ಕನ್ನಡಪ್ರಭ ವಾರ್ತೆ ಶಿರಾ ಬರದ ನಾಡಾಗಿದ್ದ ಶಿರಾ ತಾಲೂಕಿಗೆ ಹೇಮಾವತಿ ಹಾಗೂ ಭದ್ರಾ ನದಿಗಳಿಂದ ನೀರನ್ನು ತರಲು ಸ್ವಾಮೀಜಿ ನಡೆಸಿದ ಹೋರಾಟ ಮತ್ತು ಕೊಡುಗೆ ಅತ್ಯಂತ ಶ್ಲಾಘನೀಯವಾಗಿದ್ದು, ಶ್ರೀ ನಂಜಾವಧೂತ ಸ್ವಾಮೀಜಿಗಳನ್ನು ಪಡೆದ ಶಿರಾ ತಾಲೂಕಿನ ನಾವೇ ಪೂಣ್ಯವಂತರು ಅವರ ಮಾರ್ಗದರ್ಶನದಲ್ಲಿ ನಾವು ಮುಂದೆ ಸಾಗಬೇಕು ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.ಅವರು ಮಂಗಳವಾರ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಶ್ರೀ ನಂಜಾವಧೂತ ಸ್ವಾಮೀಜಿಯವರ ೪೭ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಸ್ವಾಮೀಜಿಯವರನ್ನು ಭೇಟಿ ಮಾಡಿ ಆರ್ಶೀವಾದ ಪಡೆದು ಮಾತನಾಡಿದರು.

ನೀರಿಲ್ಲದೆ ಜೀವನವೇ ಇಲ್ಲ, ಕೃಷಿಯೇ ಇಲ್ಲ ಎಂಬ ತತ್ತ್ವದೊಂದಿಗೆ ಸ್ವಾಮೀಜಿಯವರು ಕಳೆದ ಹಲವು ವರ್ಷಗಳಿಂದ ರೈತರ ಹಿತಾಸಕ್ತಿಗಾಗಿ ತಮ್ಮ ಧ್ವನಿಯನ್ನು ಎತ್ತಿ, ಸರಕಾರದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ರೈತರು, ಕೃಷಿ ಮತ್ತು ನೀರಾವರಿ ಕ್ಷೇತ್ರಗಳ ಅಭಿವೃದ್ಧಿಯೇ ನಮ್ಮ ದೇಶದ ಅಭಿವೃದ್ಧಿಗೆ ಮೂಲಭೂತ ಆಧಾರವಾಗಿದೆ ಎಂಬುದನ್ನು ಸ್ವಾಮೀಜಿಯವರು ಸದಾ ಒತ್ತಿಹೇಳುತ್ತಾ, ಅದಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಪಂಜಿಗಾನಹಳ್ಳಿ ತಿಪ್ಪೇಸ್ವಾಮಿ, ಕದ್ರೆಹಳ್ಳಿ ಮೂರ್ತಿ, ಗಾಣದಹುಣಸೆ ಶಿವಣ್ಣ, ಸೋರೆಕುಂಟೆ ರಘು, ಸತೀಶ್, ಜಗದೀಶ್, ಲಿಖಿತ್, ನರಸಿಂಹ ಸೇರಿದಂತೆ ಹಲವರು ಹಾಜರಿದ್ದರು. --------------- ೨೧ಶಿರಾ೧: ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಶ್ರೀ ನಂಜಾವಧೂತ ಸ್ವಾಮೀಜಿಯವರ ೪೭ನೇ ವರ್ಧಂತಿ ಮಹೋತ್ಸವ ಪ್ರಯುಕ್ತ ಮಾಜಿ ಶಾಸಕ ಡಾ. ರಾಜೇಶ್ ಗೌಡ ಸ್ವಾಮೀಜಿಯವರನ್ನು ಭೇಟಿ ಮಾಡಿ ಆರ್ಶೀವಾದ ಪಡೆದರು.