ನಾಪೋಕ್ಲು: ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಕಡಿತವಾಗುತ್ತಿದ್ದು ಜನಸಾಮಾನ್ಯರು ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯುತ್ ಸಮಸ್ಯೆ ಕೂಡಲೇ ಬಗೆಹರಿಸಬೇಕು ಎಂದು ಬಿಜೆಪಿ ಬಿಜೆಪಿ ಶಕ್ತಿ ಕೇಂದ್ರದ ಹಾಗೂ ಸಾರ್ವಜನಿಕರು ಒತ್ತಾಯಿಸಿದರು.

ಇಲ್ಲಿನ ಸೆಸ್ಕ್ ಕಚೇರಿಯ ಎದುರು ವಿದ್ಯುತ್ ಇಲಾಖೆಯ ವಿರುದ್ಧ ಶುಕ್ರವಾರ ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಿ15 ದಿನಗಳ ಒಳಗಾಗಿ ವಿದ್ಯುತ್ ಸಮಸ್ಯೆ ಪರಿಹರಿಸದಿದ್ದಲ್ಲಿ ಕಚೇರಿಗೆ ಬೀಗ ಹಾಕಿ ತರಹದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಮಾತನಾಡಿ, ಕಳೆದ ಕೆಲವು ದಿನಗಳಿಂದ ನಾಪೋಕ್ಲು ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ಕಡಿತವಾಗುತ್ತಿದೆ. ವಿದ್ಯುತ್ ಅವಲಂಬಿತ ಕೆಲಸ ಕಾರ್ಯಗಳು ಯಾವುದೂ ಸರಿಯಾಗಿ ನಡೆಯುತ್ತಿಲ್ಲ. ವಿದ್ಯುತ್ ಕಡಿತದ ಅವಧಿ ನಿಗದಿಗೊಳಿಸಿ ಉಳಿದ ಸಮಯದಲ್ಲಿ ಸರಾಗವಾಗಿ ವಿದ್ಯುತ್ ಪೂರೈಕೆ ಮಾಡಿ ಎಂದು ಆಗ್ರಹಿಸಿದರು. 15 ದಿನಗಳ ಒಳಗಾಗಿ ವಿದ್ಯುತ್ ಸಮಸ್ಯೆ ಪರಿಹರಿಸದಿದ್ದಲ್ಲಿ ಕಚೇರಿಗೆ ಬೀಗ ಹಾಕಿ ತೀವ್ರ ಪ್ರತಿಭಟನೆ ಮಾಡುವುದಾಗಿ ಎಂದರು.ಮಳೆಗಾಲದಲ್ಲೊಂದು ಬೇಸಿಗೆಯಲ್ಲಿ ಮತ್ತೊಂದು: ಕೆಟೋಳಿರ ಹರೀಶ್ ಪೂವಯ್ಯಮಾತನಾಡಿ ಕೆಲವು ವರ್ಷಗಳಿಂದ ಹೋಬಳಿ ವ್ಯಾಪ್ತಿಯ ವಿದ್ಯುತ್ ಸಮಸ್ಯೆ ಬಗ್ಗೆ ಹರಿದಿಲ್ಲ. ಪ್ರತಿ ವರ್ಷ ಒಂದಲ್ಲ ಒಂದು ಕಾರಣ ಹೇಳಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಒಂದು ರೀತಿಯ ಸಮಸ್ಯೆ ಆದರೆ ಬೇಸಿಗೆಯಲ್ಲಿಯೂ ಸಮಸ್ಯೆ ಪರಿಹಾರವಾಗುತ್ತಿಲ್ಲ. ವಿದ್ಯುತ್ ಸಮಸ್ಯೆಗೆ ಶೀಘ್ರ ಪರಿಹಾರ ಕೊಡಿ ಎಂದು ಒತ್ತಾಯಿಸಿದರು.

ಮುಕ್ಕಾಟಿರ ವಿನಯ್ ಮಾತನಾಡಿ, ನೆಲಜಿ ಗ್ರಾಮದಲ್ಲಿ ವೋಲ್ಟೇಜ್ ಇಲ್ಲದೆ ಸಮಸ್ಯೆಯಾಗುತ್ತಿದೆ. ವಿದ್ಯುತ್ ಚಾಲಿತ ಯಾವ ಉಪಕರಣಳೂಳು ಕಾರ್ಯನಿರ್ವಹಿಸುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ವ್ಯವಸ್ಥಿತವಾಗಿ ವಿದ್ಯುತ್ ಪೂರೈಕೆ ಮಾಡುವ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.ಶಿವಚಾಳಿಯಂಡ ಜಗದೀಶ್ ಮಾತನಾಡಿ ಉಚಿತ ವಿದ್ಯುತ್ ಕೊಡಿ ಎಂದು ನಾಗರಿಕರು ಕೇಳಿಲ್ಲ. ನಿತ್ಯಸಮರ್ಪಕ ವಿದ್ಯುತ್ ಪೂರೈಕೆ ಮಾಡಿ. ಜನಸಾಮಾನ್ಯರು ಪರಿತಪಿಸುವಂತೆ ಮಾಡಬೇಡಿ ಎಂದರು.

ಮೇಲ್ದರ್ಜೆಗೆ ಏರುತ್ತಿದೆ: ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಯ್ ಕುಮಾರ್ ಪ್ರತಿಕ್ರಿಯಿಸಿ ಮೂರ್ನಾಡು ಫೀಡರ್ ಮೇಲ್ದರ್ಜೆಗೇರಿಸುವ ಕಾರ್ಯ ಪ್ರಗತಿಯಲ್ಲಿದೆ. ಹತ್ತು ದಿನಗಳ ಒಳಗಾಗಿ ಹೊಸ ಲೈನ್ ಅಳವಡಿಕೆ ಕೆಲಸ ಪೂರ್ಣಗೊಳ್ಳಲಿದೆ. ಬಳಿಕ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದರು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು ಮೂರು ಮಂದಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು. ಜೊತೆಯಲ್ಲಿ ಇಲ್ಲಿ ಜೆ ಇ ಹರೀಶ್ ಎಚ್ ಆರ್ ಇದ್ದರು.ಪಾಡಿಯಮ್ಮಂಡ ಮನು ಮಹೇಶ್, ಕುಲ್ಲೆಟಿರ ಅಜಿತ್, ಪಾಲಚಂಡ ಸೀಮಾ, ಅರೆಯಡ ಅಶೋಕ್, ಕಂಗಾಂಡ ಜಾಲಿ ಪೂವಪ್ಪ, ಕುಂಡಿಯೋಳಂಡ ವಿಶು ಪೂವಯ್ಯ, ಬಾಲೆಯಡ ಮೇದಪ್ಪ , ಶಿವಚಾಳಿಯಿಂದ ಕಿಶೋರ್ ಬೋಪಣ್ಣ, ಪ್ರಸಾದ್, ಡಾಲಿ ಅಚ್ಚಪ್ಪ, ಕನ್ನಂಬೀರ ಸುಧಿ, ಸುಕುಮಾರ್, ಮುತ್ತಣ್ಣ , ಸುಬ್ರಮಣಿ, ತಮ್ಮಯ್ಯ, ಕಾರ್ಯಪ್ಪ, ಭುವನ್, ಪೊನ್ನಪ್ಪ, ಮಧು, ರಾಜೇಶ್ ಸೇರಿದಂತೆ ಎನ್ನಿ ಮತ್ತಿತರರಿದ್ದರು.