೭ಕೆಎಲ್ಆರ್-೪ಕೋಲಾರ ತಾಲೂಕು ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿ ಡಾ.ವಿದ್ಯಾಶ್ರೀ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಸಮಯಕ್ಕೆ ಸರಿಯಾಗಿ ಸಿಗುತ್ತಿರಲಿಲ್ಲ ಕೂಡಲೇ ಬೇರೆ ಕಡೆಗೆ ವರ್ಗಾವಣೆ ಮಾಡಬೇಕೆಂದು ನರಸಾಪುರ ಗ್ರಾಮಸ್ಥರು ಜಿಲ್ಲಾ ಆರೋಗ್ಯ ಅಧಿಕಾರಿ ಶ್ರೀನಿವಾಸ್ರಿಗೆ ಮನವಿಸಲ್ಲಿಸುತ್ತಿರುವುದು. | Kannada Prabha
Image Credit: KP
ವೈದ್ಯಾಧಿಕಾರಿಯಾಗಿ ಬಂದ ಡಾ. ವಿದ್ಯಾಶ್ರೀ ರೋಗಿಗಳ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ, ಸಿಬ್ಬಂದಿಯೊಂದಿಗೆ ಸಮನ್ವಯದ ಕೊರತೆ ಇದೆ, ಇತ್ತೀಚೆಗೆ ರೋಗಿಗಳು ಸರತಿ ಸಾಲಿನಲ್ಲಿ ಕಾಯುತ್ತಿದ್ದರೂ ಲೆಕ್ಕಿಸದೆ ಬರ್ತಡೆ ಆಚರಣೆ ಮತ್ತು ಪಾರ್ಟಿ ನೆಪದಲ್ಲಿ ಸುಮಾರು ಗಂಟೆಗಳ ಕಾಲ ರೋಗಿಗಳನ್ನು ಕಾಯಿಸಿದ ಪ್ರಸಂಗವು ನಡೆದಿದೆ.ರೋಗಿಗಳು ಬಂದರೆ ಹಲವು ಕಾರಣಗಳನ್ನು ನೀಡಿ ಸತಾಯಿಸುತ್ತಾರೆ. ಇಂತಹ ವೈದ್ಯಾಧಿಕಾರಿ ನಮ್ಮ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಡವೇ ಬೇಡ
ಕನ್ನಡಪ್ರಭ ವಾರ್ತೆ ಕೋಲಾರ
ತಾಲೂಕಿನ ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿ ಡಾ.ವಿದ್ಯಾಶ್ರೀ ಕೂಡಲೇ ವರ್ಗಾವಣೆ ಮಾಡಬೇಕೆಂದು ಗ್ರಾಮಸ್ಥರು ಜಿಲ್ಲಾ ಆರೋಗ್ಯ ಅಧಿಕಾರಿ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು.
ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಹಲವು ವೈದ್ಯರು ಸೇವೆ ಸಲ್ಲಿಸುತ್ತಾ ರೋಗಿಗಳೊಂದಿಗೆ ಹಾಗೂ ಗ್ರಾಮಸ್ಥರೊಂದಿಗೆ ಒಳ್ಳೆಯ ಸಮನ್ವಯದಿಂದ ಒಟ್ಟಾಗಿ ಹೋಗುತ್ತಿದ್ದರು, ಅವರೊಂದಿಗೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ, ಆದರೆ ಕೆಲ ತಿಂಗಳ ಹಿಂದೆ ವೈದ್ಯಾಧಿಕಾರಿಯಾಗಿ ಬಂದ ಡಾ. ವಿದ್ಯಾಶ್ರೀ ರೋಗಿಗಳ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ, ಸಿಬ್ಬಂದಿಯೊಂದಿಗೆ ಸಮನ್ವಯದ ಕೊರತೆ ಇದೆ, ಇತ್ತೀಚೆಗೆ ರೋಗಿಗಳು ಸರತಿ ಸಾಲಿನಲ್ಲಿ ಕಾಯುತ್ತಿದ್ದರೂ ಲೆಕ್ಕಿಸದೆ ಬರ್ತಡೆ ಆಚರಣೆ ಮತ್ತು ಪಾರ್ಟಿ ನೆಪದಲ್ಲಿ ಸುಮಾರು ಗಂಟೆಗಳ ಕಾಲ ರೋಗಿಗಳನ್ನು ಕಾಯಿಸಿದ ಪ್ರಸಂಗವು ನಡೆದಿದೆ.ರೋಗಿಗಳು ಬಂದರೆ ಹಲವು ಕಾರಣಗಳನ್ನು ನೀಡಿ ಸತಾಯಿಸುತ್ತಾರೆ. ಇಂತಹ ವೈದ್ಯಾಧಿಕಾರಿ ನಮ್ಮ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಡವೇ ಬೇಡ ಎಂದು ಮನವಿ ಮಾಡಿದರು.
ನರಸಾಪುರ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಬಸವರಾಜ್, ಸದಸ್ಯ ಕೆಇಬಿ ಚಂದ್ರು, ಮುನಿರಾಜು, ಬೆಳ್ಳೂರು ನರಸಿಂಹ, ನಿವೃತ್ತ ಮುಖ್ಯ ಶಿಕ್ಷಕ ಎನ್.ಪಿ.ಶ್ರೀನಿವಾಸ್, ಎಸ್‌ಎನ್‌ಆರ್ ಆಸ್ಪತ್ರೆ ಆರೋಗ್ಯ ಸಮಿತಿಯ ಸದಸ್ಯ ವಾಸಿಮ್, ಮುಖಂಡರಾದ ಸತೀಶ್, ಕರವೇ ಶೇಖರ್, ಚಿನ್ನಪ್ಪಣ್ಣ, ಹರೀಶ್, ಕಿರಣ್, ಬಾದರ್, ಹೋಟೆಲ್ ದೇವಾ, ಲೋಕೇಶ್, ಲಕ್ಷ್ಮಿಪತಿ ಇದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.