ನಾಪೋಕ್ಲು ಎಸ್‌ಎನ್‌ಡಿಪಿ ಶಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಕೊಡೆಗಳನ್ನು ವಿತರಿಸಲಾಯಿತು. ಶ್ರೀರಾಮ ಮಂದಿರದ ಗುರು ಪೊನ್ನಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷೆ ರಿಶ ಸುರೇಂದ್ರನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಎಸ್‌ಎನ್‌ಡಿಪಿ ಶಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಕೊಡೆಗಳನ್ನು ವಿತರಿಸಲಾಯಿತು.

ಶ್ರೀರಾಮ ಮಂದಿರದ ಗುರು ಪೊನ್ನಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷೆ ರಿಶ ಸುರೇಂದ್ರನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಎಸ್‌ಎನ್‌ಡಿಪಿ ವತಿಯಿಂದ ನೆರವು ನೀಡಲಾಗುತ್ತಿದೆ. ಸಂಘದ ಸದಸ್ಯರ ಮಕ್ಕಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಎಲ್‌ಕೆಜಿಯಿಂದ ಪದವಿಪೂರ್ವ ಕಾಲೇಜಿ ವರೆಗೆ ವ್ಯಾಸಂಗ ಮಾಡುತ್ತಿರುವ ಎಸ್‌ಎನ್‌ಡಿಪಿ ನಾಪೋಕ್ಲು ಶಾಖೆಯ ಸದಸ್ಯರ ಮಕ್ಕಳಿಗೆ ನೋಟ್‌ ಪುಸ್ತಕ ಹಾಗೂ ಕೊಡೆಗಳನ್ನು ವಿತರಿಸಲಾಯಿತು.

ಇದೇ ಸಂದರ್ಭ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಘದ ಸದಸ್ಯೆ ವಿಲಾಸಿನಿ ಎಂಬವರ ಚಿಕಿತ್ಸೆಗಾಗಿ 58,000 ರು. ಧನ ಸಹಾಯವನ್ನು ಕುಟುಂಬಸ್ಥರಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಎಸ್‌ಎನ್‌ಡಿಪಿ ಜಿಲ್ಲಾ ಮಹಿಳಾ ಘಟಕ ನಿರ್ದೇಶಕಿ ಬಬಿತಾ, ನಾಪೋಕ್ಲು ಶಾಖೆಯ ಅಧ್ಯಕ್ಷ ಟಿ.ಸಿ. ಲವ, ಕಾರ್ಯದರ್ಶಿ ಕಿಶೋರ್, ಜಿಲ್ಲಾ ನಿರ್ದೇಶಕ ಟಿ.ಸಿ. ರಾಜಿವನ್, ಶ್ರೀ ಪೊನ್ನುಮತಪ್ಪ ದೇವಾಲಯದ ಅಧ್ಯಕ್ಷ ಎ.ಕೆ. ಚಂದ್ರನ್, ಎಸ್‌ಎನ್‌ಡಿಪಿ ನಾಪೋಕ್ಲು ಶಾಖೆಯ ಸಹಕಾರ್ಯದರ್ಶಿ ಅಜಿತ್, ಉಪಾಧ್ಯಕ್ಷ ತಂಗನ್, ಹರಿದಾಸ್ ಸಂಘಟನಾ ಕಾರ್ಯದರ್ಶಿ ರಿತೀಶ್ ಮನೋಹರ ಕೋಶಾಧಿಕಾರಿ ಸುಧೀಶ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.