ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ
ಹಾಕಿ ಉತ್ಸವ ಚೇನಂಡ ಹಾಕಿ ಟೂರ್ನಿಯ ಶುಕ್ರವಾರದ ಪಂದ್ಯಗಳಲ್ಲಿ ಮೇಕೇರಿರ ಹಾಗೂ ಕುಲ್ಲೇಟಿರ ಎರಡು ತಂಡಗಳು ಭರ್ಜರಿ ಜಯ ಗಳಿಸಿದವು.ಮೇಕೇರಿರ ತಂಡವು ಕಾಡ್ಯಮಾಡ ವಿರುದ್ಧ 5-0 ಅಂತರದಿಂದ ಹಾಗೂ ಕುಲ್ಲೇಟಿರ ಆತಿಥಿಯಾ ತಂಡ ಚೇನಂಡ ವಿರುದ್ಧ 5 -0 ಅಂತರದಿಂದ ಜಯ ಗಳಿಸಿದವು. ಪರದಂಡ ಮತ್ತು ಐಚೆಟ್ಟಿರ ತಂಡಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಪಂದ್ಯದಲ್ಲಿ ಎರಡೂ ತಂಡಗಳು ಒಂದೊಂದು ಗೋಲು ಗಳಿಸಿದವು .ಬಳಿಕ ಗೆಲುವಿಗಾಗಿ ಟೈಬ್ರೇಕರ್ ಮೊರೆ ಹೋಗಬೇಕಾಯಿತು. ಟೈ ಬ್ರೇಕರ್ ನಲ್ಲಿ ಪರದಂಡ ಐಚೆಟ್ಟಿರ ವಿರುದ್ಧ 5-4 ಅಂತರದಿಂದ ಜಯ ಗಳಿಸಿತು. ಇಟ್ಟಿರ ಮತ್ತು ಮೇರಿಯಂಡ ತಂಡಗಳ ನಡುವೆಯೂ ಸಮಬಲದ ಹೋರಾಟ ನಡೆಯಿತು. ಎರಡೂ ತಂಡಗಳು 2-2 ಗೋಲು ಗಳಿಸಿದವು. ಬಳಿಕ ಟೈ ಬ್ರೇಕರ್ ನಲ್ಲಿ ಇಟ್ಟಿರ ಮೇರಿಯಂಡ ವಿರುದ್ಧ 2-1ರಿಂದ ಜಯ ಸಾಧಿಸಿತು.ಉಳಿದಂತೆ ಮಚ್ಚಾರಂಡ, ಬೊಳ್ಳೆ ಪಂಡ ವಿರುದ್ಧ 3-2ರಿಂದ, ಪಳಂಗಂಡ , ಕಾಂಡಂಡ ವಿರುದ್ಧ 1-0ಯಿಂದ, ಪೆಮ್ಮಂಡ, ಮುರುವಂಡ ವಿರುದ್ಧ 1-0ಯಿಂದ, ಚೇಂದೀರ, ಕೊಂಗಂಡ ವಿರುದ್ಧ 2-1ರಿಂದ, ಸಣ್ಣುವಂಡ, ಬೊವ್ವೇರಿಯಂಡ ವಿರುದ್ಧ 3-1ರಿಂದ, ಮಂಡೆಪಂಡ, ಪಟ್ಟಚೆರವಂಡ ವಿರುದ್ಧ 4- 0 ಅಂತರದಿಂದ ಜಯ ಗಳಿಸಿತು.
ಇಂದಿನ ಪಂದ್ಯಗಳು:
ಮೈದಾನ1
8.30 ಕ್ಕೆ ಚೇಂದಂಡ v/s ಪಾಡೆಯಂಡ 9.30 ಕ್ಕೆ ಕೊಲ್ಲೀರ v/s ನೆಲ್ಲಮಕ್ಕಡ10.30ಕ್ಕೆ
ಇಟ್ಟೀರ v/s ಮಚ್ಚಾರಂಡ 11.30ಕ್ಕೆ ಬಲ್ಲಚಂಡ v/s ಮೂಕೊಂಡ 12.30ಕ್ಕೆ ಚೇಂದೀರ v/s ಮಂಡೇಪಂಡ 1.30ಕ್ಕೆ ಪುಲ್ಲಂಗಡ v/s ಕೂತಂಡಮೈದಾನ 29ಕ್ಕೆ ಚೆಪ್ಪುಡಿರ v/s ಬೋಟೋಳಂಡ 10 ಕ್ಕೆ ಪರದಂಡ v/s ಮೇಕೇರಿರ 11ಕ್ಕೆ ಕುಪ್ಪಂಡ (ಕೈಕೇರಿ) v/s ಕಂಬೀರಂಡ 12ಕ್ಕೆ ಅರಮಣಮಾಡ v/s ಮುಕ್ಕಾಟಿರ (ಹರಿಹರ) 1ಕ್ಕೆ ಕೋಳೇರ v/s ಸೋಮೆಯಂಡ