ಸಾರಾಂಶ
ಉತ್ಸವದ ಅಂಗವಾಗಿ ಶನಿವಾರ ದೇವತಕ್ಕರಾದ ಕಾಂಡಂಡ ಮನೆಯಿಂದ ದೇವರ ಭಂಡಾರವನ್ನು ದೇವಾಲಯಕ್ಕೆ ತರಲಾಯಿತು. ಭಾನುವಾರ ಪಟ್ಟಣಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಬೆಳಗ್ಗೆ ದೇವರ ದರ್ಶನ, ಬಳಿಕ ಎತ್ತುಪೋರಾಟ, ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಜರುಗಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ವೆಸ್ಟ್ ಕೊಳಕೇರಿ ಗ್ರಾಮದ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ಸಾಂಪ್ರದಾಯಿಕವಾಗಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.ಉತ್ಸವದ ಅಂಗವಾಗಿ ಶನಿವಾರ ದೇವತಕ್ಕರಾದ ಕಾಂಡಂಡ ಮನೆಯಿಂದ ದೇವರ ಭಂಡಾರವನ್ನು ದೇವಾಲಯಕ್ಕೆ ತರಲಾಯಿತು. ಭಾನುವಾರ ಪಟ್ಟಣಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಬೆಳಗ್ಗೆ ದೇವರ ದರ್ಶನ, ಬಳಿಕ ಎತ್ತುಪೋರಾಟ, ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಜರುಗಿತು.ಮಧ್ಯಾಹ್ನದ ಬಳಿಕ ಗ್ರಾಮಸ್ಥರಿಂದ ಬೊಳಕಾಟ್ ಪ್ರದರ್ಶನ, ದೇವರ ಪ್ರದರ್ಶನ ನೃತ್ಯ ಮಹೋತ್ಸವ, ಭಕ್ತರಿಗೆ ಲಘು ಉಪಹಾರ ಸಂತರ್ಪಣೆ ನಡೆಯಿತು.
ಸೋಮವಾರ ಆಟ್, ಪಾಟ್, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ದೇವರ ಅವಭೃತ ಸ್ನಾನ, ಪ್ರದರ್ಶನ ನೃತ್ಯ ಜರುಗಿತು.ಮಂಗಳವಾರ ಶುದ್ಧ ಕಲಶ ಹಾಗೂ ಬುಧವಾರ ಬೇಟೆಗಾರ ದೇವರ ಉತ್ಸವ ಜರುಗಲಿದೆ. ದೇವರ ಪೂಜಾ ವಿಧಿ ವಿಧಾನವನ್ನು ದೇವಾಲಯದ ಮುಖ್ಯ ಅರ್ಚಕ ಸೀತಾರಾಮ್ ಭಟ್, ತಂತ್ರಿಗಳಾಗಿ ಜಗದೀಶ್, ರಾಘವೇಂದ್ರ ಭಟ್ ಹಾಗೂ ಸತ್ಯಮೂರ್ತಿ ಸರಳಾಯ ನೆರವೇರಿಸಿ ಕೊಟ್ಟರು.ಉತ್ಸವದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಂಡಿಯೊಳಂಡ ರಮೇಶ್ ಮುದ್ದಯ್ಯ, ಉಪಾಧ್ಯಕ್ಷ ಕಾಂಡಂಡ ಜಯ ಕರಂಬಯ್ಯ, ಖಜಾಂಚಿ ಕನ್ನಂಬೀರ ರವಿ ಚಿನ್ನಪ್ಪ, ಕಾರ್ಯದರ್ಶಿ ಕುಂಡಿಯೊಳಂಡ ವಿಷು ಪೂವಯ್ಯ, ಆಡಳಿತ ಮಂಡಳಿ ನಿರ್ದೇಶಕರು, ತಕ್ಕ ಮುಖ್ಯಸ್ಥರು ಪಾಲ್ಗೊಂಡಿದ್ದರು. ಭಕ್ತರು ಶ್ರದ್ಧಾ ಭಕ್ತಿಯಿಂದ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿವಿಧ ಹರಕೆ, ಕಾಣಿಕೆ ಸೇವೆಯನ್ನು ನೆರವೇರಿಸಿಕೊಂಡರು.
24ಎನ್ ಪಿಕೆ.1.ನಾಪೋಕ್ಲು ಸಮೀಪದ ವೆಸ್ಟ್ ಕೊಳಕೇರಿ ಗ್ರಾಮದ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವದ ಅಂಗವಾಗಿ ಗ್ರಾಮಸ್ಥರು ಬೊಳಕಾಟ್ ಪ್ರದರ್ಶಿಸಿದರು.24ಎನ್ ಪಿಕೆ2 ನಾಪೋಕ್ಲು ಸಮೀಪದ ವೆಸ್ಟ್ ಕೊಳಕೇರಿ ಗ್ರಾಮದ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವದ ಅಂಗವಾಗಿ .ದೇವರ ಪ್ರದರ್ಶನ ನೃತ್ಯ ಮಹೋತ್ಸವ ಜರುಗಿತರು.