ನರಸಿಂಹರಾಜಪುರಪಟ್ಟಣ ಪಂಚಾಯಿತಿಯಿಂದ 2026–27ನೇ ಸಾಲಿಗೆ ₹57 ಲಕ್ಷ ಉಳಿತಾಯ ಆಯವ್ಯಯ ಮಂಡಿಸಲಾಯಿತು.ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಆಡಳಿತಾಧಿಕಾರಿ ತಹಸೀಲ್ದಾರ್ ನೂರುಲ್ ಹುದಾ ಆಯವ್ಯಯ ಮಂಡಿಸಿದರು.

57 ಲಕ್ಷ ರು. ಉಳಿತಾಯದ ಆಯವ್ಯಯ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಪಟ್ಟಣ ಪಂಚಾಯಿತಿಯಿಂದ 2026–27ನೇ ಸಾಲಿಗೆ ₹57 ಲಕ್ಷ ಉಳಿತಾಯ ಆಯವ್ಯಯ ಮಂಡಿಸಲಾಯಿತು.ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಆಡಳಿತಾಧಿಕಾರಿ ತಹಸೀಲ್ದಾರ್ ನೂರುಲ್ ಹುದಾ ಆಯವ್ಯಯ ಮಂಡಿಸಿದರು.

ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಕ ಶಿಲ್ಕು ಸೇರಿದಂತೆ ₹7 ಕೋಟಿ17ಲಕ್ಷದ 42,560 ಆದಾಯ ನಿರೀಕ್ಷಿಸಲಾಗಿದೆ. ₹6ಕೋಟಿ 60ಲಕ್ಷದ 42ಸಾವಿರದ 566 ವೆಚ್ಚ ಅಂದಾಜಿಸಲಾಗಿದೆ. ಪಟ್ಟಣ ಪಂಚಾಯಿತಿಗೆ ನೀರಿಕ್ಷಿಸಲಾದ ಆದಾಯ ಬರುವ ಮೂಲ ಗಳೆಂದರೆ ವಾಣಿಜ್ಯ ಮಳಿಗೆಗಳು ಹಾಗೂ ನೆಲಬಾಡಿಗೆಯಿಂದ ₹72.26 ಲಕ್ಷ, ಇತರೆ ಜಮೆ ₹41.03ಲಕ್ಷ, ನೀರಿನ ತೆರಿನ ತೆರಿಗೆ ₹20.20ಲಕ್ಷ, ಸರ್ಕಾರದ ಅನುದಾನಗಳಾದ ಎಸ್ ಎಫ್ ಸಿ ಮುಕ್ತನಿಧಿ ಅನುದಾನ ₹2ಲಕ್ಷ, ಎಸ್ ಎಫ್ ಸಿ ವಿಶೇಷ ಅನುದಾನ ₹10ಲಕ್ಷ, 16ನೇ ಹಣಕಾಸು ಯೋಜನೆ ಅನುದಾನ ₹90ಲಕ್ಷ, ಸಲ್ಮ್ ಯೋಜನೆ ಅನುದಾನ ₹3ಲಕ್ಷ, ಆಶ್ರಯ ಯೋಜನೆ ಅನುದಾನ ₹5ಲಕ್ಷ, ಕುಡಿಯುವ ನೀರಿನ ಅನುದಾನ ₹5ಲಕ್ಷ, ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ಹಾಗೂ ಲೋಕಸಭಾ ಸದಸ್ಯರ ವಿಶೇಷ ಅನುದಾನ ಮತ್ತು ಅತಿವೃಷ್ಠಿ ಪರಿಹಾರ ಅನುದಾನ ₹5ಲಕ್ಷ, ವೇತನ ಅನುದಾನ ₹1.45ಕೋಟಿ, ವಿದ್ಯುತ್ ಶಕ್ತಿ ಅನುದಾನ ₹66ಲಕ್ಷ, ಸ್ವಚ್ ಭಾರತ್ ಯೋಜನೆ ಅನುದಾನ ₹20ಲಕ್ಷ. ಒಟ್ಟು ₹5.29 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದರು.

ಪ್ರಸಕ್ತ ಸಾಲಿನಿ ನಿರೀಕ್ಷಿತ ಅಂದಾಜು ವೆಚ್ಚದ ಮೂಲಗಳು ಯಾವುದೆಂದರೆ ಕಚೇರಿ ಆಡಳಿತಾತ್ಮಕ ವೆಚ್ಚಗಳು, ನೌಕರರ ವೇತನ ₹2.47ಕೋಟಿ, ಕಚೇರಿ ಉಪಕರಣ ಹಾಗೂ ಪೀಠೋಪಕರಣಗಳು ₹20ಲಕ್ಷ, ವಂತಿಕೆಗಳು ಮತ್ತು ಸಹಾಯಧನ ₹13ಲಕ್ಷ, ರಸ್ತೆಗಳ ಅಭಿವೃದ್ಧಿ ಮತ್ತು ನಿರ್ಮಾಣ ₹22.20ಲಕ್ಷ, ಚರಂಡಿಗಳ ಅಭಿವೃದ್ಧಿ ಮತ್ತು ನಿರ್ಮಾಣ ₹60ಲಕ್ಷ, ನೀರು ವಿತರಣಾ ವ್ಯವಸ್ಥೆ ₹25ಲಕ್ಷ, ಬೀದಿ ದೀಪಗಳ ವ್ಯವಸ್ಥೆ ₹10ಲಕ್ಷ, ಮಾರುಕಟ್ಟೆ, ಬಸ್ ನಿಲ್ದಾಣ ಹಾಗೂ ಸಮುದಾಯ ಭವನಗಳ ಅಭಿವೃದ್ಧಿ ₹31ಲಕ್ಷ, ಸ್ಮಶಾನ, ಉದ್ಯಾನಗಳ ಅಭಿವೃದ್ಧಿ ಹಾಗೂ ನಾಗರಿಕ ವಿನ್ಯಾಸಗಳಿಗೆ ₹55ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕದ ಅಭಿವೃದ್ಧಿ ₹55ಲಕ್ಷ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಗಳ ಕಲ್ಯಾಣ ಕಾರ್ಯಕ್ರಕ್ಕೆ ₹1.88 ಲಕ್ಷ ಹಾಗೂ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಕ್ಕೆ ₹98 ಸಾವಿರ ವೆಚ್ಚವಾಗಬಹುದೆಂದು ನೀರಿಕ್ಷಿಸಲಾಗಿದೆ ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಎಂಜಿನಿಯರ್ ಅಶ್ವಿನಿ, ಲೆಕ್ಕಾಧಿಕಾರಿ ಉಷಾ ಉಪಸ್ಥಿತರಿದ್ದರು.