ಸಾರಾಂಶ
ನರಸಿಂಹಸ್ವಾಮಿ ಅವರು ತಮ್ಮ ಪತ್ನಿ ಗಂಗಮ್ಮ ಅವರ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಸ್ಥಾಪಿಸಿ ಪ್ರತಿವರ್ಷ ಸಾಹಿತ್ಯ ಕಾರ್ಯಕ್ರಮವೊಂದನ್ನು ಆಯೋಜಿಸಲು 18 ವರ್ಷಗಳ ಹಿಂದೆಯೇ ಒತ್ತಾಸೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಇಲ್ಲಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ. ರಾಜ್‌ಕುಮಾರ್ ಕಲಾ ಮಂದಿರ (ಪುರಭವನ) ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ನುಡಿನಮನ ಸಲ್ಲಿಸಲಾಯಿತು.ಬೆಂ.ಗ್ರಾ. ಜಿಲ್ಲಾ ಕಸಾಪ ಕಾರ್ಯದರ್ಶಿ ಪ್ರೊ.ರವಿಕಿರಣ್ ಮಾತನಾಡಿ, ತಾಲೂಕಿನ ಅಭಿವೃದ್ಧಿ ಕಾರ್ಯಗಳೊಂದಿಗೆ ಕನ್ನಡಪರವಾದ ಚಿಂತನೆಯನ್ನೂ ನರಸಿಂಹಸ್ವಾಮಿ ಹೊಂದಿದ್ದರು. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕೆ ಒತ್ತಾಯಿಸಿ ನಡೆದ ರೈಲು ತಡೆ ಪ್ರತಿಭಟನೆಯಲ್ಲಿ ನ್ಯಾಯಾಲಯ ಪ್ರಕರಣವನ್ನೂ ಎದುರಿಸಿದ್ದರು. ಹಲವು ಸಾಹಿತಿ, ಕಲಾವಿದರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಎಂದು ಸ್ಮರಿಸಿದರು.ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ನರಸಿಂಹಸ್ವಾಮಿ ಅವರು ತಮ್ಮ ಪತ್ನಿ ಗಂಗಮ್ಮ ಅವರ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಸ್ಥಾಪಿಸಿ ಪ್ರತಿವರ್ಷ ಸಾಹಿತ್ಯ ಕಾರ್ಯಕ್ರಮವೊಂದನ್ನು ಆಯೋಜಿಸಲು 18 ವರ್ಷಗಳ ಹಿಂದೆಯೇ ಒತ್ತಾಸೆ ನೀಡಿದ್ದಾರೆ ಎಂದು ತಿಳಿಸಿದರು.ತಾ.ಕಸಾಪ ಮಾಜಿ ಕಾರ್ಯದರ್ಶಿ ಜ್ಯೋತಿಕುಮಾರ್, ಹೋಬಳಿ ಅಧ್ಯಕ್ಷರಾದ ಮುನಿವೀರಪ್ಪ, ದಾದಾಪೀರ್, ಕೋಶಾಧ್ಯಕ್ಷ ಸುರೇಶ್, ಪ್ರತಿನಿಧಿ ಸಫೀರ್, ಹಣಬೆ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಅಣ್ಣಯ್ಯ, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಕಲಾವಿದರಾದ ಮಲ್ಲೇಶ್, ಕುಮಾರ್ ಭಾಗವಹಿಸಿದ್ದರು.ಫೋಟೋ-16ಕೆಡಿಬಿಪಿ6- ದೊಡ್ಡಬಳ್ಳಾಪುರದಲ್ಲಿ ಕಸಾಪ ನೇತೃತ್ವದಲ್ಲಿ ಮಾಜಿ ಶಾಸಕ ಜೆ. ನರಸಿಂಹಸ್ವಾಮಿ ಅವರಿಗೆ ಸಂತಾಪ, ನುಡಿನಮನ ಸಲ್ಲಿಸಲಾಯಿತು.