ನಂಜರಾಜ ಬಹದ್ದೂರ್ ಛತ್ರದಲ್ಲಿ ದೇಸಿ ಅಕ್ಕಿ ಮೇಳಕ್ಕೆ ಚಾಲನೆ

| Published : May 19 2024, 01:47 AM IST

ನಂಜರಾಜ ಬಹದ್ದೂರ್ ಛತ್ರದಲ್ಲಿ ದೇಸಿ ಅಕ್ಕಿ ಮೇಳಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ದಿನಗಳ ಈ ಮೇಳದಲ್ಲಿ ಸುಮಾರು 25 ಮಳಿಗೆಗಳಿವೆ. ಸುಮಾರು 150 ಬಗೆಯ ಅಕ್ಕಿಗಳನ್ನು ಪ್ರದರ್ಶಿಸಲಾಯಿತು. ನೈಸರ್ಗಿಕವಾಗಿ ಬೆಳೆದ ಮಾವು, ರಾಗಿ ಮಾಲ್ಟ್ಪೌಡರ್ ಮುಂತಾದ ವಸ್ತುಗಳನ್ನು ಪ್ರದರ್ಶಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ ಸಂಸ್ಥೆಯು ರಿಬಿಲ್ಟ್ ಇಂಡಿಯಾ ಫೌಂಡ್ ಮತ್ತು ನಮ್ಮ ಅಕ್ಕಿ ಸಂರಕ್ಷಣ ಆಂದೋಲನ ಜತೆಗೂಡಿ ಆಯೋಜಿಸಿರುವ ಎರಡು ದಿನಗಳ ದೇಸಿ ಅಕ್ಕಿ ಮೇಳಕ್ಕೆ ಶನಿವಾರ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಚಾಲನೆ ನೀಡಿದರು.

ವಿವಿಧ ಬಗೆಯ ನೈಸರ್ಗಿಕ ಅಕ್ಕಿಗಳನ್ನು ಮೇಳದಲ್ಲಿ ಇರಿಸಲಾಗಿತ್ತು. ವಿಶಿಷ್ಟ ಗುಣಲಕ್ಷಣಗಳು, ಸುವಾಸನೆ ಮತ್ತು ರುಚಿಯುಳ್ಳ ಅಕ್ಕಿಗಳನ್ನು ಇಲ್ಲಿ ಪ್ರದರ್ಶಿಸಲಾಯಿತು.

ವಿವಿಧ ಬಗೆಯ ಅಕ್ಕಿಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಿರುವ ಈ ಮೇಳದಲ್ಲಿನ ಎಲ್ಲಾ ಬಗೆಯ ಅಕ್ಕಿಗಳು ಮತ್ತು ಅವುಗಳ ವೈಶಿಷ್ಟ್ಯವನ್ನು ಜಿಲ್ಲಾಧಿಕಾರಿ ಕೇಳಿ ತಿಳಿದುಕೊಂಡರು.

ಈ ಅಕ್ಕಿಗಳ ಮೇಳದಿಂದ ರೈತರ ಮತ್ತು ಸಾರ್ವಜನಿಕರ ಆರೋಗ್ಯ ಮತ್ತು ಅಭಿವೃದ್ಧಿಗೆ ಪೂರಕವಾಗಿದೆ. ನೈಸರ್ಗಿಕ ಮತ್ತು ಆರೋಗ್ಯಕ್ಕೆ ಪೂರಕವಾದ ಅಕ್ಕಿಗಳು ಇಲ್ಲಿವೆ ಎಂದರು.

ಎರಡು ದಿನಗಳ ಈ ಮೇಳದಲ್ಲಿ ಸುಮಾರು 25 ಮಳಿಗೆಗಳಿವೆ. ಸುಮಾರು 150 ಬಗೆಯ ಅಕ್ಕಿಗಳನ್ನು ಪ್ರದರ್ಶಿಸಲಾಯಿತು. ನೈಸರ್ಗಿಕವಾಗಿ ಬೆಳೆದ ಮಾವು, ರಾಗಿ ಮಾಲ್ಟ್ಪೌಡರ್ ಮುಂತಾದ ವಸ್ತುಗಳನ್ನು ಪ್ರದರ್ಶಿಸಲಾಯಿತು.

ಸಿ.ಎಫ್.ಟಿ.ಆರ್.ಐ ನಿರ್ದೇಶಕ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್, ಅಕ್ಕಿ ಸಂರಕ್ಷಕಿ ಗೀತಾ ಮತ್ತು ಶ್ರೀನಿವಾಸಮೂರ್ತಿ, ರೋಟರಿ ಬೆಂಗಳೂರು ಉತ್ತರದ ಅಧ್ಯಕ್ಷ ಎಂ.ಕೆ. ಶ್ರೀಧರ್, ಕಾರ್ಯದರ್ಶಿ ರಾಜು, ಬೀಜ ಸಂರಕ್ಷಕ ಬೋರೇಗೌಡ, ಸಹಜ ಸಮೃದ್ಧ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಮೊದಲಾದವರು ಇದ್ದರು.