ಸಾರಾಂಶ
ಇಳಕಲ್ಲ ನಗರದ ಚಿಕ್ಕ ಮಕ್ಕಳ ವೈದ್ಯ ಡಾ. ಪವನ ದರಕ ಅವರ ಅಮೋಘ ಸೇವೆ ಕಂಡು ಬೆಂಗಳೂರಿನ ನಾರಾಯಣ ಹೃದಯಾಲಯದವರು ಸಮಾಜ ಸೇವೆಗೆ ಕೋಡುವ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದರು.
ಇಳಕಲ್ಲ: ನಗರದ ಚಿಕ್ಕ ಮಕ್ಕಳ ವೈದ್ಯ ಡಾ. ಪವನ ದರಕ ಅವರ ಅಮೋಘ ಸೇವೆ ಕಂಡು ಬೆಂಗಳೂರಿನ ನಾರಾಯಣ ಹೃದಯಾಲಯದವರು ಸಮಾಜ ಸೇವೆಗೆ ಕೋಡುವ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದರು.
ಇಳಕಲ್ಲಿನ ಈ ಭಾಗದಲ್ಲಿ ಥೆಲೇಸಿಮಿಯಾ ಎಂಬ ಭಯಂಕರ ರೋಗದಿಂದ ಮಕ್ಕಳು ಸಾವನಪ್ಪುತ್ತಿದ್ದು, ಆ ರೋಗ ಬಂದ ಅನೇಕ ಚಿಕ್ಕಮಕ್ಕಳು ರೋಗ ನಿಯಂತ್ರಣಕ್ಕಾಗಿ ₹ ೨೦ ಲಕ್ಷ ಖರ್ಚು ಮಾಡಲು ಆಗದೆ ಮಕ್ಕಳು ಸಾವನ್ನಪ್ಪುತ್ತಿದ್ದರು. ಇದನ್ನು ಮನಗೊಂಡ ಡಾ.ಪವನ ದರಕ ಅವರು ರಾಮಾನುಜಾಚಾರ್ಯ ಫೌಂಡೇಶನ್ ಎಂಬ ಸಂಸ್ಥೆಯನ್ನು ತಮ್ಮ ಸಮಾಜದ ಗೇಳೆಯರೊಂದಿಗೆ ಸ್ತಾಪಿಸಿ ಆ ಸಂಸ್ಥೆಯ ಸಹಾಯದೊಂದಿಗೆ ಥೇಲೆಸಿಮಿಯಾ ರೋಗ ಬಂದ ಬಡ ಮಕ್ಕಳಿಗೆ ಉಚಿತವಾಗಿ ಆರ್ಥಿಕ ಸಹಾಯ ಮಾಡುವುದಲ್ಲದೆ ಅವರ ಸಂಪೂರ್ಣ ಆರೋಗ್ಯವಾಗುವವರೆಗೂ ಆ ಮಗುವಿನ ಆರೋಗ್ಯ ರಕ್ಷಣೆಯ ಜವಾಬ್ದಾರಿ ಮಾಡುತ್ತಾರೆ. ಹಿಗಾಗಿ ಈ ಭಾಗದ ಅನೇಕ ಬಡ ಕುಟುಂಬಗಳು ಈ ಸಹಾಯಕ್ಕೆ ಹರ್ಷ ವ್ಯಕ್ತ ಪಡಿಸಿದ್ದಾರೆ. ಈ ಎಲ್ಲ ಘಟನೆಗಳನ್ನು ಕಂಡ ಬೆಂಗಳೂರಿನ ನಾರಾಯಣ ಹೃದಯಾಲಯ ಇವರು ಡಾ.ಪವನ ದಂಪತಿಗೆ ಪ್ರಶಸ್ತಿ ಕೊಟ್ಟು ಸತ್ಕರಿಸಿದೆ. ಡಾ.ಪವನ ದರಕ ಅವರಿಗೆ ದೊರೆತ ಪ್ರಶಸ್ತಿಗೆ ಇಳಕಲ್ಲ ನಗರದ ಅನೇಕ ಸಂಘ ಸಂಸ್ಥೆಯವರು ಹಾಗೂ ಮಾಹೇಶ್ವರಿ ಸಮಾಜದವರು ಅಭಿನಂದಿಸಿದ್ದಾರೆ.