ಸಾರಾಂಶ
ನರಸಿಂಹರಾಜಪುರ, ಭಾರತೀಯ ಶೈಕ್ಷಣಿಕ ವ್ಯವಸ್ಥೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳು ತಮ್ಮದೇ ಆದ ಕೊಡುಗೆ ನೀಡಿದ್ದರು ಎಂದು ಕುದುರೆಗುಂಡಿ ಕಾಫಿ ಬೆಳೆ ಗಾರ ದೀಪಕ್ ತಿಳಿಸಿದರು.
ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಭಾರತೀಯ ಶೈಕ್ಷಣಿಕ ವ್ಯವಸ್ಥೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳು ತಮ್ಮದೇ ಆದ ಕೊಡುಗೆ ನೀಡಿದ್ದರು ಎಂದು ಕುದುರೆಗುಂಡಿ ಕಾಫಿ ಬೆಳೆ ಗಾರ ದೀಪಕ್ ತಿಳಿಸಿದರು.
ಕುದುರೆಗುಂಡಿ ಪ್ರೌಢ ಶಾಲಾ ಆವರಣದಲ್ಲಿ ಹಳೇ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಬಾಳಗಡಿ ಕ್ಲಸ್ಟರ್ ನ ಆಹ್ವಾನಿತ 11 ಪ್ರೌಢ ಶಾಲೆ ವಿದ್ಯಾರ್ಥಿ ಗಳಿಗೆ ಬ್ರಹ್ಮಶ್ರೀ ನಾರಾಯಣ ಗುರು ಶಿಕ್ಷಣ ಪ್ರವರ್ತಕ ಎಂಬ ವಿಷಯದ ಬಗ್ಗೆ ನಡೆದ ಭಾಷಣ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಭೆ ಅಧ್ಯಕ್ಷತೆ ವಹಿಸಿದ್ದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನುಗ್ಗಿ ಮಂಜುನಾಥ್ ಮಾತನಾಡಿ, ಮಕ್ಕಳಿಗೆ ದೇಶದ ಶಿಕ್ಷಣಕ್ಕೆ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳ ಪರಿಚವಾಗಬೇಕಾಗಿದೆ. ಮಕ್ಕಳು ಶಿಕ್ಷಣದ ಬಗ್ಗೆ ಸೃಜನಾತ್ಮಕವಾಗಿ ಚಿಂತಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.ಅತಿಥಿಗಳಾಗಿ ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಪ್ರವೀಣ ಶೆಟ್ಟಿ, ಸದಸ್ಯ ಪಾಪಣ್ಣ, ಲ್ಯಾಂಪ್ ಸೊಸೈಟಿ ನಿರ್ದೇಶಕ ಕೆಸುವೆ ಚಂದ್ರಶೇಖರ್, ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ಪ್ರಕಾಶಪೂಜಾರಿ, ಕುದುರೆಗುಂಡಿ ಸಹಿಪ್ರಾ ಶಾಲೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೆಂಕಟೇಶ್, ಕುದುರೆಗುಂಡಿ ಮುಖಂಡ ಹೇಮಂತ ಶೆಟ್ಟಿ, ತೀರ್ಪುಗಾರರಾಗಿದ್ದ ಕೊಪ್ಪ ಶಿಕ್ಷಣ ಇಲಾಖೆ ಸುಚಿತ್ ಚಂದ್ರ, ಅರಣ್ಯ ಇಲಾಖೆ ರಮೇಶ್,ಶಿಕ್ಷಕ ಜಗದೀಶ್ ಇದ್ದರು.
ಕೊಪ್ಪ ವೆಂಕಟೇಶ್ವರ ವಿದ್ಯಾಮಂದಿರದ ಶಾಲೆ ವಿದ್ಯಾರ್ಥಿ ಪ್ರಥಮ, ನಚಿಕೇತ ಶಾಲೆ ವಿದ್ಯಾರ್ಥಿಗಳು ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದುಕೊಂಡರು. ಹಳೇ ವಿದ್ಯಾರ್ಥಿ ಸಂಘದವರು ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿದರು.