ಸಾರಾಂಶ
ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಪಟ್ಟಣದಿಂದ ಕೊಡವ ಸಮಾಜಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೆಲವು ಕಡೆ ಸಂಪೂರ್ಣ ಹದಗೆಟ್ಟಿದ್ದು ತುರ್ತು ದುರಸ್ತಿಪಡಿಸಬೇಕಾದ ಅಗತ್ಯವಿದೆ. ರಸ್ತೆಯೆಲ್ಲಾ ಹೊಂಡಗಳಾಗಿದ್ದು ಕೆಸರುಮಯವಾಗಿ ವಾಹನಗಳ ಸಂಚಾರಕ್ಕೆ ತೊಡಕಾಗಿದೆ.
ನಾಪೋಕ್ಲು, ಕುರೂಳಿ, ಎಮ್ಮೆಮಾಡು ಸಂಪರ್ಕ ರಸ್ತೆಯಾಗಿದ್ದು ಈ ವ್ಯಾಪ್ತಿಯ ಜನರಿಗೆ ಬಹುಪಯೋಗಿ ಇದಾಗಿದ್ದು ಇದೀಗ ಆಟೋರಿಕ್ಷ ಚಾಲಕರು ದುಪ್ಪಟ್ಟು ಬಾಡಿಗೆ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಬೇಸಿಗೆ ಅವಧಿಯಲ್ಲಿ ಈ ರಸ್ತೆ ದುರಸ್ತಿ ಪಡಿಸಬೇಕಿತ್ತು. ಇದೀಗ ಮಳೆಗಾಲ ಆರಂಭವಾಗಿದ್ದು ಗುಂಡಿಗಳಲ್ಲಿ ಮಳೆ ನೀರು ನಿಂತು ರಸ್ತೆಯಲ್ಲಿ ಸಂಚರಿಸುವುದು ಯಾತನಾಮಯವಾಗಿದೆ. ಹೆಚ್ಚಿನ ದುರಂತ ಸಂಭವಿಸುವ ಮೊದಲು ಸಂಬಂಧ ಪಟ್ಟವರು ಶೀಘ್ರ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ನಾಗರಿಕರು ಎಚ್ಚರಿಸಿದ್ದಾರೆ.
......................ಕಳೆದ ಒಂದು ವರ್ಷದಿಂದ ಸಂಬಂಧಪಟ್ಟ ಅಭಿಯಂತರಲ್ಲಿ ಕಲ್ಲು ಮಿಶ್ರಿತ ಹುಡಿಯನ್ನಾದರೂ ಹಾಕಿ ಗುಂಡಿ ಮುಚ್ಚಿ ಕೊಡಲು ವಿನಂತಿಸಿದರೂ ಯಾವುದೇ ಪ್ರಯೋಜನ ವಾಗಲಿಲ್ಲ. ಸಂಬಂಧಪಟ್ಟವರು ಕೂಡಲೆ ಗುಂಡಿ ಮುಚ್ಚಿ ನಡೆದಾಡಲು ಅನುವು ಮಾಡಿಕೊಡಿ.
-ಕಂಗಡ ಜಾಲಿ ಪೂವಪ್ಪ, ನಾಪೋಕ್ಲು ಗ್ರಾಮಸ್ಥ.....................
ಈ ರಸ್ತೆಯಲ್ಲಿ ಮದುವೆ ಸಮಾರಂಭ ಸೇರಿದಂತೆ ಗ್ರಾಮಸ್ಥರ ವಾಹನಗಳು ದಿನನಿತ್ಯ ಸಂಚರಿಸುತ್ತಿದ್ದು ತಕ್ಷಣ ಸರಿಪಡಿಸಿ. ರಸ್ತೆ ಇನ್ನಷ್ಟು ಹೋಳಾಗದಂತೆ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.-ಬಾಲೆಯಡ ಎನ್. ಮೇದಪ್ಪ, ನಾಪೋಕ್ಲು ಗ್ರಾಮಸ್ಥ.
................ಈ ರಸ್ತೆ ಗುಂಡಿ ಬಿದ್ದಿದ್ದು ಸಮಸ್ಯೆಯಾಗುತ್ತಿರುವ ಬಗ್ಗೆ ಇಂದು ಗಮನಕ್ಕೆ ಬಂದಿದೆ. ಸಂಬಂಧಪಟ್ಟವರಲ್ಲಿ ಮಾತನಾಡಿ ಕೂಡಲೇ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು.-ವನಜಾಕ್ಷಿ ರೇಣುಕೇಶ್, ನಾಪೋಕ್ಲು ಗ್ರಾ.ಪಂ. ಅಧ್ಯಕ್ಷೆ.