ಸಾರಾಂಶ
ಗೌರಿ ಗಣೇಶೋತ್ಸವದ ವಿಸರ್ಜನೋತ್ಸವ ಮೆರವಣಿಗೆ ಪ್ರಾರಂಭಗೊಂಡ ಸಂದರ್ಭ ಶಾಸಕ ಎ.ಎಸ್. ಪೊನ್ನಣ್ಣ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಯ ಗೌರಿಗಣೇಶೋತ್ಸವದ ವಿಸರ್ಜನೋತ್ಸವ ಮೆರವಣಿಗೆ ಪ್ರಾರಂಭಗೊಂಡ ಸಂದರ್ಭ ಶಾಸಕ ಎ.ಎಸ್ ಪೊನ್ನಣ್ಣ ಭಾನುವಾರ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.ಗೌರಿಗಣೇಶೋತ್ಸವದ ವಿಸರ್ಜನೋತ್ಸವ ಅಂಗವಾಗಿ ಇಲ್ಲಿಯ ಸುತ್ತಮುತ್ತಲಿನ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿಗಣೇಶ ಮೂರ್ತಿಗಳ ವಿಸರ್ಜನೋತ್ಸವ ವಿಜೃಂಭಣೆಯಿಂದ ಭಾನುವಾರ ನಡೆಯಿತು. ಶ್ರೀರಾಮ ಟ್ರಸ್ಟ್ ಗಣೇಶೋತ್ಸವ ಸೇವಾ ಸಮಿತಿಗಳ ಅಧ್ಯಕ್ಷ ಕುಂಚ್ಚೆಟ್ಟಿರ ಸುಧಿ ಉತ್ತಪ್ಪ, ಉಪ ಅಧ್ಯಕ್ಷ ಕೇಲೇಟಿರ ದೀಪು ದೇವಯ್ಯ, ಕಾರ್ಯದರ್ಶಿ ನಾಯಕಂಡ ದೀಪು ಚಂಗಪ್ಪ, ಖಜಾಂಜಿ ಅಪ್ಪಚೆಟ್ಟೋಳಂಡ ನವೀನ್, ಬಿದ್ದಾಟಂಡ ಎಸ್ ತಮ್ಮಯ್ಯ, ಕುಲ್ಲೇಟಿರ ಅರುಣ್ ಬೇಬ, ಕಲಿಯಂಡ ಕೌಶಿಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಪೂಜಾ ಕಾರ್ಯವನ್ನು ಗಣಪತಿ ದೇವಾಲಯದ ಅರ್ಚಕ ರವಿ ಉಡುಪ ಅವರು ನೆರವೇರಿಸಿಕೊಟ್ಟರು.