿಕಿತ್ಸೆಯು ಯಶಸ್ವಿಯಾಗಿದ್ದು, ಮೈಕ್ರೋವೇವ್ ಅಬ್ಲೆಶನ್ ಕಾರ್ಯವಿಧಾನವು ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲದ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸಾ ವಿಧಾನವಾಗಿದೆ. ಈ ಆಧುನಿಕ ಚಿಕಿತ್ಸೆ ವಿಧಾನದಿಂದ ಕಡಿಮೆ ತೊಂದರೆಗಳು, ರಕ್ತಸ್ರಾವ ಸೋಂಕು ಅಥವಾ ಲಿವರ್ ವೈಫಲ್ಯದಂತ ಗಂಭೀರ ಸಮಸ್ಯೆಗಳ ಸಾಧ್ಯತೆ ಬಹಳ ಕಡಿಮೆ. ಈ ವಿಧಾನದಲ್ಲಿ ಕೇವಲ ಕ್ಯಾನ್ಸರ್ ಗೆಡ್ಡೆಯ (ಟ್ಯೂಮರ್) ಭಾಗವನ್ನು ಮಾತ್ರ ನಾಶಗೊಳಿಸಿ ಆರೋಗ್ಯಕರ ಲಿವರ್ ಭಾಗದ ಸಂರಕ್ಷಣೆ ಮಾಡಲಾಯಿತು.

ಮೈಕ್ರೋವೇವ್ ಅಬ್ಲೇಶನ್ ಚಿಕಿತ್ಸೆಯು ಚಿಕ್ಕ ರಂಧ್ರದ ಮೂಲಕ ಕ್ಯಾನ್ಸರ್ ಕೋಶಗಳು ಅಥವಾ ಗೆಡ್ಡೆಯನ್ನು ವಿದ್ಯುತ್ ಶಾಖದ ಮೂಲಕ ನಾಶ ಮಾಡುವ ಆಧುನಿಕ ಕಾರ್ಯವಿಧಾನವು ಇದೀಗ ಶಿವಮೊಗ್ಗದಲ್ಲಿರುವ ನಂಜಪ್ಪ ಲೈಫ್ ಕೇರ್‌ನಲ್ಲಿ ಲಭ್ಯವಿದೆ. ಇನ್ನು ಮುಂದೆ ಇಂತಹ ಚಿಕಿತ್ಸೆಗಳಿಗಾಗಿ ದೊಡ್ಡ ನಗರಗಳಿಗೆ ಪ್ರಯಾಣಿಸಬೇಕಿಲ್ಲ.

ಡಾ.ನಿಶಿತ, ಎಂಡೋ ವ್ಯಾಸ್ಕೂಲರ್ ಇಂಟರ್ವೆನ್ಷನಲ್ ರೇಡಿಯೋಲೋಜಿಸ್ಟ್.