ಸಾರಾಂಶ
ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ 28ನೇ ವರ್ಷದ ಕಾವೇರಿ ರಥಯಾತ್ರೆ ಅ.17 ಹಾಗೂ 18ರಂದು ನಡೆಯಲಿದೆ ಎಂದು ಕೊಡಗು ಹಕ್ಕು ಸಂರಕ್ಷಣಾ ಸಮಿತಿ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ 28ನೇ ವರ್ಷದ ಕಾವೇರಿ ರಥಯಾತ್ರೆ ಅ.17 ಹಾಗೂ 18ರಂದು ನಡೆಯಲಿದೆ ಎಂದು ಕೊಡಗು ಹಕ್ಕು ಸಂರಕ್ಷಣಾ ಸಮಿತಿ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಕಾವೇರಿ ಮಾತೆಯ ಪ್ರತಿಮೆಯ ಭವ್ಯ ಪುಷ್ಪಾಲಂಕೃತ ಮೆರವಣಿಗೆ ನಾಪೋಕ್ಲು ರಾಮಮಂದಿರದಿಂದ 17ರಂದು ಹೊರಡಲಿದ್ದು ಪಾಲೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುವುದು. ಬಳಿಕ, ಚೇರಂಬಾಣೆ –ಚೆಟ್ಟಿಮಾನಿ ಮಾರ್ಗವಾಗಿ ಭಾಗಮಂಡಲ-ತಲಕಾವೇರಿಗೆ ತೆರಳಲಿದೆ. ತಲಕಾವೇರಿಗೆ ತೆರಳಿ ತೀರ್ಥೋದ್ಭವದ ಬಳಿಕ ವಿವಿಧ ಸ್ಥಳಗಳಲ್ಲಿ ತೀರ್ಥ ವಿತರಿಸಿ ಪಾಲೂರಿನ ಸತ್ಯ ಹರಿಶ್ಚಂದ್ರ ದೇವಾಲಯದ ಕಾವೇರಿ ನದಿಯಲ್ಲಿ ತಾಯಿ ಕಾವೇರಿ ಮಾತೆಯ ಕಳಶ ವಿಸರ್ಜನೆಯೊಂದಿಗೆ ಅಂತ್ಯಗೊಳ್ಳಲಿದೆ ಎಂದರು.
17ರಂದು ಬೆಳಗ್ಗೆ 9.30ಕ್ಕೆ ಭಾಗಮಂಡಲದಿಂದ ರಥಯಾತ್ರೆ ಆರಂಭಗೊಳ್ಳಲಿದ್ದು ಚೇರಂಗಾಲ, ಅಯ್ಯಂಗೇರಿ, ಪುಲಿಕೋಟು, ಪೇರೂರು, ಬಲ್ಲಮಾವಟಿ, ಚೋನಕೆರೆ ಮೂಲಕ ಭಕ್ತಾದಿಗಳಿಗೆ ಪುಣ್ಯ ತೀರ್ಥ ವಿತರಣೆ ಮಾಡುತ್ತಾ ಮಧ್ಯಾಹ್ನ 4.30 ಗಂಟೆಗೆ ನಾಪೋಕ್ಲು ತಲುಪಲಿದೆ ಎಂದು ಮಾಹಿತಿ ನೀಡಿದರು.ಗೋಷ್ಠಿಯಲ್ಲಿ ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಲಿಯಾಟಂಡ ಮಯ್ಯು ದೇವಯ್ಯ, ಪದಾಧಿಕಾರಿಗಳಾದ, ಬಿದ್ದಾಟಂಡ ಮಮತಾ ಚಿಣ್ಣಪ್ಪ, ಕಲಿಯಾಟ೦ಡ ಸುಮಿತ್ರ ದೇವಯ್ಯ ಇದ್ದರು.